- TV9 Kannada Photo gallery Cricket photos Shafali Verma Shatters Two World Records in T20I: Most Runs and Sixes in a Calendar Year!
ಒಂದೇ ಪಂದ್ಯದಲ್ಲಿ ಎರಡೆರಡು ವಿಶ್ವ ದಾಖಲೆಗಳನ್ನು ಮುರಿದ ಶಫಾಲಿ ವರ್ಮಾ
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ತಂದ ಶಫಾಲಿ ವರ್ಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ 48 ರನ್ ಗಳಿಸಿ ಮಿಂಚಿದ ಅವರು, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು T20I ರನ್‌ಗಳು (863) ಮತ್ತು ಅತಿ ಹೆಚ್ಚು ಸಿಕ್ಸರ್‌ಗಳು (38) ಬಾರಿಸಿದ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಲಾರಾ ವಾಲ್ವೂರ್ಟ್ ಮತ್ತು ಚಾಮರಿ ಅಟಪಟ್ಟು ಅವರ ದಾಖಲೆಗಳನ್ನು ಮುರಿದು, ಶಫಾಲಿ ವರ್ಮಾ ಇತಿಹಾಸ ಸೃಷ್ಟಿಸಿದ್ದಾರೆ.
Updated on: Sep 22, 2026 | 10:15 PM

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶ್ರೀಲಂಕಾ ವಿರುದ್ಧದ ಚಿನ್ನದ ಪದಕದ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಬೃಹತ್ ಸಿಕ್ಸರ್‌ಗಳ ಸಹಾಯದಿಂದ 48 ರನ್ ಬಾರಿಸಿದರು. ಕೇವಲ 2 ರನ್ಗಳಿಂದ ಅರ್ಧಶತಕವಂಚಿತರಾದರೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ(PC-BCCI Women x).

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಶಫಾಲಿ ವರ್ಮಾ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ 2026 ರಲ್ಲಿ ಅವರು ಒಟ್ಟು 863 ರನ್‌ಗಳನ್ನು ಕಲೆಹಾಕಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ(PC-BCCI Women x).

ಈ ಮೂಲಕ ಶಫಾಲಿ ವರ್ಮಾ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವಾಲ್ವೂರ್ಟ್ (824 ರನ್) ಅವರ ದಾಖಲೆಯನ್ನು ಮುರಿದಿದ್ದಾರೆ. ಲಾರಾ ವಾಲ್ವೂರ್ಟ್ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 824 ರನ್ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಆದರೀಗ ಆ ದಾಖಲೆ ಶಫಾಲಿ ಪಾಲಾಗಿದೆ. ಇನ್ನು ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಈ ಪಟ್ಟಿಯಲ್ಲಿದ್ದಾರೆ(PC-BCCI Women x).

ರನ್‌ಗಳ ವಿಷಯದಲ್ಲಿ ಮಾತ್ರವಲ್ಲದೆ, ಸಿಕ್ಸರ್‌ಗಳನ್ನು ಬಾರಿಸುವ ವಿಷಯದಲ್ಲೂ ಶಫಾಲಿ ವರ್ಮಾ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಶ್ರೀಲಂಕಾ ವಿರುದ್ಧ ಅವರು ಹೊಡೆದ 3 ಸಿಕ್ಸರ್‌ಗಳು ಸೇರಿದಂತೆ, ಈ ವರ್ಷವೊಂದರಲ್ಲೇ ಅವರು ಒಟ್ಟು 38 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ(PC-BCCI Women x).

ಈ ಮೂಲಕ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ವರ್ಷದಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ, ಅವರು ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು (32 ಸಿಕ್ಸರ್‌ಗಳು) ಮತ್ತು ಇತರ ಆಟಗಾರ್ತಿಯರ ದಾಖಲೆಗಳನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಆಗಿದ್ದಾರೆ(PC-BCCI Women x).

ಶಫಾಲಿ ವರ್ಮಾ ಏಷ್ಯನ್ ಗೇಮ್ಸ್ ಟೂರ್ನಿಯಾದ್ಯಂತ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆಡಿದ 3 ಪಂದ್ಯಗಳಲ್ಲಿ 188 ರನ್ ಕಲೆಹಾಕಿ ಈ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ಅಜೇಯ 100 ರನ್, ಜಪಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ 40 ರನ್‌ಗಳ ಇನ್ನಿಂಗ್ಸ್ ಆಡಿದ್ದರು(PC-BCCI Women x).




