ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ: ಇಲ್ಲಿದೆ ವಿಡಿಯೋ

ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ: ಇಲ್ಲಿದೆ ವಿಡಿಯೋ

ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma

Updated on: Sep 07, 2024 | 2:40 PM

ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್​​ ಒಬ್ಬರು ಕಲಾಕಾರನಾಗಿದ್ದಾರೆ. ಮ್ಯಾನೇಜರ್ ಕರ ಕೌಶಲ್ಯದಲ್ಲಿ ಸುಂದರ ಮೃಣ್ಮಯ ಗಣಪನ ವಿಗ್ರಹ ಮೂಡಿಬಂದಿದೆ. ವೃತ್ತಿಯಲ್ಲಿ ಬ್ಯಾಂಕ್ ಮೆನೇಜರ್ ಆಗಿರುವ ಕೃಷ್ಣಪ್ರಸಾದ್ ಮಣ್ಣಿನಿಂದ ಗಣಪನ ಸುಂದರ ಮೂರ್ತಿಯನ್ನು ನಿರ್ಮಿಸುವ ಕಲೆಯನ್ನು ಕರಗತ ಮಾಡಿಕೊಂಡು ತನ್ನೂರಿನ ಸೇವೆಯನ್ನು ಇಂದಿಗೂ ಮಾಡುತ್ತಿದ್ದಾರೆ. ವಿಡಿಯೋ ಇಲ್ಲಿದೆ.

ಮಂಗಳೂರು, ಸೆಪ್ಟೆಂಬರ್ 7: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬ ಸಂಭ್ರಮದಿಂದ ನೆರವೇರುತ್ತಿದೆ. ಇದೇ ವೇಳೆ, ಸುಬ್ರಹ್ಮಣ್ಯದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿ ಮೂರ್ತಿ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಕಾರಣ, ಬ್ಯಾಂಕ್ ಮ್ಯಾನೇಜರ್ ಕೃಷ್ಣಪ್ರಸಾದ್ ಇದನ್ನು ನಿರಂತರ 24 ವರ್ಷಗಳಿಂದ ತಯಾರಿಸಿಕೊಡುವುದು.

ಕಳೆದ 24 ವರ್ಷದಿಂದ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣಪ್ರಸಾದ್ ತಮ್ಮ ಸೇವಾವಧಿಯಲ್ಲಿ ಇಷ್ಟರ ವರೆಗೂ ಗಣಪತಿ ಮೂರ್ತಿ ರಚನೆಯನ್ನು ಬಿಟ್ಟುಕೊಟ್ಟಿಲ್ಲ. ಬದಲಾಗಿ ಇದು ಗಣೇಶನಿಗೆ ಮತ್ತು ತನ್ನೂರಿಗೆ ಸಲ್ಲಿಸುವ ಸೇವೆ ಎಂದು ನೆರವೇರಿಸುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಸಹ ಬ್ಯಾಂಕ್‌ಗೆ ರಜೆ ಮಾಡಿ ಹುಟ್ಟೂರಿಗೆ ಆಗಮಿಸಿ ಮೂರ್ತಿ ರಚನಾ ಕಾರ್ಯ ಮಾಡಿದ್ದಾರೆ. ಸುಬ್ರಹ್ಮಣ್ಯದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸುವ ಗಣಪತಿಯನ್ನು ಕಳೆದ 29 ವರ್ಷಗಳಿಂದ ಇವರೇ ರಚಿಸಿಕೊಡುತ್ತಿದ್ದಾರೆ. ಇದು ಇವರು ತಯಾರಿಸುವ ಅತೀ ದೊಡ್ಡ ಮಣ್ಣಿನ ಮೂರ್ತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ