AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ

ಬೆಳಗಾವಿಯ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ತಮ್ಮ ಕೋಣ ಶಾಮ್‌ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಮಗನ ಮದುವೆಯಂತೆ ಮನೆ ಮುಂದೆ ಪೆಂಡಾಲ್ ಹಾಕಿ, ಕೇಕ್ ಕತ್ತರಿಸಿ, ಊರಿನ 300ಕ್ಕೂ ಹೆಚ್ಚು ಜನರಿಗೆ ಊಟ ಹಾಕಿಸಿದ್ದಾರೆ. ಪ್ರಾಣಿಗಳ ಮೇಲೆ ಸಂಜಯ್ ಅವರ ಅಪಾರ ಪ್ರೀತಿ ಮತ್ತು ಕಾಳಜಿಯನ್ನು ಈ ಘಟನೆ ಎತ್ತಿ ತೋರಿಸುತ್ತದೆ, ಇದು ಇತರರಿಗೆ ಮಾದರಿಯಾಗಿದೆ.

ಊರಿಗೆಲ್ಲ ಊಟ ಹಾಕಿಸಿ ಮಗನಂತಿರುವ ಕೋಣದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರೈತ
ಸಾಂದರ್ಭಿಕ ಚಿತ್ರ
ಸಹದೇವ್​ ಮಾನೆ
| Edited By: |

Updated on: Feb 07, 2026 | 9:57 PM

Share

ಬೆಳಗಾವಿ, ಫೆ.7: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಒಂದು ಅಪರೂಪದ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಹಾಕಿರುವ ಪೆಂಡಾಲ್ , ಸಂಭ್ರಮ ನೋಡಿ ಮದುವೆ ಇರಬೇಕು ಎಂದುಕೊಳ್ಳಬೇಕು. ಅಷ್ಟೊಂದು ಸಡಗರ ಇತ್ತು ಈ ಮನೆಯಲ್ಲಿ. ಇಷ್ಟಕ್ಕೂ ಈ ಸಂಭ್ರಮಕ್ಕೆ ಕಾರಣವೇನು? ಎಂದು ಒಮ್ಮೆ ಯೋಚನೆ ಮಾಡಬಹುದು. ಇದಕ್ಕೆ ಅಸಲಿ ಕಾರಣ ಚಿಕ್ಕಲವಾಳ ಗ್ರಾಮದ ಸಂಜಯ್ ಸತಾಳೆ ಎಂಬುವವರ ಮನೆಯ ಕೋಣ. ಹೌದು ಅವರ ತನ್ನ ಕೋಣ ವರ್ಷ ಪೂರೈಸಿದಕ್ಕೆ ಈ ಸಂಭ್ರಮವನ್ನು ಮಾಡಿದ್ದಾರೆ. ಊರಿಗೆಲ್ಲಾ ಊಟ ಹಾಕಿ, ಕೋಣದ (buffalo birthday celebration) ಮುಂದೆ ಕೇಕ್ ಇಟ್ಟು ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. 39ವರ್ಷದ ಸಂಜಯ್ ತಮ್ಮದೇ ಜಮೀನಿನಲ್ಲಿ ಉಳುಮೆ ಮಾಡ್ತಾ, ಜಾನುವಾರುಗಳನ್ನ ಸಾಕುತ್ತಾ ಜೀವನ ನಡೆಸುತ್ತಿದ್ದಾರೆ.

ವರ್ಷದ ಹಿಂದೆ ತಂದಿದ್ದ ಕೋಣಕ್ಕೆ ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಅದ್ದೂರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ಕೋಣಕ್ಕೆ ಶಾಮ್ ಎಂಬ ಹೆಸರು ಕೂಡ ಇಟ್ಟಿದ್ದಾರೆ. ಇದನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಜಯ್ ಗೆ ಇನ್ನೂ ಮದುವೆಯಾಗಿಲ್ಲ ಆ ಕಾರಣಕ್ಕೆ ಕೋಣವನ್ನೇ ಮಗನ ರೀತಿಯಲ್ಲಿ ಸಾಕುತ್ತಿದ್ದಾರೆ. ಒಂದು ವೇಳೆ ಮದುವೆಯಾಗಿ ಮಗ ಇದ್ದಿದ್ರೆ ಹೇಗೆ ಅದ್ಧೂರಿಯಾಗಿ ಹುಟ್ಟುಹಬ್ಬವನ್ನು ಸೆಲೆಬ್ರೇಷನ್​ ಮಾಡುತ್ತಿದ್ದರೂ, ಅದೇ ರೀತಿಯಲ್ಲಿ ಮಾಡಿದ್ದಾರೆ. ಇದೀಗ ಕೋಣದ ಹುಟ್ಟು ಹಬ್ಬ ಮಾಡಿ ಇಡೀ ಗ್ರಾಮದ ಗಮನ ಸೆಳೆದಿದ್ದಾರೆ.

ಇನ್ನೂ ಕೋಣಕ್ಕೆ ಒಂದು ವರ್ಷ ಪೂರೈಕೆ ಆಗ್ತಿದ್ದಂತೆ ಗ್ರಾಮದ ಎಲ್ಲರನ್ನೂ ಕರೆದು ಹುಟ್ಟು ಹಬ್ಬ ಆಚರಣೆಗೆ ಪ್ಲ್ಯಾನ್ ಮಾಡಿದ್ದ ಸಂಜಯ್ ಗೆ ಕುಟುಂಬಸ್ಥರು ಸಾಥ್ ನೀಡಿದ್ದಾರೆ. ಶಾಮ್​​ನ ಹುಟ್ಟು ಹಬ್ಬವನ್ನ ಮಗನ ಮದುವೆ ಮಾದರಿಯಲ್ಲಿ ಮಾಡಿದ್ದಾರೆ. ಮನೆ ಮುಂದೆ ಪೆಂಡಾಲ್ ಹಾಕಿಸಿ ಅಲಂಕರಿಸಿ, ಇಡೀ ಊರ ಜನರನ್ನ ಕರೆದಿದ್ದಾರೆ, ಹತ್ತು ಕೆಜಿ ಕೇಕ್ ತಂದು ಕೋಣದ ಕಡೆಯಿಂದ ಕಟ್ ಮಾಡಿಸಿದ್ದಾರೆ. ಹುಗ್ಗಿ, ಪಲ್ಯ, ಅನ್ನ ಸಾಂಬಾರ್ ಅಡುಗೆ ಮಾಡಿಸಿ ಮುನ್ನೂರಕ್ಕೂ ಅಧಿಕ ಜನರಿಗೆ ಊಟ ಹಾಕಿಸಿದ್ದಾರೆ. ಎಲ್ಲಿಯೂ ಹೆಣ್ಣು ಸಿಗದಿದ್ದಾಗ ನೊಂದುಕೊಳ್ಳದೇ ತನ್ನೊಟ್ಟಿಗೆ ನಿತ್ಯವೂ ಇರುವ ಪ್ರಾಣಿಗಳನ್ನ ತಮ್ಮ ಮಕ್ಕಳಂತೆ ನೋಡಿಕೊಂಡು ಸಂಜಯ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ

ಸದ್ಯ ಸಂಜಯ್ ಮಾಡಿರುವ ಹುಟ್ಟು ಹಬ್ಬ ಗ್ರಾಮೀಣ ಭಾಗದ ರೈತರು, ಯುವಕರಿಗೆ ಮಾದರಿಯಾಗಿದೆ. ಪ್ರಾಣಿಗಳನ್ನ ಪ್ರಾಣಿಗಳಂತೆ ನೋಡದೇ ಮಕ್ಕಳಂತೆ ನೋಡುವುದಷ್ಟೇ ಅಲ್ಲದೇ ಮಕ್ಕಳಿದಿದ್ರೇ ಎನೂ ಮಾಡ್ತಿದ್ರೂ ಅದನ್ನ ಮೂಕ ಪ್ರಾಣಿಗಳ ಮೇಲೆ ಮಾಡಿ ಸಂತಸ ಪಡ್ತಿರುವುದು ರೈತರ ಮುಗ್ದತೆ ಎತ್ತಿ ಹಿಡಿಯುತ್ತೆ. ಅದೇನೆ ಮೋಜು ಮಸ್ತಿ ಮಾಡಲು ಎನೆಲ್ಲಾ ಮಾಡೋರ ಮಧ್ಯೆ ಇಲ್ಲೊಬ್ಬ ಮೂಕ ಪ್ರಾಣಿಯದ್ದು ಹುಟ್ಟು ಹಬ್ಬ ಮಾಡಿ ಎಲ್ಲರಿಗೂ ಮಾದಿರಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ