Paris Olympics 2024: ಒಲಿಂಪಿಕ್ಸ್ ಕ್ರೀಡಾಕೂಟವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?
Paris Olympics 2024: Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್ ಸಜ್ಜಾಗಿ ನಿಂತಿದೆ. ಈ ಬಾರಿಯ ಒಲಿಂಪಿಯಾಡ್ನಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದು, ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ.

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ಗೆ ಜುಲೈ 26 ರಂದು ಅದ್ಧೂರಿ ಚಾಲನೆ ದೊರೆಯಲಿದೆ. ಆದರೆ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಕೆಲ ಪಂದ್ಯಗಳು ಶುರುವಾಗಿದೆ. ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಾವಳಿ ಶುರುವಾಗಿದ್ದು, ಜುಲೈ 25 ರಿಂದ ಆರ್ಚರಿ ಸೇರಿದಂತೆ ಕೆಲ ಕ್ರೀಡೆಗಳು ಆರಂಭವಾಗಲಿದೆ.
ವಿಶೇಷ ಎಂದರೆ ಭಾರತವು ಜುಲೈ 25 ರಂದು ಆರ್ಚರಿಯೊಂದಿಗೆ ಒಲಿಂಪಿಕ್ಸ್ ಅಭಿಯಾನ ಆರಂಭಿಸಲಿದೆ. ಭಾರತೀಯ ಮಹಿಳೆಯರ ಬಿಲ್ಲುಗಾರಿಕೆ ಸ್ಪರ್ಧೆಯ ಪಂದ್ಯವು ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಸಂಜೆ 5.45 ಕ್ಕೆ ಪುರುಷರ ಆರ್ಚರಿ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಗಳನ್ನು ಲೈವ್ ವೀಕ್ಷಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…
ಯಾವ ಚಾನೆಲ್ಗಳಲ್ಲಿ ನೇರ ಪ್ರಸಾರ?
ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ನೇರ ಪ್ರಸಾರ ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ಇರಲಿದೆ. ಹಾಗೆಯೇ ಯುರೋಪ್ ದೇಶಗಳಲ್ಲಿ ಯುರೋಸ್ಪೋರ್ಟ್ಸ್ ಚಾನೆಲ್ಗಳ ಮೂಲಕ ವೀಕ್ಷಿಸಬಹುದು. ಇನ್ನು ಯುನೈಟೆಡ್ ಕಿಂಗ್ಡಮ್ನಲ್ಲಿ ಬಿಬಿಸಿ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ. ಯುನೈಟೆಡ್ ಸ್ಟೇಟ್ಸ್ ದೇಶಗಳಲ್ಲಿ NBCUniversal ಚಾನೆಲ್ ಮೂಲಕ ನೇರ ಪ್ರಸಾರ ವೀಕ್ಷಿಸಬಹುದು.
ಭಾರತದ ಚಾನೆಲ್ಗಳ ಪಟ್ಟಿ:
|
ಚಾನಲ್
|
ಭಾಷೆ
|
|
ಸ್ಪೋರ್ಟ್ಸ್ 18 – 1
|
ಇಂಗ್ಲಿಷ್ ಮತ್ತು ತಮಿಳು – ತೆಲುಗು ಆಯ್ಕೆಗಳು
|
|
ಸ್ಪೋರ್ಟ್ಸ್ 18 – 2
|
ಹಿಂದಿ
|
|
ಸ್ಪೋರ್ಟ್ಸ್ 18 – 3
|
ಗ್ಲೋಬಲ್ ಆಯ್ಕೆ |
ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಸೈನಿಕ
ಉಚಿತವಾಗಿ ವೀಕ್ಷಿಸುವುದು ಹೇಗೆ?
ಪ್ಯಾರಿಸ್ ಕ್ರೀಡಾಕೂಟವನ್ನು ಜಿಯೋ ಆ್ಯಪ್ ಮೂಲಕ ಉಚಿತವಾಗಿ ವೀಕ್ಷಿಸಬಹುದು. ಆದರೆ ಈ ಆಯ್ಕೆಯು ಎಲ್ಲಾ ದೇಶಗಳಲ್ಲಿ ಇರುವುದಿಲ್ಲ. ಇನ್ನುಳಿದ ದೇಶಗಳ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ಆ್ಯಪ್ಗಳ ಪಟ್ಟಿ ಈ ಕೆಳಗಿನಂತಿದೆ.
|
ದೇಶ
|
ಆ್ಯಪ್
|
ವಿವರಗಳು
|
|
ಭಾರತ
|
ಜಿಯೋ ಸಿನಿಮಾ
|
ಉಚಿತ ಲೈವ್ ಸ್ಟ್ರೀಮಿಂಗ್.
|
|
ಯುಕೆ
|
BBC
|
BBC ಮತ್ತು iPlayer
|
|
ಜಾಗತಿಕ
|
ಯುರೋಸ್ಪೋರ್ಟ್
|
ಯುರೋಸ್ಪೋರ್ಟ್ 1 ಮತ್ತು 2 ನಲ್ಲಿ ನೇರ ಪ್ರಸಾರ. ಸ್ಕೈ, ವರ್ಜಿನ್ ಮೀಡಿಯಾ ಅಥವಾ ಟಿಎನ್‌ಟಿ ಪ್ಯಾಕೇಜ್‌ಗಳ ಮೂಲಕ ಲಭ್ಯವಿದೆ.
|
|
ಜಾಗತಿಕ
|
ಡಿಸ್ಕವರಿ+
|
3,800 ಗಂಟೆಗಳ ಕವರೇಜ್‌ನೊಂದಿಗೆ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ.
|
|
ಯುಎಸ್ಎ
|
NBC ಒಲಿಂಪಿಕ್ಸ್
|
ಸಮಗ್ರ ಲೈವ್
|
|
ಯುಎಸ್ಎ
|
Peacock |
ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಸೇರಿದಂತೆ ಪ್ರತಿ ಕಾರ್ಯಕ್ರಮಗಳ ಲೈವ್ ಸ್ಟ್ರೀಮಿಂಗ್.
|
|
ಯುಎಸ್ಎ
|
ಹುಲು
|
ಸ್ಟ್ರೀಮಿಂಗ್
|
|
ಯುಎಸ್ಎ
|
ಫ್ಯೂಬೋ ಟಿವಿ
|
ಸ್ಟ್ರೀಮಿಂಗ್
|
ಭಾರತದ ಪಂದ್ಯಗಳು ಯಾವಾಗ?
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವು ಜುಲೈ 25 ರಿಂದ ಅಭಿಯಾನ ಆರಂಭಿಸಲಿದೆ. ಇನ್ನು ಜುಲೈ 26 ರಂದು ಉದ್ಘಾಟನಾ ಸಮಾರಂಭ ಇರುವುದರಿಂದ ಯಾವುದೇ ಪಂದ್ಯಾವಳಿ ಇರುವುದಿಲ್ಲ. ಹಾಗೆಯೇ ಜುಲೈ 27 ರಿಂದ ಆಗಸ್ಟ್ 11 ರವರೆಗೆ ಪ್ರತಿ ದಿನ ಭಾರತೀಯರ ಸ್ಪರ್ಧೆಗಳಿರಲಿದೆ. ಈ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
