AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೆ ರಿಚರ್ಡ್ಸ್​ರಂತೆ ಪಂತ್ ಸಹ ಭಾರತ ಮತ್ತು ಇಂಗ್ಲೆಂಡ್ ಟೀಮುಗಳ ನಡುವಿನ ವ್ಯತ್ಯಾಸವಾಗಿದ್ದರು: ಇಂಜಮಾಮ್-ಉಲ್-ಹಕ್

ಮೂರನೇ ಒಡಿಐನಲ್ಲಿ ಪಂತ್ ಅವರ 78 ರನ್ ಗಳ ಇನ್ನಿಂಗ್ಸ್ ಅಪ್ರತಿಮವಾಗಿತ್ತು ಎಂದು ಹಕ್ ಹೇಳಿದ್ದಾರೆ. ಬಾರತದ ಇತರ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್​ ಸ್ಪಿನ್​ ಬೌಲರ್​ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪಂತ್ ನಿರಾಯಾಸವಾಗಿ ಗಳಿಸಿದರು ಎಂದು ಹಕ್ ಹೇಳಿದ್ದಾರೆ.

ಹಿಂದೆ ರಿಚರ್ಡ್ಸ್​ರಂತೆ ಪಂತ್ ಸಹ ಭಾರತ ಮತ್ತು ಇಂಗ್ಲೆಂಡ್ ಟೀಮುಗಳ ನಡುವಿನ ವ್ಯತ್ಯಾಸವಾಗಿದ್ದರು: ಇಂಜಮಾಮ್-ಉಲ್-ಹಕ್
ರಿಷಭ್ ಪಂತ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Mar 30, 2021 | 9:28 PM

Share

ಭಾರತದ ವಿಕೆಟ್-ಕೀಪರ್/ಬ್ಯಾಟ್ಸ್​ಮನ್ ರಿಷಭ್ ಪಂತ್ 2020ರವರೆಗೆ ಭಾರತೀಯ ಟೀಮಿನ ಖಾಯಂ ಸದಸ್ಯರಾಗಿರಲಿಲ್ಲ. ಟೀಮಿಗೆ ಆಯ್ಕೆ ಮಾಡಿ ಒಂದೆರಡು ಪಂದ್ಯಗಳು ಆಡಿಸಿದ ನಂತರ ಅವರನ್ನು ಕೈಬಿಡಲಾಗುತ್ತಿತ್ತು. ಅವರ ಕಳಾಹೀನ ಪ್ರದರ್ಶನಗಳು ರಾಷ್ಟ್ರೀಯ ಅಯ್ಕೆ ಸಮಿತಿ ಸದಸ್ಯರನ್ನು ಇಂಪ್ರೆಸ್ ಮಾಡುವುದು ಸಾಧ್ಯವಿರಲಿಲ್ಲ. ಅಲ್ಲದೆ ವಿಕೆಟ್ ಹಿಂದೆಯೂ ಅವರು ಮಹೇಂದ್ರಸಿಂಗ್ ಧೋನಿ ಅಥವಾ ವೃದ್ಧಿಮಾನ್ ಸಹಾರಂತೆ ಪರಿಣಾಮಕಾರಿಯಾಗಿರಲಿಲ್ಲ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಅವರು ಪಂತ್​ರನ್ನು ರಿಪ್ಲೇಸ್ ಮಾಡಿದರು. ಅವರ ಬ್ಯಾಟಿಂಗ್ ಶೈಲಿ ಸೀಮಿತ ಓವರ್​ಗಳ ಕ್ರಿಕೆಟ್ ಹೇಳಿ ಮಾಡಿಸಿದಂತಿದ್ದರೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರನ್ನು ಆ ಆವೃತ್ತಿಯ ಪಂದ್ಯಗಳಿಗೆ ಆಯ್ಕೆ ಮಾಡಲಿಲ್ಲ. ಪ್ರಾಯಶ: ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನಗಳು ಬಾರದೇ ಹೋಗಿದ್ದು ಕಾರಣವಾಗಿರಬಹುದು.

ಆದರೆ, ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಸಿಡ್ನಿಯಲ್ಲಿ ಅವರ ದಿಟ್ಟ ಮತ್ತು ಹೋರಾಟದ ಇನ್ನಿಂಗ್ಸ್ ಭಾರತ ಸೋಲಿನಿಂದ ತಪ್ಪಿಸಿಕೊಳ್ಳಲು ನೆರವಾದರೆ ಬ್ರಿಸ್ಬೇನ್ ಟೆಸ್ಟ್​ನಲ್ಲಿ ಅವರ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಪಂತ್ ವೃತ್ತಿಬದುಕಿನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು. 23 ವರ್ಷ ವಯಸ್ಸಿನ ಈ ಎಡಚ ಸ್ವದೇಶದಲ್ಲಿ ಇಂಗ್ಲೆಂಡ್​ ವಿರುದ್ಧ ಆಡಿದ ಟೆಸ್ಟ್ ಮತ್ತು ಒಡಿಐ ಪಂದ್ಯಗಳಲ್ಲೂ ಆದೇ ಫಾರ್ಮ್​ ಮುಂದುವರೆಸಿ ಭಾರತ ಸರಣಿಗಳನ್ನು ಗೆಲ್ಲುವಲ್ಲಿ ಮಹತ್ತರದ ಪಾತ್ರ ನಿರ್ವಹಿಸಿದರು. ಲಿಮಿಟೆಡ್ ಓವರ್ಸ್ ಕ್ರಿಕೆಟ್​ನಲ್ಲಂತೂ ಅವರು ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟ್ಸ್​ಮನ್ ಆಗಿಬಿಟ್ಟಿದ್ದಾರೆ. ಪಾಕಿಸ್ತಾನ ಮಾಜಿ ಕ್ಯಾಪ್ಟನ್ ಇಂಜಮಾಮ್-ಉಲ್-ಹಕ್ ಅವರ ಪ್ರಕಾರ ಒಂದು ದಿನದ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ವ್ಯತ್ಯಾಸ ಪಂತ್ ಆಗಿದ್ದರು.

‘ಎಂಥ ಅಮೋಘ ಆಟಗಾರ ಈ ಪಂತ್! ನಾವು ಅಂದುಕೊಂಡಿರುವುದಕ್ಕಿಂತಲೂ ಉತ್ತಮವಾಗಿ ಆಡುವ ಆಟಗಾರನೊಬ್ಬನನ್ನು ನಾನು ಬಹಳ ಸಮಯದ ನಂತರ ನೋಡುತ್ತಿದ್ದೇನೆ. ಆವರನ್ನು ಆಸ್ಟ್ರೇಲಿಯಾದಲ್ಲಿ ಭಾರತ ಆಡಿದ ಟೆಸ್ಟ್ ಸರಣಿಯಿಂದ ಗಮನಿಸುತ್ತಿದ್ದೇನೆ. ಒತ್ತಡ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,’ ಎಂದು ತಮ್ಮ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಅಪ್​ಲೋಡ್​ ಮಾಡಿರುವ ವಿಡಿಯೊವೊಂದರಲ್ಲಿ ಹಕ್ ಹೇಳಿದ್ದಾರೆ.

Inzamam-ul-Haq

ಇಂಜಮಾಮ್ -ಉಲ್-ಹಕ್ ಅವರ ವಿಡಿಯೊ

‘ಆಸ್ಟ್ರೇಲಿಯಾದಲ್ಲಿ ಭಾರತದ  ಸೀನಿಯರ್ ಆಟಗಾರರೆಲ್ಲ ಗಾಯಗೊಂಡು ಸರಣಿಯಿಂದ ಹೊರಬಿದ್ದ ನಂತರ ಪಂತ್ ಮಿಡ್ಲ್ ಆರ್ಡರ್​ನಲ್ಲಿ ಲೀಲಾಜಾಲವಾಗಿ ಬ್ಯಾಟ್​ ಮಾಡುತ್ತಿದ್ದುದನ್ನು ನೋಡಿದಾಗ ಭಾರತ ಯಾವುದೇ ವಿಕೆಟ್ ಕಳೆದುಕೊಂಡಿಲ್ಲ ಮತ್ತು ಅವರು ಆಸ್ಟ್ರೇಲಿಯಾದ ಪಿಚ್​ಗಳ ಮೇಲೆಲ್ಲದೆ ಬೇರೆಲ್ಲೋ ಅಡುತ್ತಿರುವಂತೆ ಭಾಸವಾಯಿತು. ಹಿಂದೆ, ಆಸ್ಟ್ರೇಲಿಯಾದ ಪಿಚ್​ಗಳ ಮೇಲೆ ಬ್ಯಾಟ್​ ಮಾಡಲು ಆಟಗಾರರು ಹೆದರುತ್ತಿದ್ದರು. ಅದರೆ, ಪಂತ್ ಅವರಲ್ಲಿ ಅಂಥ ಆತಂಕ ಗೋಚರಿಸಲೇ ಇಲ್ಲ. 70 ರ ದಶಕದಲ್ಲಿ ವೆಸ್ಟ್​ ಇಂಡೀಸ್ ಮತ್ತು ಇತರ ತಂಡಗಳ ನಡುವಿನ ವ್ಯತ್ಯಾಸ ವಿವ್ ರಿಚರ್ಡ್ಸ್​ ಆಗಿರುತ್ತಿದ್ದರು. ಹಾಗೆಯೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಸರಣಿಯಲ್ಲಿ ಎರಡು ತಂಡಗಳ ನಡುವಿನ ವ್ಯತ್ಯಾಸ ಪಂತ್ ಆಗಿದ್ದರು,’ ಎಂದು ವಿಡಿಯೊದಲ್ಲಿ ಹಕ್ ಹೇಳಿದ್ದಾರೆ.

ಮೂರನೇ ಒಡಿಐನಲ್ಲಿ ಪಂತ್ ಅವರ 78 ರನ್ ಗಳ ಇನ್ನಿಂಗ್ಸ್ ಅಪ್ರತಿಮವಾಗಿತ್ತು ಎಂದು ಹಕ್ ಹೇಳಿದ್ದಾರೆ. ಬಾರತದ ಇತರ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್​ ಸ್ಪಿನ್​ ಬೌಲರ್​ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪಂತ್ ನಿರಾಯಾಸವಾಗಿ ಗಳಿಸಿದರು ಎಂದು ಹಕ್ ಹೇಳಿದ್ದಾರೆ.

‘ಸ್ಪಿನ್ನರ್​ಗಳ ವಿರುದ್ಧ ಆ ಪಿಚ್​ನಲ್ಲಿ ರನ್ ಗಳಿಸುವುದು ಬಹಳ ಪ್ರಯಾಸಕರವಾಗಿತ್ತು, ವಿರಾಟ್​ ಕೊಹ್ಲಿ ಅವರು ಮೊಯೀನ್​ಗೆ ಕ್ಲೀನ್ ಬೌಲ್ಡ್​ ಅಗಿದ್ದನ್ನು ನಾನು ನೋಡಿದೆ. ಆದರೆ ಅದೇ ಪಿಚ್​ನಲ್ಲಿ ಪಂತ್ ಕೇವಲ 62 ಎಸೆತಗಳಲ್ಲಿ 100 ಕ್ಕಿಂತ ಹೆಚ್ಚಿನ ಸ್ಟ್ರೈಕ್​ರೇಟ್​ನೊಂದಿಗೆ 78 ರನ್ ಬಾರಿಸಿದರು. ಬೇರೆ ಯಾವುದೇ ಆಟಗಾರ100 ರ ಸ್ಟ್ರೈಕ್​ರೇಟ್​ನೊಂದಿಗೆ ರನ್​ ಗಳಿಸಲಿಲ್ಲ,‘ ಎಂದು ಹಕ್ ಹೇಳಿದ್ದಾರೆ.

‘ಬ್ಯಾಟಿಂಗ್​ನಲ್ಲಿ ಪಂತ್​ಗೆ ಬಡ್ತಿ ನೀಡುವ ಕೊಹ್ಲಿಯ ನಿರ್ಧಾರ ಸ್ಪಾಟ್​ ಆನ್ ಆಗಿತ್ತು. ಭಾರತ ಮೂವರ ಸೀನಿಯರ್ ಆಟಗಾರರನ್ನು (ರೋಹಿತ್ ಶರ್ಮ, ಶಿಖರ್ ಧವನ್ ಮತ್ತು ಕೊಹ್ಲಿ) ಕಳೆದುಕೊಂಡಿದ್ದರಿಂದ ಉಳಿದ ಆಟಗಾರರ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು. ಆದರೆ ಪಂತ್ ಅವರ ಅದ್ಭುತವಾದ ಸ್ಟ್ರೋಕ್ ಪ್ಲೇ ಒತ್ತಡವನ್ನು ಸಂಪೂರ್ಣವಾಗಿ ಇಲ್ಲವಾಗಿಸಿತು,’ ಎಂದು ಹಕ್ ಹೇಳಿದ್ದಾರೆ.

ಇದನ್ನೂ ಓದಿ:  India vs Australia Test Series ನಾವು ಪಂತ್​ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ

Published On - 8:47 pm, Tue, 30 March 21

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ