Neeraj Chopra: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ: ನೀರಜ್ ಚೋಪ್ರಾಗೆ ಅಭಿನಂದನೆಗಳ ಮಹಾಪೂರ
World Athletics Championships 2022: ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ, ಯೋಗಿ ಆದಿತ್ಯನಾಥ್, ರಾಜ್ನಾಥ್ ಸಿಂಗ್ ಸೇರಿದಂತೆ ಅನೇಕರು ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಗೈದಿದ್ದ ಭಾರತದ ನೀರಜ್ ಚೋಪ್ರಾ (Neeraj Chopra) ಇದೀಗ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ (World Athletics Championships) ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ನಲ್ಲಿ ಜಯಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. 89.23 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಅಲಂಕರಿಸಿದ ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 19 ವರ್ಷಗಳ ಬಳಿಕ ಭಾರತಕ್ಕೆ ಪದಕ ಗೆದ್ದುಕೊಟ್ಟರು. ಇದಕ್ಕೂ ಮುನ್ನ 2003ರಲ್ಲಿ ಮಹಿಳೆಯರ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು. ಅದಾದ ಬಳಿಕ ಭಾರತಕ್ಕೆ (India) ಯಾವುದೇ ಪದಕ ಪಡೆದುಕೊಂಡಿರಲಿಲ್ಲ.
ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ, ಯೋಗಿ ಆದಿತ್ಯನಾಥ್, ರಾಜ್ನಾಥ್ ಸಿಂಗ್ ಸೇರಿದಂತೆ ಅನೇಕ ಕ್ರೀಡಾ ದಿಗ್ಗಜರು, ಅಭಿಮಾನಿಗಳು ಚೋಪ್ರಾ ಸಾಧನೆಯನ್ನು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು, “ನಮ್ಮ ಅತ್ಯಂತ ಪ್ರತಿಷ್ಠಿತ ಕ್ರೀಡಾಪಟುವಾದ ನೀರಜ್ ಚೋಪ್ರಾ ವಿಶೇಷ ಸಾಧನೆ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭಾರತೀಯ ಕ್ರೀಡೆಗೆ ಇದೊಂದು ವಿಶೇಷ ಕ್ಷಣ. ನೀರಜ್ ಅವರ ಮುಂಬರುವ ಪ್ರಯತ್ನಗಳಿಗೆ ಶುಭಾಶಯಗಳು,” ಎಂದು ಬರೆದುಕೊಂಡಿದ್ದಾರೆ.
A great accomplishment by one of our most distinguished athletes!
Congratulations to @Neeraj_chopra1 on winning a historic Silver medal at the #WorldChampionships. This is a special moment for Indian sports. Best wishes to Neeraj for his upcoming endeavours. https://t.co/odm49Nw6Bx
— Narendra Modi (@narendramodi) July 24, 2022
Historic Silver Medal for #India ??
Olympic Champion Neeraj Chopra wins historic Silver Medal at World Athletics Championship after Olympics.
Congratulations @Neeraj_chopra1
Your hard work has paid off & you’ve given India yet another reason to celebrate after Tokyo Olympics pic.twitter.com/NCWzbSNWI4
— Jagat Prakash Nadda (@JPNadda) July 24, 2022
India is elated by the stupendous performance by Subedar @Neeraj_chopra1.
Congratulations to him on winning the Silver Medal at the #WorldAthleticsChampionships in Eugene, Oregon.
His hard work, grit and determination have yielded outstanding results. We are proud of him.
— Rajnath Singh (@rajnathsingh) July 24, 2022
आज #WorldAthleticsChampionships में नीरज चोपड़ा जी ने जेवलिन थ्रो प्रतिस्पर्धा में रजत पदक जीतकर इतिहास रच दिया है।
भारत का मानवर्धन करती इस अविस्मरणीय उपलब्धि हेतु आपको हार्दिक बधाई एवं शुभकामनाएं।
हमें आप पर गर्व है।
जय हिंद!@Neeraj_chopra1
— Yogi Adityanath (@myogiadityanath) July 24, 2022
Neeraj Chopra has created history again by winning a silver medal at World Athletics Championship in Oregon. He becomes the 1st man and the 2nd Indian to win medal at the World Championships after long-jumper Anju Bobby George’s bronze in 2003. Congratulations @Neeraj_chopra1 ?? pic.twitter.com/H6epZwCMPu
— Kiren Rijiju (@KirenRijiju) July 24, 2022
#NeerajChopra has once again made #IndianArmy and the Nation proud. #IndianArmy congratulates Subedar Neeraj Chopra on winning #SilverMedal in men’s #Javelin in World Athletics Championships Oregon 2022 with throw of 88.13 meters.#WCHOregon22 pic.twitter.com/oNsHfJEets
— ADG PI – INDIAN ARMY (@adgpi) July 24, 2022
– Virat Kohli (@virat.kohli) 24 July 2022
ಫೈನಲ್ನಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ನೀರಜ್ ಮೊದಲ ಪ್ರಯತ್ನದಲ್ಲಿ ಫೌಲ್ ಅನುಭವಿಸಿದರೆ ಎರಡನೇ ಯತ್ನದಲ್ಲಿ 82.39 ಮೀಟರ್, ಮೂರನೇ ಪ್ರಯತ್ನದಲ್ಲಿ 86.37 ಮೀಟರ್ ದೂರ ಎಸೆದರಷ್ಟೆ. ಆದರೆ, ನಾಲ್ಕನೇ ಪ್ರಯತ್ವದಲ್ಲಿ 88.13 ಎಸೆದು ದಿಢೀರ್ ಎರಡನೇ ಸ್ಥಾನಕ್ಕೆ ಜಿಗಿದರು. ಐದನೇ ಮತ್ತು ಆರನೇ ರೌಂಡ್ನಲ್ಲಿ ಮತ್ತೆ ಫೌಲ್ ಆಗಿದ್ದು ಹೊಡೆತ ಬಿದ್ದಿತು. ಆದರೂ 88.13 ಶ್ರೇಷ್ಠ ಸಾಧನೆಯ ದೂರ ಎಸೆದು ಅಂತಿಮವಾಗಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಇದು ಚೊಚ್ಚಲ ಪದಕವಾಗಿದೆ.
ಇದಕ್ಕೂ ಮುನ್ನ ನೀರಜ್ ಅರ್ಹತಾ ಸುತ್ತಿನಲ್ಲಿ 88.39 ಮೀ. ದೂರವನ್ನು ದಾಖಲಿಸಿ ಪದಕ ಸುತ್ತಿಗೆ ನೆಗೆದದ್ದು ವಿಶೇಷವಾಗಿತ್ತು. ಈ ಋತುವಿನಲ್ಲಿ ಅದ್ಭುತ ಫಲಿತಾಂಶಗಳನ್ನು ಕಂಡಿದ್ದ ಸ್ಟಾರ್ ಅಥ್ಲೀಟ್ ಎರಡು ಬಾರಿ ತನ್ನ ವೈಯಕ್ತಿಕ ಸಾಧನೆಯನ್ನೇ ಮುರಿದಿದ್ದಾರೆ. ಕಳೆದ ಜೂನ್ 14 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀ. ಮತ್ತು ಕಳೆದ ತಿಂಗಳು 89.94 ಮೀ ಎಸೆದ ಸಾಧನೆ ಗೈದಿದ್ದರು. ಆದರೆ, ಈ ಬಾರಿ ಯಶಸ್ಸು ಸಿಗಲಿಲ್ಲ.
39 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಯಾವುದೇ ಕ್ರೀಡಾಪಟುವು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸಾಧ್ಯವಾಗಿಲ್ಲ. ಇದೀಗ ಸುದೀರ್ಘ ಇತಿಹಾಸದಲ್ಲಿ ದೇಶದ ಮೊಟ್ಟಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ವಿಶ್ವ ಚಾಂಪಿಯನ್ ಆಗುವ ಗುರಿಯನ್ನು ಹೊಂದಿದ್ದ ನೀರಜ್ ಚೋಪ್ರಾಗೆ ಬೆಳ್ಳಿ ದಕ್ಕಿದೆ.
Published On - 10:10 am, Sun, 24 July 22