AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನು ಭಾಕರ್, ಡಿ ಗುಕೇಶ್ ಸೇರಿದಂತೆ 36 ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪ್ರಧಾನ

National Sports Awards 2024 List: 2024 ರಲ್ಲಿನ ಅತ್ಯುತ್ತಮ ಕ್ರೀಡಾ ಸಾಧನೆಗಾಗಿ 32 ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ನೀಡಲಾಗಿದೆ. ಜನವರಿ 17 ರಂದು ನಡೆದ ಸಮಾರಂಭದ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಹಾಗೂ ಭಾರತೀಯ ಹಾಕಿ ತಂಡದ ನಾಯಕ ನಾಯಕ ಹರ್ಮನ್‌ಪ್ರೀತ್ ಸಿಂಗ್ ಸೇರಿದಂತೆ 32 ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಮನು ಭಾಕರ್, ಡಿ ಗುಕೇಶ್ ಸೇರಿದಂತೆ 36 ಕ್ರೀಡಾಪಟುಗಳಿಗೆ ಕ್ರೀಡಾ ಪ್ರಶಸ್ತಿ ಪ್ರಧಾನ
Manu Bhaker
ಝಾಹಿರ್ ಯೂಸುಫ್
|

Updated on: Jan 18, 2025 | 7:30 AM

Share

ದೇಶದ 32 ಕ್ರೀಡಾಪಟುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ, ಡಬಲ್ ಒಲಿಂಪಿಕ್ ಪದಕ ವಿಜೇತೆ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್, ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಮತ್ತು ಪುರುಷರ ಹಾಕಿ ತಂಡ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಹೈಜಂಪರ್ ಪ್ರವೀಣ್ ಕುಮಾರ್ ಅವರು ದೇಶದ ಅತ್ಯುನ್ನತ ಕ್ರೀಡಾ ಗೌರವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನು ಅನ್ನು ರಾಣಿ ಸೇರಿದಂತೆ 32 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರೆ, ಐವರು ಕೋಚ್ ಗಳಿಗೆ ದೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದವರು:

  1. ಡಿ ಗುಕೇಶ್ (ಚೆಸ್)
  2. ಹರ್ಮನ್‌ಪ್ರೀತ್ ಸಿಂಗ್ (ಹಾಕಿ)
  3. ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್)
  4. ಮನು ಭಾಕರ್ (ಶೂಟಿಂಗ್).

ಅರ್ಜುನ ಪ್ರಶಸ್ತಿ ಸ್ವೀಕರಿಸಿದವರು:

  1. ಜ್ಯೋತಿ ಯರ್ರಾಜಿ (ಅಥ್ಲೆಟಿಕ್ಸ್)
  2. ಅನ್ನು ರಾಣಿ (ಅಥ್ಲೆಟಿಕ್ಸ್)
  3. ನೀತು (ಬಾಕ್ಸಿಂಗ್)
  4. ಸಾವೀಟಿ (ಬಾಕ್ಸಿಂಗ್)
  5. ವಂತಿಕಾ ಅಗರವಾಲ್ (ಚೆಸ್)
  6. ಸಲೀಮಾ ಟೆಟೆ (ಹಾಕಿ)
  7. ಅಭಿಷೇಕ್ (ಹಾಕಿ)
  8. ಸಂಜಯ್ (ಹಾಕಿ)
  9. ಜರ್ಮನ್ಪ್ರೀತ್ ಸಿಂಗ್ (ಹಾಕಿ)
  10. ಸುಖಜೀತ್ ಸಿಂಗ್ (ಹಾಕಿ)
  11. ರಾಕೇಶ್ ಕುಮಾರ್ (ಪ್ಯಾರಾ-ಆರ್ಚರಿ)
  12. ಪ್ರೀತಿ ಪಾಲ್ (ಪ್ಯಾರಾ-ಅಥ್ಲೆಟಿಕ್ಸ್)
  13. ಜೀವನಜಿ ದೀಪ್ತಿ (ಪ್ಯಾರಾ-ಅಥ್ಲೆಟಿಕ್ಸ್)
  14. ಅಜೀತ್ ಸಿಂಗ್ (ಪ್ಯಾರಾ-ಅಥ್ಲೆಟಿಕ್ಸ್)
  15. ಸಚಿನ್ ಸರ್ಜೆರಾವ್ ಖಿಲಾರಿ (ಪ್ಯಾರಾ-ಅಥ್ಲೆಟಿಕ್ಸ್)
  16. ಧರಂಬೀರ್ (ಪ್ಯಾರಾ-ಅಥ್ಲೆಟಿಕ್ಸ್)
  17. ಪ್ರಣವ್ ಸೂರ್ಮಾ (ಪ್ಯಾರಾ-ಅಥ್ಲೆಟಿಕ್ಸ್)
  18. ಎಚ್. ಸೆಮಾ (ಪ್ಯಾರಾ ಅಥ್ಲೆಟಿಕ್ಸ್)
  19. ಸಿಮ್ರಾನ್ (ಪ್ಯಾರಾ-ಅಥ್ಲೆಟಿಕ್ಸ್)
  20. ನವದೀಪ್ (ಪ್ಯಾರಾ-ಅಥ್ಲೆಟಿಕ್ಸ್)
  21. ನಿತೇಶ್ ಕುಮಾರ್ (ಪ್ಯಾರಾ-ಬ್ಯಾಡ್ಮಿಂಟನ್)
  22. ತುಳಸಿಮತಿ ಮುರುಗೇಶನ್ (ಪ್ಯಾರಾ-ಬ್ಯಾಡ್ಮಿಂಟನ್)
  23. ನಿತ್ಯ ಶ್ರೀ ಸುಮತಿ ಶಿವನ್ (ಪ್ಯಾರಾ-ಬ್ಯಾಡ್ಮಿಂಟನ್)
  24. ಮನೀಶಾ ರಾಮದಾಸ್ (ಪ್ಯಾರಾ-ಬ್ಯಾಡ್ಮಿಂಟನ್)
  25. ಕಪಿಲ್ ಪರ್ಮಾರ್ ( ಪ್ಯಾರಾ ಜೂಡೋ)
  26. ಮೋನಾ ಅಗರ್ವಾಲ್ (ಪ್ಯಾರಾ-ಶೂಟಿಂಗ್)
  27. ರುಬಿನಾ ಫ್ರಾನ್ಸಿಸ್ (ಪ್ಯಾರಾ-ಶೂಟಿಂಗ್)
  28. ಸ್ವಪ್ನಿಲ್ ಸುರೇಶ್ ಕುಸಾಲೆ (ಶೂಟಿಂಗ್)
  29. ಸರಬ್ಜೋತ್ ಸಿಂಗ್ (ಶೂಟಿಂಗ್)
  30. ಅಭಯ್ ಸಿಂಗ್ (ಸ್ಕ್ವಾಷ್)
  31. ಸಜನ್ ಪ್ರಕಾಶ್ (ಈಜು)
  32. ಅಮನ್ (ಕುಸ್ತಿ).

ಅರ್ಜುನ ಪ್ರಶಸ್ತಿ ಸ್ವೀಕರಿಸಿದವರು (ಜೀವಮಾನ ಶ್ರೇಷ್ಠ ಸಾಧನೆ):

  • ಸುಚಾ ಸಿಂಗ್ (ಅಥ್ಲೆಟಿಕ್ಸ್)
  • ಮುರಳಿಕಾಂತ್ ರಾಜಾರಾಮ್ ಪೇಟ್ಕರ್ (ಪ್ಯಾರಾ-ಈಜು).

ದ್ರೋಣಾಚಾರ್ಯ ಪ್ರಶಸ್ತಿ (ಕೋಚ್) ಸ್ವೀಕರಿಸಿದವರು:

  •  ಸುಭಾಷ್ ರಾಣಾ (ಪ್ಯಾರಾ-ಶೂಟಿಂಗ್)
  • ದೀಪಾಲಿ ದೇಶಪಾಂಡೆ (ಶೂಟಿಂಗ್)
  • ಸಂದೀಪ್ ಸಾಂಗ್ವಾನ್ (ಹಾಕಿ)
  • ಎಸ್ ಮುರಳೀಧರನ್ (ಬ್ಯಾಡ್ಮಿಂಟನ್)
  • ಅರ್ಮಾಂಡೋ ಆಗ್ನೆಲೊ ಕೊಲಾಕೊ (ಫುಟ್‌ಬಾಲ್)

ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ:  ಭಾರತದ ದೈಹಿಕ ಶಿಕ್ಷಣ ಪ್ರತಿಷ್ಠಾನ ಮೌಲಾನಾ ಅಬುಲ್ ಕಲಾಮ್ (MAKA).

ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಉನ್ನತ ಸಾಧನೆ ಟ್ರೋಫಿ :

  • ಚಂಡೀಗಢ ವಿಶ್ವವಿದ್ಯಾಲಯ
  • ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ
  • ಗುರು ನಾನಕ್ ದೇವ್ ವಿಶ್ವವಿದ್ಯಾಲಯ.