AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಬ್ಲ್ಯೂಟಿಸಿ ಫೈನಲ್​ ಪಂದ್ಯದಲ್ಲಿ ಭಾರತೀಯ ವೇಗದ ಬೌಲರ್​ಗಳು ನಡೆಸಿದ ದಾಳಿ ನಾಚಿಕೆ ಹುಟ್ಟಿಸುವಂತಿತ್ತು: ರೋಜರ್ ಬಿನ್ನಿ

ನ್ಯೂಜಿಲೆಂಡ್ ಓಪನರ್​ಗಳು-ಟಾಮ್ ಲಾಥಮ್ ಮತ್ತು ಡೆವೊನ್ ಕಾನ್ವೇ ಮೊದಲ ವಿಕೆಟ್​ಗೆ 70 ರನ್ ಕಲೆ ಹಾಕಲು ಭಾರತೀಯ ವೇಗದ ಬೌಲರ್​ಗಳ ನೀರಸ, ಮೊನಚುರಹಿತ ಮತ್ತು ನಿಯಂತ್ರಣರಹಿತ ಬೌಲಿಂಗ್ ಕಾರಣವಾಯಿತು ಎಂದು ಬಿನ್ನಿ ಹೇಳಿದ್ದಾರೆ.

ಡಬ್ಲ್ಯೂಟಿಸಿ ಫೈನಲ್​ ಪಂದ್ಯದಲ್ಲಿ ಭಾರತೀಯ ವೇಗದ ಬೌಲರ್​ಗಳು ನಡೆಸಿದ ದಾಳಿ ನಾಚಿಕೆ ಹುಟ್ಟಿಸುವಂತಿತ್ತು: ರೋಜರ್ ಬಿನ್ನಿ
ಭಾರತದ ವೇಗಿಗಳು
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2021 | 11:25 PM

Share

ಭಾರತದ ಮಾಜಿ ಆಲ್​ರೌಂಡರ್ ರೋಜರ್ ಬಿನ್ನಿ ಸ್ವಲ್ಪ ಹಳಬರಿಗೆ ಬಹಳ ಚೆನ್ನಾಗಿ ನೆನಪಿರುತ್ತಾರೆ. 1983 ರಲ್ಲಿ ಕಪಿಲ್ ದೇವ್ ಅವರ ಡೇರ್​ ಡೆವಿಲ್ಸ್ ವಿಶ್ವಕಪ್ (ಪ್ರುಡೆನ್ಶಿಯಲ್ ಕಪ್) ಗೆದ್ದಾಗ ಆ ಡೆವಿಲ್​ಗಳಲ್ಲಿ ಬಿನ್ನಿ ಒಬ್ಬರಾಗಿದ್ದರಲ್ಲದೆ, ಭಾರತ ಮೊಟ್ಟ ಮೊದಲ ಬಾರಿಗೆ ವಿಶ್ವ ಚಾಂಪಿಯನ್​ಗಳ ಪಟ್ಟ ಧರಿಸಲು ಬಹಳ ಮಹತ್ತರವಾದ ಕಾಣಿಕೆ ನೀಡಿದ್ದರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್​ (18) ಪಡೆದ ಶ್ರೇಯಸ್ಸು ಅವರದ್ದು; ಕೇವಲ ಭಾರತದ ಪರ ಮಾತ್ರ ಅಲ್ಲ, ಟೂನಿಯಲ್ಲಿ ಭಾಗವಹಿಸಿದ ಎಲ್ಲ ದೇಶಗಳ ಬೌಲರ್​ಗಳ ಪೈಕಿ ಈ ಕನ್ನಡಿಗನೇ ಗರಿಷ್ಠ ವಿಕೆಟ್ ಪಡೆದಿದ್ದು. 1979 ರಿಂದ 1987ರವರಗೆ ಭಾರತಕ್ಕಾಗಿ ಅಡಿದ ಬಿನ್ನಿ 2000 ರಲ್ಲಿ ಭಾರತದ ಅಂಡರ್-19 ಟೀಮ್ ವಿಶ್ವಕಪ್ ಗೆದ್ದಾಗ ಅದರ ಕೋಚ್ ಆಗಿದ್ದರು. ನಂತರದ ವರ್ಷಗಳಲ್ಲಿ (2012) ಅವರು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸಿದರು. ಭಾರತವನ್ನು ಪ್ರತಿನಿಧಿಸಿದ ಮೊದಲ ಆಂಗ್ಲೋ-ಇಂಡಿಯನ್ ಕ್ರಿಕೆಟರ್ ಎಂಬ ಖ್ಯಾತಿಯೂ ಬಿನ್ನಿ ಅವರದ್ದು.

ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್​ಗೆ ಸುಲಭವಾಗಿ ಶರಣಾಗಿದ್ದು ಎಲ್ಲ ಭಾರತೀಯರಂತೆ ಬಿನ್ನಿ ಅವರಿಗೂ ಕೋಪ ತರಿಸಿದೆ. ಭಾರತದ ಬೌಲರ್​ಗಳು ಕಳಪೆಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದರು ಎಂದು ಇಂಗ್ಲಿಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಿನ್ನಿ ಹೇಳಿದ್ದಾರೆ. ಇಂಗ್ಗಿಷ್ ಕಂಡೀಶನ್​ಗಳಲ್ಲಿ ಹೇಗೆ ಬೌಲ್ ಮಾಡಬೇಕೆನ್ನುವುದನ್ನು ಅವರಿಗಿಂತ ಅಧಿಕಾರಯುತವಾಗಿ ಯಾರು ಮಾತಾಡಬಲ್ಲರು?

ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 217 ರನ್​ಗಳಿಗೆ ಅಲೌಟ್​ ಅದ ನಂತರ ನ್ಯೂಜಿಲೆಂಡ್ ಬ್ಯಾಟ್ಸ್​ಮನ್​ಗಳನ್ನು ಕಡಿಮೆ ಮೊತ್ತಕ್ಕೆ ಔಟ್​ ಮಾಡುವ ಗುರುತರ ಜವಾಬ್ದಾರಿ ಬೌಲರ್​ಗಳ ಮೇಲಿತ್ತು ಅದರೆ ಅವರು ಕಳಾಹೀನ ಪ್ರದರ್ಶನ ದಾಳಿ ನಡೆಸಿ ತೀವ್ರ ನಿರಾಶೆಗೊಳಿಸಿದರು ಎಂದು ಬಿನ್ನಿ ಹೇಳಿದ್ದಾರೆ. ಭಾರತದ ವೇಗದ ಬೌಲರ್​ಗಳು ಆಫ್​ಸ್ಟಂಪ್​ ಹೊರಗಡೆ ಶಾರ್ಟ್​ ಎಸೆತಗಳನ್ನು ಬೌಲ್​ ಮಾಡಿದ್ದು, ನ್ಯೂಜಿಲೆಂಡ್ ಆರಂಭ ಆಟಗಾರರಿಗೆ ಅವುಗಳನ್ನು ಆಡದೆ ಬಿಡಲು ಮತ್ತು ಇನ್ನಿಂಗ್ಸ್ ಕಟ್ಟಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

Roger Binny

ರೋಜರ್ ಬಿನ್ನಿ

ನ್ಯೂಜಿಲೆಂಡ್ ಓಪನರ್​ಗಳು-ಟಾಮ್ ಲಾಥಮ್ ಮತ್ತು ಡೆವೊನ್ ಕಾನ್ವೇ ಮೊದಲ ವಿಕೆಟ್​ಗೆ 70 ರನ್ ಕಲೆ ಹಾಕಲು ಭಾರತೀಯ ವೇಗದ ಬೌಲರ್​ಗಳ ನೀರಸ, ಮೊನಚುರಹಿತ ಮತ್ತು ನಿಯಂತ್ರಣರಹಿತ ಬೌಲಿಂಗ್ ಕಾರಣವಾಯಿತು ಎಂದು ಬಿನ್ನಿ ಹೇಳಿದ್ದಾರೆ.

‘ರವಿವಾರದಂದು (ಟೆಸ್ಟ್ ಪಂದ್ಯದ ಮೂರನೇ ದಿನ) ಭಾರತದ ಬೌಲರ್​ಗಳು ಬೌಲ್ ಮಾಡುತ್ತಿದ್ದುದನ್ನು ನೋಡುವುದು ನಾಚಿಕೆಗೇಡಿನ ಸಂಗತಿಯಾಗಿತ್ತು. ಇಂಗ್ಲೆಂಡ್​ ಪಿಚ್​ಗಳ ಮೇಲೆ ಬೌಲ್​ ಮಾಡುವ ರೀತಿ ಅದಲ್ಲ. ಅಂಥ ದಾಳಿ ಎದುರಾಳಿಗಳಿಗೆ ತೊಂದರೆ ನೀಡಬಲ್ಲದೆ? ಇದೆಂಥ ಬೌಲಿಂಗ್ ಪ್ರದರ್ಶನ? ಅವರು ಟೆಸ್ಟ್​ ಮ್ಯಾಚ್​ ಆಡೋದಿಕ್ಕೆ ಬಂದಿದ್ದರು, ತಮಾಷೆಗಲ್ಲ,’ ಎಂದು ಬಿನ್ನಿ ಹೇಳಿದ್ದಾರೆ.

ವೇಗದ ಬೌಲರ್​ಗಳು ಅದರಲ್ಲೂ ವಿಶೇಷವಾಗಿ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮ ಪಂದ್ಯದ ನಾಲ್ಕನೇ ದಿನ ಉತ್ತಮವಾಗಿ ದಾಳಿ ನಡೆಸಿ ನ್ಯೂಜಲೆಂಡ್​ ಸ್ಕೋರ್ 160/6 ಗೆ ಕುಸಿಯುವಂತೆ ಮಾಡಿದರಾದರೂ ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನು ಬೇಗ ಔಟ್​ ಮಾಡಲು ವಿಫಲರಾದ ಕಾರಣ ಅವರಿಗೆ 32 ರನ್​ಗಳ ಮುನ್ನಡೆ ಸಿಕ್ಕಿತು.

ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ವೇಗದ ಬೌಲರ್​ಗಳು ದಾಳಿ ನಡೆಸುವಾಗ ರಕ್ಷಣಾತ್ಮಕ ನೀತಿ ಅನುಸರಿಸಿದ್ದು ರೋಜರ್​ ಬಿನ್ನಿಯನ್ನು ಕೆರಳಿಸಿದೆ. ಪಿಚ್ ಅರ್ಧಭಾಗ ಬ್ಯಾಟ್ಸ್​ಮನ್​ಗೆ ಸೇರಿದ್ದರೆ, ಬೌಲರ್ ಬೌಲ್ ಮಾಡುವ ತುದಿಯ ಅರ್ಧ ಭಾಗ ಬೌಲರ್​ಗೆ ಸೇರಿದ್ದಾಗಿರುತ್ತದೆ ಎಂದು ಬಿನ್ನಿ ಹೇಳುತ್ತಾರೆ. ಇಂಗ್ಲೆಂಡ್​ನಲ್ಲಿ ಆಡುವಾಗ ಬೌಲರ್​ಗಳು ತಮ್ಮ ಅರ್ಧಭಾಗದಲ್ಲಿ ಬೌಲ್ ಮಾಡದೆ ಬ್ಯಾಟ್ಸ್​ಮನ್​ನ ಅರ್ಧಭಾಗದಲ್ಲಿ ಬೌಲ್ ಮಾಡಬೇಕು ಎಂದು ಬಿನ್ನಿ ಹೇಳುತ್ತಾರೆ.

ಬೌಲರ್ ಯಾವಾಗಲೂ ಬ್ಯಾಟ್ಸ್​ಮನ್​ನ ಹಾಫ್​ನಲ್ಲಿ ಬೌಲ್​ ಮಾಡಬೇಕು, ತನ್ನ ಹಾಫ್​ನಲ್ಲಿ ಅಲ್ಲವೇ ಅಲ್ಲ. ಬ್ಯಾಟ್ಸ್​ಮನ್​ ಹೊಡೆತ ಬಾರಿಸುವಂತೆ ಪ್ರೇರೇಪಿಸಬೇಕು. ಕಡಿಮೆ ಅಂತರದ ಎಸೆತಗಳನ್ನು ಬೌಲ್ ಮಾಡಿದಾಗ ಬಾಲು ಹೆಚ್ಚು ಸ್ವಿಂಗ್​ ಆಗುತ್ತದೆ. ವಿಕೆಟ್ ಪಡೆಯಬೇಕಾದರೆ ನಿಮ್ಮ ದಾಳಿ ಆಕ್ರಮಣಕಾರಿಯಾಗಿರಬೇಕು. ರಕ್ಷಣಾತ್ಮವಾಗಿ ದಾಳಿ ನಡೆಸಿದರೆ ನಿಮಗೆ ವಿಕೆಟ್​ಗಳು ದಕ್ಕುವುದಿಲ್ಲ,’ ಎಂದು ಬಿನ್ನಿ ಹೇಳಿದ್ದಾರೆ.

ಕರ್ನಾಟಕದ ಆರಂಭ ಆಟಗಾರರಾಗಿದ್ದ ಬಿನ್ನಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಅವಕಾಶ ಸಿಗುತ್ತಿತ್ತು. ಬಾರತದ ಪರ ಆಡಿದ 27ಟೆಸ್ಟ್​ಗಳಲ್ಲಿ ಅವರು 5 ಅರ್ಧ ಶತಕಗಳೊಂದಿಗೆ 839 ರನ್ ​ಗಳಿಸಿದರು. ಅಜೇಯ 83 ಅವರ ಗರಿಷ್ಠ ಸ್ಕೋರ್​ ಆಗಿತ್ತು. ಟೆಸ್ಟ್​ಗಳಲ್ಲಿ ಅವರು ಪಡೆದ ವಿಕೆಟ್​ಗಳ ಸಂಖ್ಯೆ 47 ಮತ್ತು 6/56 ಅವರ ಬೆಸ್ಟ್ ಬೌಲಿಂಗ್ ಪರ್ಫಾಮನ್ಸ್ . 67 ಒಡಿಐ ಪಂದ್ಯಗಳಲ್ಲಿ 77 ವಿಕೆಟ್ (4/29 ಅತ್ಯುತ್ತಮ ಪ್ರದರ್ಶನ) ಪಡೆದ ಅವರು 629 ರನ್​ ಗಳಿಸಿದರು, ಅಜೇಯ 57 ಅವರ ಗರಿಷ್ಠ ಸ್ಕೋರ್ ಆಗಿತ್ತು.

ಇದನ್ನೂ ಓದಿ: WTC Final: ಜಡೇಜಾ ಆಲ್​ರೌಂಡರ್ ಕೋಟಾದಲ್ಲಿ ಆಯ್ಕೆಯಾಗಿರಲಿಲ್ಲ! ಟೀಂ ಇಂಡಿಯಾ ಸೋಲಿಗೆ ಕಾರಣ ವಿವರಿಸಿದ ಸಂಜಯ್ ಮಂಜ್ರೇಕರ್

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!