Pro Kabaddi 2021: ರೋಹಿತ್ ಅನ್​ಫಿಟ್​, ಆದ್ರೂ ಯುವಕರಿಗೆ ಚಾನ್ಸ್ ನೀಡ್ತಿಲ್ಲ ಎಂದ ಮಾಜಿ ಕೋಚ್

Pro Kabaddi 2021: ರೋಹಿತ್ ಅನ್​ಫಿಟ್​, ಆದ್ರೂ ಯುವಕರಿಗೆ ಚಾನ್ಸ್ ನೀಡ್ತಿಲ್ಲ ಎಂದ ಮಾಜಿ ಕೋಚ್

Rohit Kumar: ರೋಹಿತ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ರೈಡರ್‌ಗಳಿಗೆ ಟ್ಯಾಕಲ್‌ನಿಂದ ಹೊರಬರಲು ಬ್ಯಾಕ್ ಸ್ಟ್ರಾಂಗ್ ಇರಬೇಕು. ಇದೀಗ ಬೆನ್ನು ನೋವಿನಿಂದಾಗಿ ಅವರಿಗೆ ಚೆನ್ನಾಗಿ ಆಡಲಾಗುತ್ತಿಲ್ಲ.

TV9kannada Web Team

| Edited By: Zahir PY

Jan 08, 2022 | 7:42 PM

ಪ್ರೋ ಕಬಡ್ಡಿ ಲೀಗ್ ಸೀಸನ್​ 8 ರಲ್ಲಿ ತೆಲುಗು ಟೈಟನ್ಸ್ ತಂಡವು ಪಾಯಿಂಟ್ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಇನ್ನು 4 ಪಂದ್ಯಗಳನ್ನು ಟೈ ಮಾಡಿಕೊಂಡರೆ, 2 ರಲ್ಲಿ ಸೋತಿದೆ. ತಂಡದಲ್ಲಿ ರೋಹಿತ್ ಕುಮಾರ್ ಅವರಂತಹ ಸ್ಟಾರ್ ಆಟಗಾರರಿದ್ದರೂ ಕಳಪೆ ಪ್ರದರ್ಶನಕ್ಕೆ ಕಾರಣವೇನು ಎಂಬುದನ್ನು ತೆಲುಗು ಟೈಟನ್ಸ್ ತಂಡದ ಮಾಜಿ ಕೋಚ್ ಶ್ರೀನಿವಾಸ್ ರೆಡ್ಡಿ ಬಹಿರಂಗಪಡಿಸಿದ್ದಾರೆ.

ತೆಲುಗು ಟೈಟನ್ಸ್ ತಂಡದಲ್ಲಿ ಸ್ಟಾರ್ ರೈಡರ್ ಸಿದ್ಧಾರ್ಥ್ ದೇಸಾಯಿ ಗಾಯದ ಕಾರಣ ಆಡ್ತಿಲ್ಲ. ಇದೀಗ ನಾಯಕ ರೋಹಿತ್ ಕುಮಾರ್ ಅವರು ಸಹ ಗಾಯಗೊಂಡಿದ್ದಾರೆ. ಫಿಟ್​ನೆಸ್​ ಸಮಸ್ಯೆ ಕಾರಣ ರೋಹಿತ್​ಗೆ ಚೆನ್ನಾಗಿ ಆಡಲು ಸಾಧ್ಯವಾಗುತ್ತಿಲ್ಲ. ಅವರು 100% ಫಿಟ್​ ಆಗಿರದ ಕಾರಣ ಅವರಿಂದ ಉತ್ತಮ ಪ್ರದರ್ಶನ ಮೂಡಿ ಬರುತ್ತಿಲ್ಲ ಎಂದು ಮಾಜಿ ಕೋಚ್ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ರೋಹಿತ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ರೈಡರ್‌ಗಳಿಗೆ ಟ್ಯಾಕಲ್‌ನಿಂದ ಹೊರಬರಲು ಬ್ಯಾಕ್ ಸ್ಟ್ರಾಂಗ್ ಇರಬೇಕು. ಇದೀಗ ಬೆನ್ನು ನೋವಿನಿಂದಾಗಿ ಅವರಿಗೆ ಚೆನ್ನಾಗಿ ಆಡಲಾಗುತ್ತಿಲ್ಲ. ಇದಾಗ್ಯೂ ಅವರು ತಂಡದ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸಲು ಆಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಅಂದುಕೊಂಡಂತೆ ಆಡಲಾಗುತ್ತಿಲ್ಲ ಎಂದು ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

ರೋಹಿತ್ ಮ್ಯಾನೇಜ್‌ಮೆಂಟ್ ಮತ್ತು ಕೋಚ್‌ನೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅವರು 4-5 ಅಂಕಗಳನ್ನು ಗಳಿಸಿದರೂ ಅದು ಮುಖ್ಯವಾಗುತ್ತದೆ. ಆದರೆ ಇದೀಗ ಅವರು ಚೆನ್ನಾಗಿ ರೈಡ್ ಮಾಡಲಾಗುತ್ತಿಲ್ಲ. ನಾಯಕನಾಗಿ ಸರಿಯಾದ ಇನ್​ಪುಟ್​ಗಳನ್ನು ನೀಡುತ್ತಿಲ್ಲ. ಹೀಗಾಗಿ ಆಡುತ್ತಿದ್ದರೂ ಅಥವಾ ಆಡದಿದ್ದರೂ ವ್ಯತ್ಯಾಸವಿಲ್ಲ ಎಂದು ತೆಲುಗು ಟೈಟನ್ಸ್ ಮಾಜಿ ಕೋಚ್ ಅಭಿಪ್ರಾಯಪಟ್ಟರು.

ರೋಹಿತ್ ಕುಮಾರ್​ಗೆ ಆಡಲು ಸಾಧ್ಯವಾಗದಿದ್ದರೆ ಹೊರಗುಳಿಯುವುದು ಉತ್ತಮ ಎಂದಿರುವ ರೆಡ್ಡಿ, ಅವರ ಬದಲಿಗೆ ಒಬ್ಬ ಯುವ ಆಟಗಾರ ಉತ್ತಮ ಪ್ರದರ್ಶನ ನೀಡಬಹುದು. ಇದಾಗ್ಯೂ ರೋಹಿತ್ 100% ಫಿಟ್​ ಇಲ್ಲದೆ ಆಡುವುದರಿಂದ ತಂಡದ ಸಮತೋಲನವನ್ನು ಹಾಳು ಮಾಡಿದಂತಾಗುತ್ತದೆ. ಅಷ್ಟೇ ಅಲ್ಲದೆ ಒಬ್ಬ ಆಟಗಾರನ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ ಎಂದು ಮಾಜಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Rohit Kumar is not fit: Telugu Titans coach Srinivas Reddy)

Follow us on

Most Read Stories

Click on your DTH Provider to Add TV9 Kannada