AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಭಾರತಕ್ಕೆ ಇಂದು 2 ಪದಕಗಳ ನಿರೀಕ್ಷೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಜುಲೈ 29 ರಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ಬಿಲ್ಲುಗಾರಿಕೆ ಮತ್ತು ಹಾಕಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಶೇಷ ಎಂದರೆ ಶೂಟಿಂಗ್​ನಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ಫೈನಲ್​ನಲ್ಲಿದ್ದು, ಹೀಗಾಗಿ ಸೋಮವಾರ ಕೂಡ ಪದಕಗಳನ್ನು ನಿರೀಕ್ಷಿಸಬಹುದು.

Paris Olympics 2024: ಭಾರತಕ್ಕೆ ಇಂದು 2 ಪದಕಗಳ ನಿರೀಕ್ಷೆ
Ramita - Arjun
ಝಾಹಿರ್ ಯೂಸುಫ್
|

Updated on:Jul 29, 2024 | 6:49 AM

Share

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವು ಪದಕದ ಖಾತೆ ತೆರೆದಿದೆ. 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಇನ್ನು ಸೋಮವಾರ ನಡೆಯಲಿರುವ ಏರ್​ ರೈಫಲ್ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಶೂಟರ್​ಗಳು ಫೈನಲ್​ನಲ್ಲಿದ್ದಾರೆ. 10 ಮೀಟರ್ ಏರ್ ರೈಫಲ್ ಸ್ಪರ್ಧೆಯ ಫೈನಲ್ ಸುತ್ತಿನ ಮಹಿಳಾ ವಿಭಾಗದಲ್ಲಿ ರಮಿತಾ ಜಿಂದಾಲ್ ಸ್ಪರ್ಧಿಸುತ್ತಿದ್ದರೆ, ಪುರುಷರ ಫೈನಲ್​ನಲ್ಲಿ ಅರ್ಜುನ್ ಬಾಬುತಾ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಇಂದು ಕೂಡ ಭಾರತ ಪದಕಗಳ ನಿರೀಕ್ಷೆಯಲ್ಲಿದೆ.

ಜುಲೈ 29 ರ ಭಾರತೀಯ ಸ್ಪರ್ಧಿಗಳ ವೇಳಾಪಟ್ಟಿ ಈ ಕೆಳಗಿನಂತಿದೆ:

  • 12:00 PM – ಬ್ಯಾಡ್ಮಿಂಟನ್ – ಪುರುಷರ ಡಬಲ್ಸ್ ಗುಂಪು ಹಂತ – ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ/ಚಿರಾಗ್ ಶೆಟ್ಟಿ vs ಮಾರ್ಕ್ ಲ್ಯಾಮ್ಸ್‌ಫಸ್/ಮಾರ್ವಿನ್ ಸೀಡೆಲ್ (ಜರ್ಮನಿ)
  • 12:45 PM – ಶೂಟಿಂಗ್ – 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತಾ ಸುತ್ತು: ಭಾರತ-1 (ಮನು ಭಾಕರ್/ಸರಬ್ಜೋತ್ ಸಿಂಗ್), ಭಾರತ-2 (ರಿದಮ್ ಸಾಂಗ್ವಾನ್/ಅರ್ಜುನ್ ಸಿಂಗ್ ಚೀಮಾ)
  • 12:50 PM ರ ಬಳಿಕ- ಬ್ಯಾಡ್ಮಿಂಟನ್ – ಮಹಿಳೆಯರ ಡಬಲ್ಸ್ ಗುಂಪು ಹಂತ – ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ vs ನಮಿ ಮತ್ಸುಯಾಮಾ/ಚಿಹಾರು ಶಿದಾ (ಜಪಾನ್)
  • 1:00 PM – ಶೂಟಿಂಗ್ – ಟ್ರ್ಯಾಪ್ ಪುರುಷರ ಅರ್ಹತಾ ಸುತ್ತು- ಪೃಥ್ವಿರಾಜ್ ತೊಂಡೈಮಾನ್
  • 1:00 PM – ಶೂಟಿಂಗ್ – 10 ಮೀ ಏರ್ ರೈಫಲ್ ಮಹಿಳೆಯರ ಫೈನಲ್ – ರಮಿತಾ ಜಿಂದಾಲ್
  • 3:30 PM- ಶೂಟಿಂಗ್ – 10 ಮೀ ಏರ್ ರೈಫಲ್ ಪುರುಷರ ಫೈನಲ್ – ಅರ್ಜುನ್ ಬಾಬುತಾ
  • 4:15 PM – ಹಾಕಿ – ಪುರುಷರ ಪೂಲ್ ಬಿ – ಭಾರತ vs ಅರ್ಜೆಂಟೀನಾ
  • 5:30 PM – ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ ಗುಂಪು ಹಂತ – ಲಕ್ಷ್ಯ ಸೇನ್ vs ಜೂಲಿಯನ್ ಕರಾಗ್ಗಿ (ಜರ್ಮನಿ)
  • 6:31 PM – ಬಿಲ್ಲುಗಾರಿಕೆ – ಪುರುಷರ ತಂಡ ಕ್ವಾರ್ಟರ್‌ಫೈನಲ್ (ಧೀರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣದೀಪ್ ರೈ)
  • 8:18 PM – ಬಿಲ್ಲುಗಾರಿಕೆ – ಪುರುಷರ ತಂಡ ಕಂಚಿನ ಪದಕ ಪಂದ್ಯ (ಧೀರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣದೀಪ್ ರೈ) – (ಅರ್ಹತೆಯ ಬಳಿಕ)
  • 8:41 PM – ಬಿಲ್ಲುಗಾರಿಕೆ – ಪುರುಷರ ತಂಡ ಚಿನ್ನದ ಪದಕದ ಪಂದ್ಯ (ಧೀರಜ್ ಬೊಮ್ಮದೇವರ/ಪ್ರವೀಣ್ ಜಾಧವ್/ತರುಣದೀಪ್ ರೈ) – (ಅರ್ಹತೆಯ ಬಳಿಕ)
  • 11:30 PM – ಟೇಬಲ್ ಟೆನಿಸ್ – ಮಹಿಳೆಯರ ಸಿಂಗಲ್ಸ್ ರೌಂಡ್ – ಶ್ರೀಜಾ ಅಕುಲಾ vs ಜಿಯಾನ್ ಜೆಂಗ್ (ಸಿಂಗಪುರ)

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ಭಾನುವಾರದ (ಜುಲೈ 28) ಫಲಿತಾಂಶಗಳು:

  • ➡️ಶೂಟಿಂಗ್: ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ.
  • ➡️ಶೂಟಿಂಗ್: ರಮಿತಾ ಜಿಂದಾಲ್ (10 ಮೀ ಏರ್ ರೈಫಲ್) ಫೈನಲ್‌ಗೆ ತಲುಪಿದ್ದಾರೆ.
  • ➡️ಶೂಟಿಂಗ್: ಅರ್ಜುನ್ ಬಾಬುತಾ ಫೈನಲ್‌ಗೆ (10 ಮೀ ಏರ್ ರೈಫಲ್) ತಲುಪಿದ್ದಾರೆ.
  • ➡️ಬಾಕ್ಸಿಂಗ್: ನಿಖಾತ್ ಝರೀನ್ ಪ್ರೀ-ಕ್ವಾರ್ಟರ್​ ಫೈನಲ್​ಗೆ ತಲುಪಿದ್ದಾರೆ.
  • ➡️ಟೇಬಲ್ ಟೆನಿಸ್: ಮಾಣಿಕಾ ಮತ್ತು ಶ್ರೀಜಾ ಇಬ್ಬರೂ R32 ಗೆ ಮುನ್ನಡೆ ಪಡೆದಿದ್ದಾರೆ.
  • ➡️ಆರ್ಚರಿ: ಮಹಿಳಾ ತಂಡದ ಕ್ವಾರ್ಟರ್​ ಫೈನಲ್​ನಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ವಿರುದ್ಧ ಸೋತಿದೆ.

Published On - 6:48 am, Mon, 29 July 24

Follow Us
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಲವ್ ಜಿಹಾದ್ ಕೇಸ್​: 50ಕ್ಕೂ ಹೆಚ್ಚು ಜನರಿಂದ ಸಮೀರ್​ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಬಿಜೆಪಿಗರಿಗೆ ನಾನೇ ಟಾರ್ಗೆಟ್​​ ಎಂದ ಸಿಎಂ: ಕಾರಣವನ್ನೂ ಕೊಟ್ಟ ಸಿದ್ದರಾಮಯ್ಯ
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಹಸಿವಿನಿಂದ ಊಟ ಕೇಳಿದ ಭಿಕ್ಷುಕನ ಮೇಲೆ ಬಿಸಿನೀರು ಎರಚಿದ ಹೋಟೆಲ್ ಸಿಬ್ಬಂದಿ!
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ವಂಚನೆ: ಲಿಂಕ್​ ಕ್ಲಿಕ್​ ಮಾಡಿದ್ರೆ ಹಣ ಮಾಯ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
ಡೆಲ್ಲಿ ವಿರುದ್ಧ ವಿಶೇಷ ಮೈಲಿಗಲ್ಲು ದಾಟಿದ ರೋಹಿತ್ ಶರ್ಮಾ
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
IPL ಟಿಕೆಟ್​​ ಪಡೆದ ಶಾಸಕರಿಗೆ ಮಾಜಿ ಸಿಎಂ ಸದಾನಂದಗೌಡ ಕ್ಲಾಸ್​​
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ
ಕಣ್ಣಿಗೆ ಕಂಡವರಿಗೆಲ್ಲಾ ಎಗರಿ.. ಎಗರಿ ಕಚ್ಚಿದ ನಾಯಿ