PKL 8: ಬೆಂಗಳೂರು ಬುಲ್ಸ್ಗೆ ಯು ಮುಂಬಾ ಸವಾಲು: ಯಾರು ಬಲಿಷ್ಠ?
Bengaluru Bulls vs U Mumba: ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಇತ್ತ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ ಇದ್ದರೆ, ಅತ್ತ ಫಝಲ್ ಅತ್ರೆಚಲಿ ಇದ್ದಾರೆ. ಇನ್ನು ಡಿಫೆಂಡರ್ಗಳಾಗಿ ಬುಲ್ಸ್ ಪರ ಅಮನ್ ಯಶಸ್ವಿಯಾಗುತ್ತಿದ್ದರೆ, ಯು ಮುಂಬಾ ಪರ ಆಲ್ರೌಂಡರ್ ಆಗಿ ಮೊಹ್ಸನ್ ಮಿಂಚುತ್ತಿದ್ದಾರೆ.
ಪ್ರೋ ಕಬಡ್ಡಿ ಲೀಗ್ನ 78ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದೆ. ಈಗಾಗಲೇ 14 ಪಂದ್ಯಗಳನ್ನಾಡಿರುವ ಬೆಂಗಳೂರು ಬುಲ್ಸ್ ತಂಡವು 8 ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ 12 ಪಂದ್ಯಗಳನ್ನಾಡಿ 4 ಗೆಲುವು ದಾಖಲಿಸಿರುವ ಯು ಮುಂಬಾ 7ನೇ ಸ್ಥಾನದಲ್ಲಿದೆ. ಪ್ರಸ್ತುತ ಪಾಯಿಂಟ್ ಟೇಬಲ್ನಲ್ಲಿ ಬೆಂಗಳೂರು ಬುಲ್ಸ್ ತಂಡವು ಅಗ್ರಸ್ಥಾನ ಅಲಂಕರಿಸಿದರೂ, ಮೊದಲಾರ್ಧದ ಪಂದ್ಯದಲ್ಲಿ ಬುಲ್ಸ್ ತಂಡಕ್ಕೆ ಯು ಮುಂಬಾ ಸೋಲುಣಿಸಿದ್ದರು ಎಂಬುದು ವಿಶೇಷ.
ಅಷ್ಟೇ ಅಲ್ಲದೆ ಪ್ರೋ ಕಬಡ್ಡಿ ಇತಿಹಾಸದಲ್ಲಿ ಬೆಂಗಳೂರು ಬುಲ್ಸ್ ವಿರುದ್ದ ಯು ಮುಂಬಾ ಮೇಲುಗೈ ಸಾಧಿಸುತ್ತಾ ಬಂದಿದೆ. ಏಕೆಂದರೆ ಬೆಂಗಳೂರು ಬುಲ್ಸ್-ಯು ಮುಂಬಾ ಇದುವರೆಗೆ 15 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಯು ಮುಂಬಾ 11 ಬಾರಿ ಗೆಲುವು ದಾಖಲಿಸಿದೆ. ಇನ್ನು ಬೆಂಗಳೂರು ಬುಲ್ಸ್ ಗೆದ್ದಿರುವುದು ಕೇವಲ 4 ಬಾರಿ ಮಾತ್ರ.
ಅಷ್ಟೇ ಅಲ್ಲದೆ ಯು ಮುಂಬಾ ವಿರುದ್ದ ಬೆಂಗಳೂರು ಬುಲ್ಸ್ ಕಲೆಹಾಕಿದ ಗರಿಷ್ಠ ಪಾಯಿಂಟ್ ಅಂದರೆ 35. ಅದೇ ಯು ಮುಂಬಾ ಬೆಂಗಳೂರು ವಿರುದ್ದ 46 ಪಾಯಿಂಟ್ಗಳನ್ನು ಕಲೆಹಾಕಿತ್ತು. ಅದು ಕೂಡ ಈ ಬಾರಿ ಮೊದಲಾರ್ಧದ ಪಂದ್ಯದಲ್ಲಿ ಯು ಮುಂಬಾ 46 ಪಾಯಿಂಟ್ ಕಲೆಹಾಕಿರುವುದು ವಿಶೇಷ.
ಇನ್ನು ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದ್ದು, ಇತ್ತ ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ ಇದ್ದರೆ, ಅತ್ತ ಫಝಲ್ ಅತ್ರೆಚಲಿ ಇದ್ದಾರೆ. ಇನ್ನು ಡಿಫೆಂಡರ್ಗಳಾಗಿ ಬುಲ್ಸ್ ಪರ ಅಮನ್ ಯಶಸ್ವಿಯಾಗುತ್ತಿದ್ದರೆ, ಯು ಮುಂಬಾ ಪರ ಆಲ್ರೌಂಡರ್ ಆಗಿ ಮೊಹ್ಸನ್ ಮಿಂಚುತ್ತಿದ್ದಾರೆ.
ಇಲ್ಲಿ ಒಟ್ಟಾರೆ ಅಂಕಿ ಅಂಶಗಳನ್ನು ಗಮನಿಸಿದರೆ ಯು ಮುಂಬಾ ಮೇಲುಗೈ ಹೊಂದಿರುವುದು ಸ್ಪಷ್ಟ. ಇದಾಗ್ಯೂ ಈ ಬಾರಿ ಬೆಂಗಳೂರು ಬುಲ್ಸ್ ತಂಡವು ಉತ್ತಮ ಪ್ರದರ್ಶನ ನೀಡಿದೆ. ಹೀಗಾಗಿ ದ್ವಿತಿಯಾರ್ಧದ ಮುಖಾಮುಖಿಯಲ್ಲಿ ಯು ಮುಂಬಾಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Pro Kabaddi 2022: Bengaluru Bulls vs U Mumba Head to Head in PKL)