AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಇಂದಿನಿಂದ ಭಾರತದ ಒಲಿಂಪಿಕ್ಸ್ ಅಭಿಯಾನ ಆರಂಭ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಉದ್ಘಾಟನಾ ಸಮಾರಂಭ ಜುಲೈ 26 ರಂದು ನಡೆಯಲಿದೆ. ಆದರೆ ಅದಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್​ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ಇದೀಗ ಜುಲೈ 25 ರಿಂದ ಆರ್ಚರಿ ಸ್ಪರ್ಧೆ ಶುರುವಾಗುತ್ತಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷ.

Paris Olympics 2024: ಇಂದಿನಿಂದ ಭಾರತದ ಒಲಿಂಪಿಕ್ಸ್ ಅಭಿಯಾನ ಆರಂಭ
Paris Olympics 2024
ಝಾಹಿರ್ ಯೂಸುಫ್
|

Updated on:Jul 25, 2024 | 7:57 AM

Share

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತವು ಇಂದಿನಿಂದ ಅಭಿಯಾನ ಆರಂಭಿಸಲಿದೆ. ಗುರುವಾರ ನಡೆಯಲಿರುವ ಬಿಲ್ಲುಗಾರಿಕೆ (ಆರ್ಚರಿ) ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್, ಬಿ ಧೀರಜ್, ತರುಣ್‌ದೀಪ್ ರೈ ಮತ್ತು ಪ್ರವೀಣ್ ಜಾಧವ್ ಸ್ಪರ್ಧಿಸಲಿದ್ದಾರೆ. ಈ ಸ್ಪರ್ಧೆಯೊಂದಿಗೆ ಭಾರತದ ಒಲಿಂಪಿಕ್ಸ್ ಅಭಿಯಾನ ಶುರುವಾಗಲಿದೆ. ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾರತದ ಮಹಿಳಾ ಸ್ಪರ್ಧಿಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಭಾಗವಹಿಸಲಿದ್ದಾರೆ. ಇದಾದ ಬಳಿಕ ಪುರುಷರ ವೈಯುಕ್ತಿಕ ಶ್ರೇಯಾಂಕ ಸುತ್ತಿನ ಆರ್ಚರಿ ಸ್ಪರ್ಧೆಗಳು ನಡೆಯಲಿವೆ.

ಪ್ಯಾರಿಸ್ 2024 ರಲ್ಲಿ ಭಾರತೀಯ ಬಿಲ್ಲುಗಾರರ ಪದಕದ ಮಹತ್ವಾಕಾಂಕ್ಷೆಗೆ ಇಂದಿನ ಶ್ರೇಯಾಂಕದ ಸುತ್ತು ನಿರ್ಣಾಯಕವಾಗಿರುತ್ತದೆ. ಶ್ರೇಯಾಂಕದ ಸುತ್ತಿನಿಂದ ಅಗ್ರ ನಾಲ್ಕು ಶ್ರೇಯಾಂಕದ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತವೆ. ಎಂಟರಿಂದ 12ನೇ ಶ್ರೇಯಾಂಕದ ತಂಡಗಳು ಉಳಿದ ನಾಲ್ಕು ಕ್ವಾರ್ಟರ್-ಫೈನಲ್ ಸ್ಥಾನಗಳಿಗಾಗಿ ಪರಸ್ಪರ ಮುಖಾಮುಖಿಯಾಗಲಿವೆ.

ಬಿಲ್ಲುಗಾರಿಕೆ ಸ್ಪರ್ಧೆಯ ವೇಳಾಪಟ್ಟಿ:

  • ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು (ದೀಪಿಕಾ ಕುಮಾರಿ, ಭಜನ್ ಕೌರ್, ಅಂಕಿತಾ ಭಕತ್) – ಮಧ್ಯಾಹ್ನ 1:00 PM ಗಂಟೆಗೆ
  • ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು (ತರುಣದೀಪ್ ರೈ, ಧೀರಜ್ ಬೊಮ್ಮದೇವರ, ಪ್ರವೀಣ್ ಜಾಧವ್) – ಸಂಜೆ 5:45 PM ಗಂಟೆಗೆ

ಪ್ಯಾರಿಸ್​ ಒಲಿಂಪಿಕ್ಸ್​ನ ಇಂದಿನ (ಜುಲೈ 25) ಸ್ಪರ್ಧೆಗಳ ವೇಳಾಪಟ್ಟಿ:

  • 12:30 PM  – ಹ್ಯಾಂಡ್‌ಬಾಲ್ – ಸ್ಲೊವೇನಿಯಾ vs ಡೆನ್ಮಾರ್ಕ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು A)
  • 1:00 PM – ಬಿಲ್ಲುಗಾರಿಕೆ – ಮಹಿಳೆಯರ ವೈಯಕ್ತಿಕ ಶ್ರೇಯಾಂಕದ ಸುತ್ತು
  • 2:30 PM – ಹ್ಯಾಂಡ್‌ಬಾಲ್ – ನೆದರ್‌ಲ್ಯಾಂಡ್ಸ್ vs ಅಂಗೋಲಾ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
  • 5:30 PM – ಹ್ಯಾಂಡ್‌ಬಾಲ್ – ಸ್ಪೇನ್ vs ಬ್ರೆಜಿಲ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
  • 5:30 PM – ರಗ್ಬಿ ಸೆವೆನ್ಸ್ – ಸಮೋವಾ vs ಕೀನ್ಯಾ (ಪುರುಷರ ಪೂಲ್ ಬಿ)
  • 5:45 PM – ಬಿಲ್ಲುಗಾರಿಕೆ – ಪುರುಷರ ವೈಯಕ್ತಿಕ ಶ್ರೇಯಾಂಕದ ಸುತ್ತು
  • 6:00 PM- ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಆಸ್ಟ್ರೇಲಿಯಾ (ಪುರುಷರ ಪೂಲ್ ಬಿ)
  • 6:30 PM – ರಗ್ಬಿ ಸೆವೆನ್ಸ್ – ಯುನೈಟೆಡ್ ಸ್ಟೇಟ್ಸ್ vs ಉರುಗ್ವೆ (ಪುರುಷರ ಪೂಲ್ ಸಿ)
  • 7:00 PM – ರಗ್ಬಿ ಸೆವೆನ್ಸ್ – ಫಿಜಿ vs ಫ್ರಾನ್ಸ್ (ಪುರುಷರ ಪೂಲ್ ಸಿ)
  • 7:30 PM – ಹ್ಯಾಂಡ್‌ಬಾಲ್ – ಜರ್ಮನಿ vs ಕೊರಿಯಾ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು A)
  • 7:30 PM- ರಗ್ಬಿ ಸೆವೆನ್ಸ್ – ಸೌತ್ ಆಫ್ರಿಕಾ vs ಜಪಾನ್ (ಪುರುಷರ ಪೂಲ್ ಎ)
  • 8:00 PM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್  ಐರ್ಲೆಂಡ್ (ಪುರುಷರ ಪೂಲ್ ಎ)
  • 8:30 PM – ಫುಟ್ಬಾಲ್ – ಕೆನಡಾ vs ನ್ಯೂಝಿಲೆಂಡ್ (ಮಹಿಳೆಯರ ಗುಂಪು A)
  • 8:30 PM – ಫುಟ್ಬಾಲ್ – ಸ್ಪೇನ್ vs ಜಪಾನ್ (ಮಹಿಳೆಯರ ಗುಂಪು C)
  • 10:30 PM – ಫುಟ್ಬಾಲ್ – ಜರ್ಮನಿ vs ಆಸ್ಟ್ರೇಲಿಯಾ (ಮಹಿಳೆಯರ ಗುಂಪು B)
  • 10:30 PM – ಫುಟ್ಬಾಲ್ – ನೈಜೀರಿಯಾ vs ಬ್ರೆಜಿಲ್ (ಮಹಿಳೆಯರ ಗುಂಪು C)
  • 10:30 PM – ಫುಟ್ಬಾಲ್ – ಹಂಗೇರಿ vs ಫ್ರಾನ್ಸ್ (ಮಹಿಳೆಯರ ಪ್ರಾಥಮಿಕ ಸುತ್ತು ಗುಂಪು B)
  • 11:30 PM- ರಗ್ಬಿ ಸೆವೆನ್ಸ್ – ಶ್ರೇಯಾಂಕ 9 vs ಒಟ್ಟಾರೆ ಶ್ರೇಯಾಂಕ 12 (ಪುರುಷರ ಸ್ಥಾನ 9-12)
  • 12:00 AM – ರಗ್ಬಿ ಸೆವೆನ್ಸ್ – ಒಟ್ಟಾರೆ ಶ್ರೇಯಾಂಕ 10 vs ಒಟ್ಟಾರೆ ಶ್ರೇಯಾಂಕ 11  (ಪುರುಷರ ಸ್ಥಾನ 9-12)
  • 12:30 AM – ಫುಟ್ಬಾಲ್ – ಫ್ರಾನ್ಸ್ vs ಕೊಲಂಬಿಯಾ (ಮಹಿಳೆಯರ ಗುಂಪು A)
  • 12:30 AM – ಫುಟ್ಬಾಲ್ – ಯುನೈಟೆಡ್ vs ವಿರುದ್ಧ ಜಾಂಬಿಯಾ (ಮಹಿಳಾ ಗುಂಪು B)
  • 12:30 AM – ಹ್ಯಾಂಡ್‌ಬಾಲ್ – ನಾರ್ವೆ vs ಸ್ವೀಡನ್ (ಮಹಿಳೆಯರ ಪ್ರಾಥಮಿಕ ಸುತ್ತಿನ ಗುಂಪು A)
  • 12:30 AM – ರಗ್ಬಿ ಸೆವೆನ್ಸ್ – ಪೂಲ್ A ನಲ್ಲಿ 1 ನೇ vs ಒಟ್ಟಾರೆ ಶ್ರೇಯಾಂಕದಲ್ಲಿ 8 ನೇ (ಪುರುಷರ ಕ್ವಾರ್ಟರ್ ಫೈನಲ್ಸ್)
  • 01:00 AM – ರಗ್ಬಿ ಸೆವೆನ್ಸ್ – ಪೂಲ್ B ನಲ್ಲಿ 2 ನೇ vs ಪೂಲ್ C 2ನೇ (ಪುರುಷರ ಕ್ವಾರ್ಟರ್ ಫೈನಲ್‌)
  • 01:30 AM – ರಗ್ಬಿ ಸೆವೆನ್ಸ್ – ಪೂಲ್ C ನಲ್ಲಿ 1 ನೇ vs  ಪೂಲ್ Aನಲ್ಲಿ 1ನೇ  (ಪುರುಷರ ಕ್ವಾರ್ಟರ್‌ಫೈನಲ್‌ನಲ್ಲಿ)
  • 02:00 AM – ರಗ್ಬಿ ಸೆವೆನ್ಸ್ – ಪೂಲ್ B ನಲ್ಲಿ 1ನೇ vs ಒಟ್ಟಾರೆ ಶ್ರೇಯಾಂಕದಲ್ಲಿ 7ನೇ (ಪುರುಷರ ಕ್ವಾರ್ಟರ್ ಫೈನಲ್‌)

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯರ ವೇಳಾಪಟ್ಟಿ ಇಲ್ಲಿದೆ

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಸ್ಪೋರ್ಟ್ಸ್​ 18 ಚಾನೆಲ್​ನಲ್ಲಿ ಒಲಿಂಪಿಕ್ಸ್​ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್​ನಲ್ಲಿ ಭಾರತದ ಸ್ಪರ್ಧೆಗಳ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.

Published On - 7:54 am, Thu, 25 July 24

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ