AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RCB: ಕೆಕೆಆರ್​ ಆಟಗಾರರಿಗೆ ಕೊರೊನಾ, ಇಂದಿನ ಪಂದ್ಯ ರದ್ದು! ಬಯೋ ಬಬಲ್​ನಲ್ಲಿದ್ದರೂ ಕೊರೊನಾ ತಗುಲಿದ್ದು ಹೇಗೆ?

KKR vs RCB Reschedule: ಕೆಕೆಆರ್​ ತಂಡದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್ ಅವರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ.

KKR vs RCB: ಕೆಕೆಆರ್​ ಆಟಗಾರರಿಗೆ ಕೊರೊನಾ, ಇಂದಿನ ಪಂದ್ಯ ರದ್ದು! ಬಯೋ ಬಬಲ್​ನಲ್ಲಿದ್ದರೂ ಕೊರೊನಾ ತಗುಲಿದ್ದು ಹೇಗೆ?
ವರುಣ್ ಚಕ್ರವರ್ತಿ ( ಎಡದಿಂದ ಎರಡನೇಯವರು), ಸಂದೀಪ್ ವಾರಿಯರ್ (ಬಲದಿಂದ ಎರಡನೇಯವರು)
ಪೃಥ್ವಿಶಂಕರ
|

Updated on:May 03, 2021 | 3:00 PM

Share

ಇಂದು ಅಹಮದಾಬಾದ್‌ನಲ್ಲಿ ನಡೆಯಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2021 ಪಂದ್ಯವನ್ನು ಮುಂದೂಡಲಾಗಿದೆ. ಇಬ್ಬರು ಕೆಕೆಆರ್ ಆಟಗಾರರು ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಕ್ರಿಕೆಟ್ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಮೇ 30 ಕ್ಕೆ ಕೊನೆಗೊಳ್ಳುವ ಪಂದ್ಯಾವಳಿಯಲ್ಲಿ ಪಂದ್ಯ ಮತ್ತೊಂದು ದಿನ ನಡೆಯಲಿದೆ. ಕೆಕೆಆರ್​ ತಂಡದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗದ ಬೌಲರ್ ಸಂದೀಪ್ ವಾರಿಯರ್ ಅವರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಇಬ್ಬರು ಆಟಗಾರರು ಕೊರೊನಾ ಪಾಸಿಟಿವ್​ ಆದ ಕಾರಣ, ಉಳಿದ ಆಟಗಾರರು ತೊಂದರೆಗೀಡಾಗಬಹುದು ಎಂಬ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಪಂದ್ಯಾವಳಿಯಲ್ಲಿ ಬಯೋ ಬಬಲ್ ನಿರ್ವಹಣೆಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ವರುಣ್ ಚಕ್ರವರ್ತಿ ಭುಜದ ಗಾಯವೇ ಕಾರಣವಾಯ್ತ? ಈ ಹಿಂದೆ ತಂಡಗಳು ಮತ್ತು ಆಟಗಾರರಿಗೆ ಬಿಸಿಸಿಐ ಪತ್ರ ಬರೆದಿತ್ತು. ಐಪಿಎಲ್ ಬಯೋ ಬಬಲ್ ಸುರಕ್ಷಿತವಾಗಿದೆ ಎಂದು ಆಗ ಹೇಳಲಾಯಿತು. ಪ್ರತಿ ಎರಡು ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆಯನ್ನು ನಡೆಸಲು ಮಂಡಳಿಯು ಮಾಹಿತಿ ನೀಡಿತ್ತು. ಅಲ್ಲದೆ, ಹೊರಗಿನಿಂದ ಆಹಾರವನ್ನು ಖರೀದಿಸಲು ನಿಷೇಧ ಹೇರಲಾಯಿತು. ಅಂತಹ ಪರಿಸ್ಥಿತಿಯಲ್ಲಿ, ಕೆಕೆಆರ್ ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬುದು ಕಳವಳಕಾರಿ ವಿಷಯವಾಗಿದೆ. ಇದು ನಿರ್ಲಕ್ಷ್ಯವನ್ನೂ ತೋರಿಸುತ್ತದೆ. ಭುಜದ ಗಾಯದಿಂದಾಗಿ ವರುಣ್ ಚಕ್ರವರ್ತಿಯನ್ನು ಸ್ಕ್ಯಾನ್‌ಗಾಗಿ ಬಯೋ ಬಬಲ್‌ನಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಈ ಅವಧಿಯಲ್ಲಿ, ಚಕ್ರವರ್ತಿಗೆ ಕೊರೊನಾ ತಗುಲಿರಬಹುದು ಎಂದು ಹೇಳಲಾಗಿದೆ. ಜೊತೆಗೆ ಸಂದೀಪ್ ವಾರಿಯರ್ ಕೂಡ ವರುಣ್​ ಅವರಿಂದ ಕೊರೊನಾ ಸೋಂಕಿಗೆ ಒಳಗಾಗಿರಬಹುದು ಎಂದು ಊಹಿಸಲಾಗಿದೆ.

ಸಂದೀಪ್ ವಾರಿಯರ್ ಐಪಿಎಲ್ 2021 ರಲ್ಲಿ ಇನ್ನೂ ಯಾವುದೇ ಪಂದ್ಯಗಳನ್ನು ಆಡಿಲ್ಲ. ಚಕ್ರವರ್ತಿ ಎಲ್ಲಾ ಕೆಕೆಆರ್ ಪಂದ್ಯಗಳಲ್ಲಿ ಒಂದು ಭಾಗವಾಗಿದ್ದಾರೆ. ಅವರು ಇಲ್ಲಿಯವರೆಗೆ ಏಳು ವಿಕೆಟ್ ಪಡೆದಿದ್ದಾರೆ ಮತ್ತು ಕೆಕೆಆರ್ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದಾರೆ.

ಎರಡನೇ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಇಬ್ಬರು ಕೆಕೆಆರ್ ಸದಸ್ಯರು ಕೊರೊನಾ ಪಾಸಿಟಿವ್​ ಆಗಿದ್ದಾರೆ ಎಂದು ಬಿಸಿಸಿಐ ಮೂಲವು ತಿಳಿಸಿದೆ. ಆದರೆ ಅವರ ಎರಡನೇ ಪರೀಕ್ಷೆಯ ವರದಿಯು ಇನ್ನೂ ಬಂದಿಲ್ಲ. ಹೀಗಾಗಿ ಆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದೆ. ಇದರಿಂದ ಅವರ ಎರಡನೇ ವರದಿ ಕೊರೊನಾ ನೆಗೆಟಿವ್​ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದಿದೆ. ದೆಹಲಿ ತಂಡದ ಎನ್ರಿಕ್ ನಾರ್ಕಿಯಾ ಅವರು ದಕ್ಷಿಣ ಆಫ್ರಿಕಾದಿಂದ ಬಂದ ನಂತರ ಕೊರೊನಾ ಪಾಸಿಟಿವ್​ ಎಂದು ಕಂಡುಬಂದರು. ಆದರೆ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರ ವರದಿ ನೆಗೆಟಿವ್ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರ ಮೊದಲ ವರದಿಯ ಫಲಿತಾಂಶವು ತಪ್ಪಾಗಿದೆ ಎಂದು ತಿಳಿದುಬಂದಿದೆ.

ಸಮಾಧಾನಕಾರ ವಿಷಯವೆನೆಂದರೆ, ಚಕ್ರವರ್ತಿ ಮತ್ತು ವಾರಿಯರ್ ಹೊರತುಪಡಿಸಿ, ಕೆಕೆಆರ್‌ನ ಇತರ ಎಲ್ಲ ಆಟಗಾರರ ಪರೀಕ್ಷೆಯು ನಕಾರಾತ್ಮಕವಾಗಿದೆ. ಆದರೆ ಈ ಇಬ್ಬರು ಆಟಗಾರರ ಎರಡನೇ ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ಇಂದು ಸಂಜೆಯವರೆಗೆ ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯ ಆಡಿಸುವುದು ಸರಿ ಅಲ್ಲ ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Published On - 2:55 pm, Mon, 3 May 21

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ