RR vs KKR Predicted Playing 11: ರಾಜಸ್ಥಾನ್ ರಾಯಲ್ಸ್- ಕೋಲ್ಕತ್ತಾ ನೈಟ್ ರೈಡರ್ಸ್ ಹಣಾಹಣಿ; ಕೋಲ್ಕತ್ತಾ ತಂಡದಲ್ಲಿ ಮುಖ್ಯ ಬದಲಾವಣೆ?
ಕೋಲ್ಕತ್ತಾ ನೈಟ್ ರೈಡರ್ಸ್ 2 ಅಂಕ ಹಾಗೂ -0.700 ನೆಟ್ ರನ್‌ರೇಟ್ ಪಡೆದು 7ನೇ ಸ್ಥಾನದಲ್ಲಿ ಇದ್ದರೆ, ರಾಜಸ್ಥಾನ್ ರಾಯಲ್ಸ್ 2 ಅಂಕ ಮತ್ತು -1.011 ನೆಟ್ ರನ್‌ರೇಟ್ ಹೊಂದಿ ಕೊನೆಯ ಸ್ಥಾನದಲ್ಲಿದೆ.

ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಇಂದು (ಏಪ್ರಿಲ್ 23) ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದಿರುವ ಉಭಯ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 2 ಅಂಕ ಹಾಗೂ -0.700 ನೆಟ್ ರನ್‌ರೇಟ್ ಪಡೆದು 7ನೇ ಸ್ಥಾನದಲ್ಲಿ ಇದ್ದರೆ, ರಾಜಸ್ಥಾನ್ ರಾಯಲ್ಸ್ 2 ಅಂಕ ಮತ್ತು -1.011 ನೆಟ್ ರನ್‌ರೇಟ್ ಹೊಂದಿ ಕೊನೆಯ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿ ಇರುವ ತಂಡಗಳ ಹಣಾಹಣಿಯಲ್ಲಿ ಯಾರು ಪುಟಿದೇಳುತ್ತಾರೆ ಎಂದು ಕಾದುನೋಡಬೇಕಿದೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಎರಡೂ ತಂಡಗಳು ಉತ್ತಮ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಆದರೂ ಯಶಸ್ವಿ ಪ್ರದರ್ಶನದ ಕೊರತೆಯಿಂದಾಗಿ ಮೂರು ಪಂದ್ಯದಲ್ಲಿ ಸೋಲು ಕಂಡಿವೆ. ಕೋಲ್ಕತ್ತಾ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬ್ಯಾಟಿಂಗ್ ವೈಫಲ್ಯ ಜೊತೆಗೆ ಬೌಲಿಂಗ್ ವಿಭಾಗ ಕೂಡ ಅಬ್ಬರಿಸಿಲ್ಲ. ರಾಜಸ್ಥಾನ್ ತಂಡದಲ್ಲಿ ಬೌಲರ್‌ಗಳ ಸಂಖ್ಯೆ ಅಧಿಕವಾಗಿದೆ. ವಿಕೆಟ್ ಕಬಳಿಸುವ ಪ್ರದರ್ಶನ ಕಂಡುಬರಬೇಕಿದೆ. ಒಟ್ಟಾರೆ, ತಂಡದ ಪ್ರದರ್ಶನವು ಎರಡು ತಂಡಕ್ಕೂ ಸದ್ಯ ಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಯಾವುದೃ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಇದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಸುನಿಲ್ ನರೈನ್ ಆಡುತ್ತಾರಾ ಅಥವಾ ಬೆನ್ ಕಟಿಂಗ್ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಎಂಬ ಅನುಮಾನವಿದೆ. ಕೋಲ್ಕತ್ತಾ ಬೌಲರ್‌ಗಳು ವಿಕೆಟ್ ಪಡೆಯುವುದು ಅವಶ್ಯವಾಗಿದೆ. ಹಾಗಾಗಿ ಈ ಆಲ್ರೌಂಡರ್ ಆಟಗಾರನನ್ನು ಆಡಿಸಿ, ಬದಲಾವಣೆ ನೋಡುವ ಸಾಧ್ಯತೆ ಇದೆ.
ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ತಂಡ: 1) ಜೋಸ್ ಬಟ್ಲರ್ 2) ಮನನ್ ವೊಹ್ರಾ 3) ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್) 4) ಶಿವಂ ದುಬೆ 5) ಡೇವಿಡ್ ಮಿಲ್ಲರ್ 6) ರಿಯಾನ್ ಪರಾಗ್ 7) ರಾಹುಲ್ ತೆವಾಟಿಯಾ 8) ಕ್ರಿಸ್ ಮೋರಿಸ್ 9) ಜಯದೇವ್ ಉನಾದ್ಕತ್ 10) ಚೇತನ್ ಸಕರಿಯಾ 11) ಮುಸ್ತಾಫಿಜುರ್ ರಹಮಾನ್
ಕೋಲ್ಕತ್ತಾ ನೈಟ್ ರೈಡರ್ಸ್ ಸಂಪೂರ್ಣ ತಂಡ: 1) ನಿತೀಶ್ ರಾಣಾ 2) ಶುಬ್ಮನ್ ಗಿಲ್ 3) ರಾಹುಲ್ ತ್ರಿಪಾಠಿ 4) ಇಯೊನ್ ಮೋರ್ಗಾನ್ (ನಾಯಕ) 5) ಆಂಡ್ರೆ ರಸ್ಸೆಲ್ 6) ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್) 7) ಪ್ಯಾಟ್ ಕಮ್ಮಿನ್ಸ್ 8) ಸುನಿಲ್ ನರೈನ್/ ಬೆನ್ ಕಟಿಂಗ್ 9) ಹರ್ಭಜನ್ ಸಿಂಗ್ 10) ಪ್ರಸಿದ್ಧ್ ಕೃಷ್ಣ 11) ವರುಣ್ ಚಕ್ರವರ್ತಿ
ಇದನ್ನೂ ಓದಿ: IPL 2021: ಆರ್ಸಿಬಿಯಲ್ಲಿ ಇಬ್ಬರು 360 ಡಿಗ್ರಿ ಆಟಗಾರರಿದ್ದಾರೆ, ಬೌಲರ್ಸ್ ಆದ್ರೂ ಏನ್ ಮಾಡ್ಬೇಕು?: ಸುನಿಲ್ ಗಾವಸ್ಕರ್
IPL 2021: ಪಂಜಾಬ್- ಮುಂಬೈ ಪಂದ್ಯದ ಬಳಿಕ ಚೆನ್ನೈ ಪಿಚ್ ಬಗ್ಗೆ ಅಪಸ್ವರ ಎತ್ತಿದ ಕ್ರಿಕೆಟಿಗರು; ಕಾರಣವೇನು?
(RR vs KKR Team Prediction Ben Cutting may get into Playing 11 IPL 2021)
Published On - 5:29 pm, Sat, 24 April 21