Norway Chess 2024: ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಆರ್​. ಪ್ರಜ್ಞಾನಂದ

R Paggnanandhaa: ನಾರ್ವೆ ಚೆಸ್ ಟೂರ್ನಿಗೆ ತೆರೆ ಬಿದ್ದಿದೆ. ಈ ಬಾರಿಯ ಟೂರ್ನಿಯಲ್ಲಿ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್​ಸೆನ್ ಪುರುಷರ ವಿಭಾಗದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಮಹಿಳಾ ವಿಭಾಗದಲ್ಲಿ ಚೀನಾದ ಗ್ರ್ಯಾಂಡ್ ಮಾಸ್ಟರ್ ಜು ವೆಂಜುನ್ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಯಾಗಿದ್ದಾರೆ.

Norway Chess 2024: ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ಆರ್​. ಪ್ರಜ್ಞಾನಂದ
R Paggnanandhaa
Follow us
|

Updated on:Jun 08, 2024 | 1:40 PM

ಸ್ಟಾವೆಂಜರ್‌ನಲ್ಲಿ ನಡೆದ ನಾರ್ವೆ ಚೆಸ್ ಟೂರ್ನಿಯಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್​. ಪ್ರಜ್ಞಾನಂದ (R Paggnanandhaa) 3ನೇ ಸ್ಥಾನ ಗಳಿಸಿದ್ದಾರೆ. ಶುಕ್ರವಾರ ನಡೆದ ಪ್ರತಿಷ್ಠಿತ ಟೂರ್ನಿಯ 10ನೇ ಮತ್ತು ಅಂತಿಮ ಸುತ್ತಿನಲ್ಲಿ ಹಿಕರು ನಕಮುರಾ ಅವರನ್ನು ಸೋಲಿಸಿ ತೃತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ಆರ್​. ಪ್ರಜ್ಞಾನಂದ ವಿಶ್ವದ ನಂಬರ್ 1 ಚದುರಂಗ ಚತುರ ಮ್ಯಾಗ್ನಸ್ ಕಾರ್ಲ್‌ಸೆನ್ ಅವರಿಗೆ ಸೋಲುಣಿಸಿದ್ದರು. ಕ್ಲಾಸಿಕಲ್ ಗೇಮ್​ನ ಮೂರನೇ ಸುತ್ತಿನಲ್ಲಿ ಕಾರ್ಲ್​ಸೆನ್ ವಿರುದ್ಧ ಗೆಲ್ಲುವ ಮೂಲಕ ಪ್ರಜ್ಞಾನಂದ ಅಗ್ರಸ್ಥಾನಕ್ಕೇರಿದ್ದರು.

ಇದಾದ ಬಳಿಕ ವಿಶ್ವದ ಎರಡನೇ ಶ್ರೇಯಾಂಕಿತ ಫ್ಯಾಬಿಯಾನೊ ಕರುವಾನಾ ಅವರ ವಿರುದ್ಧ ಗೆದ್ದು ಬೀಗಿದ್ದರು. ಇನ್ನು ಅಲಿರೆಜಾ ಫಿರೋಜ್ಜಾ ವಿರುದ್ಧ ಡ್ರಾ ಸಾಧಿಸಲು ಯಶಸ್ವಿಯಾದರೂ, 6ನೇ ಸುತ್ತಿನ ಬಳಿಕ ಆರ್​. ಪ್ರಜ್ಞಾನಂದ ಅಂಕ ಪಟ್ಟಿಯಲ್ಲಿ ಹಿಂದೆ ಉಳಿದರು. ಇದೇ ವೇಳೆ ಮ್ಯಾಗ್ನಸ್ ಕಾರ್ಲ್‌ಸೆನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು.

ಕಾರ್ಲ್​ಸೆನ್ ನಾರ್ವೆ ಚೆಸ್ ಚಾಂಪಿಯನ್​:

ನಾರ್ವೆ ಚೆಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಮ್ಯಾಗ್ನಸ್ ಕಾರ್ಲ್​ಸೆನ್ ಮತ್ತು ನಂಬರ್ 2 ಚೆಸ್ ಚತುರ ಫ್ಯಾಬಿಯಾನೊ ಕರುವಾನಾ ಮುಖಾಮುಖಿಯಾಗಿದ್ದರು. ದೀರ್ಘ ಸಮಯದವರೆಗೆ ನಡೆದ ಈ ಚುದುರಂಗದಾಟವು ಅಂತಿಮವಾಗಿ ಡ್ರಾನಲ್ಲಿ ಕೊನೆಗೊಂಡಿತು. ಹೀಗಾಗಿ ಕ್ಲಾಸಿಕಲ್ ಗೇಮ್​ನ ಫಲಿತಾಂಶಕ್ಕಾಗಿ ಟೈ ಬ್ರೇಕರ್​ನ ಮೊರೆ ಹೋಗಲಾಯಿತು. ಟೈ ಬ್ರೇಕರ್​ನನಲ್ಲಿ ಕರುವಾನಾಗೆ ಸೋಲುಣಿಸಿ ಅಗ್ರಸ್ಥಾನದೊಂದಿಗೆ ಮ್ಯಾಗ್ನಸ್ ಕಾರ್ಲ್​ಸೆನ್ ಚಾಂಪಿಯನ್ ಪಟ್ಟ ಅಲಂಕರಿಸಿದರು.

ನಾರ್ವೆ ಚೆಸ್ ಟೂರ್ನಿ ಪಾಯಿಂಟ್ಸ್ (ಪುರುಷರ ವಿಭಾಗ):

 1. 🥇ಮ್ಯಾಗ್ನಸ್ ಕಾರ್ಲ್‌ಸೆನ್ – 17.5 ಪಾಯಿಂಟ್ಸ್​
 2. 🥈ಹಿಕಾರು ನಕಮುರಾ- 15.5 ಪಾಯಿಂಟ್ಸ್
 3. 🥉ಆರ್. ಪ್ರಜ್ಞಾನಂದ- 14.5 ಪಾಯಿಂಟ್ಸ್​
 4. ಅಲಿರೆಜಾ ಫಿರೋಜ್ಜಾ- 13.5 ಪಾಯಿಂಟ್ಸ್
 5. ಲೈರೆನ್ ಕರುವಾನಾ- 11.5 ಪಾಯಿಂಟ್ಸ್
 6. ಡಿಂಗ್ ಲಿರೆನ್- 7 ಪಾಯಿಂಟ್ಸ್

ಮಹಿಳಾ ವಿಭಾಗದಲ್ಲಿ ಭಾರತದ ಆರ್​. ವೈಶಾಲಿ ಹಾಗೂ ಕೊನೇರು ಹಂಪಿ ಉತ್ತಮ ಪ್ರದರ್ಶನ ನೀಡಿದರೂ ಫೈನಲ್ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಾಗ್ಯೂ ಇಬ್ಬರು ಸಹ ಟಾಪ್-5 ನಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: R. Praggnanandhaa: ವಿಶ್ವ ಚಾಂಪಿಯನ್​ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಆರ್​. ಪ್ರಜ್ಞಾನಂದ

ಇನ್ನು ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಚೀನಾದ ಗ್ರ್ಯಾಂಡ್ ಮಾಸ್ಟರ್ ಜು ವೆಂಜುನ್ 19 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾರ್ವೆ ಚೆಸ್ ಟೂರ್ನಿ ಪಾಯಿಂಟ್ಸ್ (ಮಹಿಳಾ ವಿಭಾಗ):

 1. 🥇ಜು ವೆಂಜುನ್- 19 ಅಂಕಗಳು
 2. 🥈ಅನ್ನಾ ಮುಜಿಚುಕ್- 16 ಅಂಕಗಳು
 3. 🥉ಲೀ ಟಿಂಗ್ಜಿ- 14.5 ಅಂಕಗಳು
 4. ವೈಶಾಲಿ ಆರ್- 12.5 ಅಂಕಗಳು
 5. ಕೊನೇರು ಹಂಪಿ- 10 ಅಂಕಗಳು
 6. ಪಿಯಾ ಕ್ರಾಮ್ಲಿಂಗ್- 8 ಅಂಕಗಳು

Published On - 1:20 pm, Sat, 8 June 24

ತಾಜಾ ಸುದ್ದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
ಇಟಲಿ ಶೃಂಗಸಭೆಯಲ್ಲಿ ಭಾರತದ ದೃಷ್ಟಿಕೋನ ಪ್ರಸ್ತುತಪಡಿಸಿದ ಮೋದಿ
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
‘ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡ್ತಾರೆ’; ಪೂಜೆ ಸಲ್ಲಿಸಿ ಬಾವನ ಮಾತು
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
ಮತ್ತೊಂದು ಸಾವಿಗೆ ಕಾರಣವಾದ ದರ್ಶನ್; ಕುಟುಂಬದವರ ಆಕ್ರೋಶ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
Daily Horoscope: ಈ ರಾಶಿಯವರಿಗೆ ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
ನಿಮ್ಮ ಗೋತ್ರ ತಿಳಿದುಕೊಳ್ಳುವುದು ಬಹಳ ಸುಲಭ, ವಿಡಿಯೋ ನೋಡಿ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನ
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಕೊಲೆ ಕೇಸ್​: ನಟ ದರ್ಶನ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ
ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ
ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಗೋರಕ್ಷಣೆ ಮಾಡಲು ಹೋದ ಬಜರಂಗದಳ ಕಾರ್ಯಕರ್ತನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು
ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು