Paris Olympics 2024: ಚಿನ್ನದ ಪದಕದ ಮೇಲೆ ಮನು ಭಾಕರ್ ಕಣ್ಣು: ಇಲ್ಲಿದೆ ವೇಳಾಪಟ್ಟಿ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಆಗಸ್ಟ್ 3 ರಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬಿಲ್ಲುಗಾರಿಕೆ, ಗಾಲ್ಫ್ ಮತ್ತು ಸೈಲಿಂಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿರುವ 25 ಮೀ ಪಿಸ್ತೂಲ್ ಶೂಟಿಂಗ್​ ಫೈನಲ್​ನಲ್ಲಿ ಭಾರತೀಯ ಶೂಟರ್ ಮನು ಭಾಕರ್ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಇಂದು ಕೂಡ ಪದಕ ನಿರೀಕ್ಷಿಸಬಹುದು.

Paris Olympics 2024: ಚಿನ್ನದ ಪದಕದ ಮೇಲೆ ಮನು ಭಾಕರ್ ಕಣ್ಣು: ಇಲ್ಲಿದೆ ವೇಳಾಪಟ್ಟಿ
Manu Bhaker
Follow us
|

Updated on: Aug 03, 2024 | 7:19 AM

ಪ್ಯಾರಿಸ್ ಒಲಿಂಪಿಕ್ಸ್​ನ ಶೂಟಿಂಗ್ ಸ್ಪರ್ಧೆಯ ಫೈನಲ್​ನಲ್ಲಿ ಮನು ಭಾಕರ್ ಕಣಕ್ಕಿಳಿಯುತ್ತಿದ್ದಾರೆ. 25 ಮೀ ಪಿಸ್ತೂಲ್ ಮಹಿಳೆಯರ ಅರ್ಹತಾ ಸುತ್ತಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಮನು, ಇದೀಗ ಅಂತಿಮ ಹಣಾಹಣಿಯಲ್ಲಿ 7 ಮಂದಿ ವಿರುದ್ಧ ಸ್ಪರ್ಧಿಸಲಿದ್ದಾರೆ. ಅರ್ಹತಾ ಸುತ್ತಿನಲ್ಲಿ ಮನು ಭಾಕರ್ 290 ಅಂಕಗಳನ್ನು ಕಲೆಹಾಕಿದರೆ, ಮೊದಲ ಸ್ಥಾನ ಪಡೆದ ಹಂಗೇರಿಯ ವೆರೋನಿಕಾ ಮೇಜರ್ 292 ಪಾಯಿಂಟ್ಸ್​ ಗಳಿಸಿದ್ದರು. ಇಲ್ಲಿ ಮನು ಹಾಗೂ ವೆರೋನಿಕಾ ನಡುವಣ ವ್ಯತ್ಯಾಸ ಕೇವಲ 2 ಅಂಕಗಳು ಮಾತ್ರ. ಹೀಗಾಗಿಯೇ ಫೈನಲ್ ರೌಂಡ್​ನಲ್ಲಿ ಮನು ಭಾಕರ್​ ಕಡೆಯಿಂದ ಚಿನ್ನದ ಪದಕವನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಇನ್ನು ಶೂಟಿಂಗ್ ಅಲ್ಲದೆ, ಗಾಲ್ಫ್, ಬಿಲ್ಲುಗಾರಿಕೆ ಸೇರಿದಂತೆ ಇತರೆ ಸ್ಪರ್ಧೆಗಳಲ್ಲೂ ಭಾರತೀಯ ಕ್ರೀಡಾಪಟುಗಳು ಕಣಕಿಳಿಯಲಿದ್ದಾರೆ. ಅದರಂತೆ ಶನಿವಾರ (ಆ.3) ಭಾರತೀಯ ಸ್ಪರ್ಧಿಗಳು ಕಣಕ್ಕಿಳಿಯಲಿರುವ ಸ್ಪರ್ಧೆಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

  • 12:30 PM IST – ಶೂಟಿಂಗ್ – ಸ್ಕೀಟ್ ಮಹಿಳೆಯರ ಅರ್ಹತಾ ಸುತ್ತು- ರೈಜಾ ಧಿಲ್ಲೋನ್, ಮಹೇಶ್ವರಿ ಚೌಹಾಣ್
  • 12:30 PM IST – ಗಾಲ್ಫ್ – ಪುರುಷರ ವೈಯಕ್ತಿಕ ಸ್ಟ್ರೋಕ್ ಪ್ಲೇ ಸುತ್ತು 3 – ಶುಭಂಕರ್ ಶರ್ಮಾ, ಗಗನ್ಜೀತ್ ಭುಲ್ಲರ್
  • 1:00 PM IST – ಶೂಟಿಂಗ್ – 25 ಮೀ ಪಿಸ್ತೂಲ್ ಮಹಿಳೆಯರ ಫೈನಲ್ – ಮನು ಭಾಕರ್
  • 1:52 PM IST – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ 1/8 ಎಲಿಮಿನೇಷನ್ ರೌಂಡ್ – ದೀಪಿಕಾ ಕುಮಾರಿ vs ಮಿಚೆಲ್ ಕ್ರೊಪ್ಪೆನ್ (ಜರ್ಮನಿ)
  • 2:05 PM IST – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ 1/8 ಎಲಿಮಿನೇಷನ್ ರೌಂಡ್ – ಭಜನ್ ಕೌರ್ vs ದಿಯಾನಂದ ಚೋರುನಿಸಾ (ಇಂಡೋನೇಷ್ಯಾ)
  • 3:45 PM IST – ನೌಕಾಯಾನ – ಪುರುಷರ ಡಿಂಗಿ ರೇಸ್ 5 – ವಿಷ್ಣು ಸರವಣನ್
  • ನೌಕಾಯಾನ – ರೇಸ್ 5 ನಂತರ – ಪುರುಷರ ಡಿಂಗಿ ರೇಸ್ 6 – ವಿಷ್ಣು ಸರವಣನ್
  • 5:55 PM IST – ನೌಕಾಯಾನ – ಮಹಿಳೆಯರ ಡಿಂಗಿ ರೇಸ್ 5 – ನೇತ್ರಾ ಕುಮನನ್
  • ನೌಕಾಯಾನ – ರೇಸ್ 5 ನಂತರ – ಮಹಿಳೆಯರ ಡಿಂಗಿ ರೇಸ್ 6 – ನೇತ್ರಾ ಕುಮನನ್
  • 12:02 AM IST (ಆಗಸ್ಟ್ 4) – ಬಾಕ್ಸಿಂಗ್ – ಪುರುಷರ 71 ಕೆಜಿ ಕ್ವಾರ್ಟರ್‌ಫೈನಲ್ – ನಿಶಾಂತ್ ದೇವ್ ವಸ ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ (ಮೆಕ್ಸಿಕೊ)
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ