Paris Olympics 2024: ವಿನೇಶ್ಗೆ ಫೈನಲ್ ಆಡುವ ಅವಕಾಶ ಸಿಗುತ್ತಾ ? ಅಂತರಾಷ್ಟ್ರೀಯ ಕುಸ್ತಿ ಒಕ್ಕೂಟ ಹೇಳಿದ್ದೇನು?
Paris Olympics 2024: ವಿನೇಶ್ ಫೋಗಟ್ ಫೈನಲ್ ಪಂದ್ಯವನ್ನು ಆಡಲು ಇನ್ನೂ ಏನಾದರೂ ಅವಕಾಶವಿದೆಯೇ ಎಂಬ ಪ್ರಶ್ನೆ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತಿದೆ. ಇದೀಗ ಈ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಸ್ಪಷ್ಟನೆ ನೀಡಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಅಥವಾ ಬೆಳ್ಳಿ ಪದಕದ ನಿರೀಕ್ಷೆ ಮೂಡಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಇದೀಗ ಯಾವ ಪದಕವೂ ಇಲ್ಲದೆ ಖಾಲಿ ಕೈಯಲ್ಲಿ ದೇಶಕ್ಕೆ ವಾಪಸ್ಸಾಗಬೇಕಾಗಿದೆ. ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ 50 ಕೆ.ಜಿ ವಿಭಾದ ಕುಸ್ತಿ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. ಏತನ್ಮಧ್ಯೆ, ವಿನೇಶ್ ಫೋಗಟ್ ಫೈನಲ್ ಪಂದ್ಯವನ್ನು ಆಡಲು ಇನ್ನೂ ಏನಾದರೂ ಅವಕಾಶವಿದೆಯೇ ಎಂಬ ಪ್ರಶ್ನೆ ಭಾರತದ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತಿದೆ. ಇದೀಗ ಈ ಬಗ್ಗೆ ಅಂತಾರಾಷ್ಟ್ರೀಯ ಕುಸ್ತಿ ಫೆಡರೇಷನ್ ಸ್ಪಷ್ಟನೆ ನೀಡಿದೆ.
ಅಂತರಾಷ್ಟ್ರೀಯ ಕುಸ್ತಿ ಒಕ್ಕೂಟ ಹೇಳಿದ್ದೇನು?
ಅಂತರಾಷ್ಟ್ರೀಯ ಕುಸ್ತಿ ಫೆಡರೇಶನ್ (ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್) ಅಧ್ಯಕ್ಷ ನೆನಾದ್ ಲಾಲೋವಿಚ್ ಅವರು, ವಿನೇಶ್ ಅನರ್ಹತೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಇದರಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಾವು ನಿಯಮಗಳನ್ನು ಗೌರವಿಸಬೇಕು. ವಿನೇಶ್ಗೆ ಈ ರೀತಿ ಆಗಿರುವುದು ನನಗೆ ತುಂಬಾ ದುಃಖ ತಂದಿದೆ. ಅವರು ನಿಗದಿತ ತೂಕಕ್ಕಿಂತ ಹೆಚ್ಚು ತೂಕ ಇದ್ದರು. ಅದೇನೆ ಇದ್ದರೂ ನಿಯಮಗಳು ಮತ್ತು ವಿಧಾನವು ಸಾರ್ವಜನಿಕವಾಗಿದೆ. ನಿಯಮಬಾಹಿರವಾಗಿ ವಿನೇಶ್ಗೆ ಫೈನಲ್ ಆಡಲು ಅವಕಾಶ ನೀಡಬೇಕೆಂದು ಜನರು ಮಾತನಾಡುತ್ತಿರುವ ರೀತಿ ಸಮಂಜಸವಲ್ಲ. ಆಟದಲ್ಲಿ ಭಾಗವಹಿಸಲು ಬರುವವರಿಗೆ ನಿಯಮಗಳ ಅರಿವಿದೆ. ಹೀಗಾಗಿ ವಿನೇಶ್ಗೆ ಮುಂದೆಯೂ ಸಾಕಷ್ಟು ಅವಕಾಶಗಳಿವೆ. ಆದರೆ ಈ ಬಾರಿ ಜನರು ನಿರೀಕ್ಷಿಸುತ್ತಿರುವಂತೆ ಯಾವುದು ನಡೆಯುವುದಿಲ್ಲ ಎಂದಿದ್ದಾರೆ.
🚨 BREAKING NEWS 🚨 : Vinesh PHOGAT 🇮🇳, from NOC of India in 50kg, failed the weigh-in on day two of her competition which has forced United World Wrestling to promote Yusneylis GUZMAN LOPEZ 🇨🇺 to the final of 50kg at the Paris Olympics.
She will take on Sarah HILDEBRANDT 🇺🇸 in… pic.twitter.com/dgpmXKtpao
— United World Wrestling (@wrestling) August 7, 2024
ಭಾರತೀಯ ಕುಸ್ತಿ ಸಂಸ್ಥೆಯ ಪ್ರತಿಕ್ರಿಯೆ ಏನು?
ವಿನೇಶ್ ಅವರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಗೆ ಭಾರತೀಯ ಕುಸ್ತಿ ಫೆಡರೇಶನ್ ಮನವಿ ಮಾಡಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಕೂಡ ತಮ್ಮ ಪ್ರತಿಕ್ರಿಯೆಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಒಕ್ಕೂಟದ ಮುಂದೆ ತಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸುತ್ತಿರುವುದಾಗಿ ಹೇಳಿದ್ದಾರೆ.
ವಿನೇಶ್ರನ್ನು ಅನರ್ಹಗೊಳಿಸಿದ್ಯಾಕೆ?
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅದ್ಭುತ ಪ್ರದರ್ಶನ ನೀಡಿದ್ದರು. ಮೊದಲ ಪಂದ್ಯದಲ್ಲಿಯೇ ವಿಶ್ವದ ನಂ-1 ಶ್ರೇಯಾಂಕದ ಕುಸ್ತಿಪಟುವನ್ನು ಸೋಲಿಸುವ ಮೂಲಕ ಸ್ಪರ್ಧೆಯನ್ನು ಇನ್ನಷ್ಟು ರೋಚಕಗೊಳಿಸಿದ್ದರು. ಇದಾದ ಬಳಿಕ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಫೈನಲ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಇದಾದ ನಂತರ, ಫೈನಲ್ ಪಂದ್ಯಕ್ಕೂ ಮುನ್ನ ಅವರ ತೂಕ ಮಾಡಿದಾಗ, ಅವರು ನಿಗದಿತ ತೂಕಕ್ಕಿಂತ 100 ಗ್ರಾಂ ಅಧಿಕವಿರುವುದು ಕಂಡುಬಂದಿತ್ತು. ಇದಾದ ಬಳಿಕ ಅವರ ವಿರುದ್ಧ ಕ್ರಮ ಕೈಗೊಂಡು ಟೂರ್ನಿಯಿಂದ ಅನರ್ಹರೆಂದು ಘೋಷಿಸಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ