Denmark Open: ಕ್ವಾರ್ಟರ್ ಫೈನಲ್​ನಲ್ಲಿ ಎಡವಿದ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು..!

Denmark Open: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್​ನಲ್ಲಿ ಕೊರಿಯಾದ ಆನ್ ಸೆಯುಂಗ್ ವಿರುದ್ಧ ಸೋಲನುಭವಿಸಿದರು.

Denmark Open: ಕ್ವಾರ್ಟರ್ ಫೈನಲ್​ನಲ್ಲಿ ಎಡವಿದ ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು..!
ಪಿ.ವಿ. ಸಿಂಧು
Follow us
TV9 Web
| Updated By: ಪೃಥ್ವಿಶಂಕರ

Updated on: Oct 22, 2021 | 9:10 PM

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಭಾರತದ ಸ್ಟಾರ್ ಮಹಿಳಾ ಆಟಗಾರ್ತಿ ಪಿವಿ ಸಿಂಧು ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್​ನಲ್ಲಿ ಕೊರಿಯಾದ ಆನ್ ಸೆಯುಂಗ್ ವಿರುದ್ಧ ಸೋಲನುಭವಿಸಿದರು. ಸಿಂಧು, ಆಗಸ್ಟ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಕಂಚಿನ ಪದಕ ಗೆದ್ದ ನಂತರ ತನ್ನ ಮೊದಲ ಪಂದ್ಯವನ್ನು ಆಡುತ್ತಿದ್ದರು. ತನ್ನ ಐದನೇ ಶ್ರೇಯಾಂಕದ ಎದುರಾಳಿಯನ್ನು ಎದುರಿಸಲು ಸಾಧ್ಯವಾಗದ ಸಿಂಧು 36 ನಿಮಿಷಗಳಲ್ಲಿ 11-21, 12-21 ಅಂತರದಲ್ಲಿ ಪಂದ್ಯ ಕೈಚೆಲ್ಲಿದರು.

ಸಿಯಾಂಗ್ ಅದ್ಭುತವಾಗಿ ಆರಂಭಿಸಿದರು ಮತ್ತು ಆರು ನಿಮಿಷಗಳಲ್ಲಿ ಏಳು ಪಾಯಿಂಟ್ ಮುನ್ನಡೆ ಸಾಧಿಸಿದರು. ಸಿಂಧು ಅನೇಕ ಸರಳ ತಪ್ಪುಗಳನ್ನು ಮಾಡಿದರು. ಕೊರಿಯಾದ ಆಟಗಾರ್ತಿ ಅದರ ಲಾಭ ಪಡೆದರು. ನಂತರ 16-8ರಿಂದ ಮುನ್ನಡೆ ಸಾಧಿಸಿದರು. ಎರಡನೇ ಆಟದಲ್ಲೂ ಕಥೆ ಹಾಗೆಯೇ ಇತ್ತು. ವಿರಾಮದವರೆಗೂ, ಸಿಂಧು ಪುನರಾಗಮನ ಮಾಡಲು ಪ್ರಯತ್ನಿಸಿದರು ಆದರೆ ನಂತರ ಆಟವು ಏಕಪಕ್ಷೀಯವಾಯಿತು. ಸಿಂಧು ಗುರುವಾರ ಥೈಲ್ಯಾಂಡ್‌ನ ಬುಸನಾನ್ ಒಂಗ್‌ಬೊಮ್ರಾಂಗ್‌ಫಾನ್ ಅವರನ್ನು 21-16, 12-21, 21-15 ಅಂತರದಲ್ಲಿ 67 ನಿಮಿಷಗಳಲ್ಲಿ ಸೋಲಿಸಿದರು.

ಸಮೀರ್ ವರ್ಮಾ ಗೆದ್ದರು ಇದಕ್ಕೂ ಮುನ್ನ ಭಾರತದ ಸಮೀರ್ ವರ್ಮಾ ಅವರು ವಿಶ್ವದ ಮೂರನೇ ಶ್ರೇಯಾಂಕಿತ ಆಂಡರ್ಸ್ ಆಂಟೊನ್ಸನ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು. ವಿಶ್ವದ 28 ನೇ ಶ್ರೇಯಾಂಕಿತ ಸಮೀರ್ ಸ್ಥಳೀಯ ಆಟಗಾರ ಆಂಟೊನ್ಸನ್ ಅವರನ್ನು 21-14, 21-18 ಅಂತರದಲ್ಲಿ ಸೋಲಿಸಿದರು. ಪುರುಷರ ಸಿಂಗಲ್ಸ್‌ನ ಈ ಪಂದ್ಯವು 50 ನಿಮಿಷಗಳ ಕಾಲ ನಡೆಯಿತು. ಮಧ್ಯಪ್ರದೇಶದ 27 ವರ್ಷದ ಯುವಕ ಮುಂದಿನ ಸುತ್ತಿನಲ್ಲಿ 33 ವರ್ಷದ ಟಾಮಿ ಸುಗಿಯಾರ್ಟೊ ಅವರನ್ನು ಎದುರಿಸಲಿದ್ದಾರೆ. ಲಕ್ಷ್ಯ ಸೇನ್, ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಆಕ್ಸೆಲ್ಸನ್ ಅವರ ವಿರುದ್ಧ ಸುಲಭವಾಗಿ ಸೋತರು. ಆಕ್ಸೆಲ್ಸನ್ ಭಾರತೀಯ ಆಟಗಾರನನ್ನು 21-15, 21-7ರಿಂದ ಸೋಲಿಸಿದರು.

ಈ ಹಿಂದೆ ಸಮೀರ್ ಮತ್ತು ಆಂಟನ್ಸೆನ್ ನಡುವೆ ಆಡಿದ ಆರು ಪಂದ್ಯಗಳಲ್ಲಿ ಭಾರತದ ಆಟಗಾರ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದರು. ಆದಾಗ್ಯೂ, ಸಮೀರ್ ಮೊದಲ ಗೇಮ್‌ನ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿದರು ಮತ್ತು ವಿರಾಮದ ವೇಳೆಗೆ 11-6ರಲ್ಲಿ ಮುಂದಿದ್ದರು. ಇದರ ನಂತರವೂ, ಭಾರತೀಯ ಆಟಗಾರನು ಡ್ಯಾನಿಶ್ ಆಟಗಾರನ ಮರಳುವ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು. ಅವರು ಸತತ ಮೂರು ಅಂಕಗಳನ್ನು ಗಳಿಸುವ ಮೂಲಕ ಮೊದಲ ಗೇಮ್ ಗೆದ್ದರು. ಎರಡನೇ ಗೇಮ್ ಸ್ವಲ್ಪ ಬಿಗಿಯಾಗಿತ್ತು ಆದರೆ ಸಮೀರ್ ಆರಂಭದಲ್ಲಿ 5-3ರಲ್ಲಿ ಎರಡು ಪಾಯಿಂಟ್ ಮುನ್ನಡೆ ಸಾಧಿಸಿದರು ಮತ್ತು ಅರ್ಧ ಸಮಯದಲ್ಲಿ 11-8ರಲ್ಲಿ ಮುಂದಿದ್ದರು. ಇದರ ನಂತರ ಅವರು ಆಂಟನ್ಸನ್​ಗೆ ಪಂದ್ಯಕ್ಕೆ ಮರಳಲು ಯಾವುದೇ ಅವಕಾಶವನ್ನು ನೀಡಲಿಲ್ಲ.

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ