AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬರಲು ರೆಡಿ ಆದ ‘ಪರಾಶಕ್ತಿ’; ಎಲ್ಲಿ? ಯಾವಾಗ?

ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ಚಿತ್ರ ಕೆಟ್ಟ ವಿಮರ್ಶೆಗಳ ನಡುವೆಯೂ 100 ಕೋಟಿ ಗಳಿಸಿ, ಈಗ OTTಗೆ ಕಾಲಿಡುತ್ತಿದೆ. 1965ರ ಹಿಂದಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯುಳ್ಳ ಈ ಚಿತ್ರ ಫೆಬ್ರವರಿ 7ರಿಂದ Zee5 ನಲ್ಲಿ ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ. ನಿರ್ದೇಶಕಿ ಸುಧಾ ಕೊಂಗರ ಅವರ ಈ ಚಿತ್ರದಲ್ಲಿ ಶ್ರೀಲೀಲಾ ಮತ್ತು ರಾಣಾ ದಗ್ಗುಬಾಟಿ ಸಹ ಇದ್ದಾರೆ.

ಒಟಿಟಿಗೆ ಬರಲು ರೆಡಿ ಆದ ‘ಪರಾಶಕ್ತಿ’; ಎಲ್ಲಿ? ಯಾವಾಗ?
ಪರಾಶಕ್ತಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:Feb 06, 2026 | 8:18 AM

Share

ಕಾಲಿವುಡ್ ಹೀರೋ ಶಿವಕಾರ್ತಿಕೇಯನ್ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ವಿಭಿನ್ನ ಕಂಟೆಂಟ್ ಹೊಂದಿರುವ ಚಿತ್ರಗಳನ್ನು ಮಾಡುವ ಮೂಲಕ ವಿಶೇಷ ಹೆಸರು ಮಾಡಿದ್ದಾರೆ. ಇತ್ತೀಚೆಗೆ, ಸಂಕ್ರಾಂತಿ ಹಬ್ಬದ ಸಮಯದಲ್ಲಿ, ಅವರು ‘ಪರಾಶಕ್ತಿ’ ಚಿತ್ರದೊಂದಿಗೆ (Parashkati) ಪ್ರೇಕ್ಷಕರ ಮುಂದೆ ಬಂದರು. ಆದರೆ ಕೆಟ್ಟ ವಿಮರ್ಶೆ ಪಡೆದಿದ್ದರಿಂದ ಈ ಚಿತ್ರಕ್ಕೆ ಹಿನ್ನಡೆ ಆಯಿತು. ಈ ಸಿನಿಮಾ ಈಗ ಒಟಿಟಿಗೆ ಕಾಡಲಿಡುತ್ತಿದೆ.

ಈ ಚಿತ್ರವು ಥಿಯೇಟರ್​ನಲ್ಲಿ ತಮಿಳಿನಲ್ಲಿ ಮಾತ್ರ ಬಿಡುಗಡೆಯಾಯಿತು. ಆದರೆ, ಒಟಿಟಿಯಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿದೆ. ನಿರ್ದೇಶಕಿ ಸುಧಾ ಕೊಂಗರ ನಿರ್ದೇಶಿಸಿದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಮತ್ತೊಂದೆಡೆ, ಜನನಾಯಗನ್ ಚಿತ್ರವನ್ನು ಮುಂದೂಡಿದ್ದರಿಂದ ಈ ಚಿತ್ರದ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದವು. ‘ಜನ ನಾಯಗನ್’ ವಿರುದ್ಧದ ಪಿತೂರಿ ಇದೆ ತಂಡದ ಕಿತಾಪತಿ ಎಂದು ಹೇಳಲಾಯಿತು. ಆದಾಗ್ಯೂ ‘ಪರಾಶಕ್ತಿ’ ಸಿನಿಮಾ 100 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಸಿದೆ.

ಪರಾಶಕ್ತಿ ಚಿತ್ರ ಈಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಇದು ಫೆಬ್ರವರಿ 7 ರಿಂದ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್ ಜೀ5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಚಿತ್ರ ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಪ್ರಸಾರ ಕಾಣಲಿದೆ. ಶಿವಕಾರ್ತಿಕೇಯನ್ ಈಗಾಗಲೇ ರೆಮೋ, ಪ್ರಿನ್ಸ್ ಮತ್ತು ಅಮರನ್ ಚಿತ್ರಗಳ ಮೂಲಕ ಭಾರಿ ಕ್ರೇಜ್ ಸೃಷ್ಟಿಸಿದ್ದಾರೆ. ಹೀಗಾಗಿ ಅವರ ಫ್ಯಾನ್ಸ್ ‘ಪರಾಶಕ್ತಿ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಶ್ರೀಲೀಲಾ ಇದರಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಶ್ರೀಲೀಲಾ ಈ ಚಿತ್ರದ ಮೂಲಕ ತಮಿಳಿನಲ್ಲಿ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: ‘ಪರಾಶಕ್ತಿ’ ಸಕ್ಸಸ್ ಮೀಟ್ ವೇದಿಕೆಯಲ್ಲಿ ನಾಯಕ-ನಿರ್ದೇಶಕಿ ಜಗಳ

ಈ ಚಿತ್ರವು 1965 ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿದೆ. ಆ ಸಮಯದಲ್ಲಿ, ಭಾರತೀಯ ಕೇಂದ್ರ ಸರ್ಕಾರವು ತಮಿಳರ ಮೇಲೆ ಹಿಂದಿ ಭಾಷೆಯನ್ನು ಹೇರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ಆಂದೋಲನವು ಚೆಜಿಯನ್ ಮತ್ತು ಚಿನ್ನದುರೈ ಎಂಬ ಇಬ್ಬರು ಸಹೋದರರ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಚಿತ್ರವು ಚಿತ್ರಿಸುತ್ತದೆ. ರಾಣಾ ದಗ್ಗುಬಾಟಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 am, Fri, 6 February 26