
ಚೆನ್ನೈ: ಸೂಪರ್ ಓವರ್ವರೆಗೆ ಮುಂದುವರಿದಿದ್ದ ರೋಚಕ ಪಂದ್ಯಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಕಂಡಿದೆ. ಸನ್ರೈಸರ್ಸ್ ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ ವ್ಯರ್ಥವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಸನ್ರೈಸರ್ಸ್ ತಂಡ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು. ಕೇನ್ ವಿಲಿಯಮ್ಸನ್ 66 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದರು. ಆದರೆ, ಸೂಪರ್ ಓವರ್ ಹಂತಕ್ಕೆ ತಲುಪಿದ ಪಂದ್ಯದಲ್ಲಿ ಡೆಲ್ಲಿ ಗೆಲುವು ಕಂಡಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ತಂಡ 8 ರನ್ ಗಳಿಸಿತ್ತು. ಅದನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೆನ್ನತ್ತಿ ಗೆಲುವು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತ್ತು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 160 ರನ್ ಗುರಿ ನೀಡಿತ್ತು. ಡೆಲ್ಲಿ ಪರ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅಮೋಘ ಆರಂಭ ನೀಡಿದ್ದರು. ಶಾ 39 ಬಾಲ್ಗೆ 53 ಹಾಗೂ ಧವನ್ 26 ಬಾಲ್ಗೆ 28 ಗಳಿಸಿದ್ದರು. ಈ ಎರಡು ವಿಕೆಟ್ ಪತನದ ಬಳಿಕ ರನ್ ವೇಗ ಕುಸಿತ ಕಂಡಿತ್ತು. ನಂತರ ನಾಯಕ ರಿಷಭ್ ಪಂತ್ 37, ಸ್ಟೀವ್ ಸ್ಮಿತ್ 34 ರನ್ ಗಳಿಸಿ ತಂಡದ ಮೊತ್ತ 150 ದಾಟುವಂತೆ ಮಾಡಿದ್ದರು.
ಪಂದ್ಯದ ಸಂಪೂರ್ಣ ವಿವರ ಈ ಕೆಳಗಿದೆ.
ಸೂಪರ್ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಕಂಡಿದೆ. ಸನ್ರೈಸರ್ಸ್ ಹೈದರಾಬಾದ್ ಸೋಲುಂಡಿದೆ.
ಸೂಪರ್ ಓವರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿದ್ದು, ಕೇನ್ ವಿಲಿಯಮ್ಸನ್ ಹಾಗೂ ಡೇವಿಡ್ ವಾರ್ನರ್ ಆಡಿದ್ದಾರೆ. ಅಕ್ಸರ್ ಪಟೇಲ್ ಬೌಲಿಂಗ್ ಮಾಡಿದ್ದಾರೆ. 1 ಓವರ್ನಲ್ಲಿ 8 ರನ್ ಗಳಿಸಿದ್ದಾರೆ.
ಸನ್ರೈಸರ್ಸ್ ಹಾಗೂ ಡೆಲ್ಲಿ ಪಂದ್ಯ ಟೈ ಆಗಿದ್ದು, ಇದು ಈ ಐಪಿಎಲ್ ಟೂರ್ನಿಯ ಮೊದಲ ಸೂಪರ್ ಓವರ್ ಪಂದ್ಯವಾಗಿದೆ. ಯಾರು ಗೆಲ್ಲುತ್ತಾರೋ ನೋಡಬೇಕಿದೆ..
ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಟೈ ಆಗಿದೆ. ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟದಿಂದ ಸನ್ರೈಸರ್ಸ್ 159 ರನ್ ದಾಖಲಿಸಿತ್ತು. ಪಂದ್ಯವೀಗ ಟೈ ಆಗಿದ್ದು, ಸೂಪರ್ ಓವರ್ನತ್ತ ಮುಖ ಮಾಡಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 6 ಬಾಲ್ಗೆ 16 ರನ್ ಬೇಕಿದೆ. 19 ಓವರ್ ಅಂತ್ಯಕ್ಕೆ ಸನ್ರೈಸರ್ಸ್ ಹೈದರಾಬಾದ್ 7 ವಿಕೆಟ್ ಕಳೆದುಕೊಂಡು 144 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ 61 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ಕಳೆದುಕೊಂಡಿದೆ. ವಿಜಯ್ ಶಂಕರ್ ಔಟ್ ಆಗಿದ್ದಾರೆ. ತಂಡದ ಗೆಲುವಿಗೆ 8 ಬಾಲ್ಗೆ 20 ರನ್ ಬೇಕಿದೆ. ಕೇನ್ ವಿಲಿಯಮ್ಸನ್ ಹಾಗೂ ಜಗದೀಶ್ ಸುಚಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಅಭಿಷೇಕ್ ಔಟಾದ ಬೆನ್ನಲ್ಲೇ ರಶೀದ್ ಖಾನ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. ಅಕ್ಸರ್ ಪಟೇಲ್ ಬಾಲ್ಗೆ ಎಲ್ಬಿಡಬ್ಲ್ಯು ಆಗಿದ್ದಾರೆ. ವಿಜಯ್ ಶಂಕರ್ ಹಾಗೂ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡ ಗೆಲ್ಲಲು 18 ಬಾಲ್ಗೆ 39 ರನ್ ಬೇಕಿದೆ. ಸನ್ರೈಸರ್ಸ್ 17 ಓವರ್ಗೆ 121 ರನ್ ಗಳಿಸಿದ್ದು 6 ವಿಕೆಟ್ ಕಳೆದುಕೊಂಡಿದೆ.
6 ಬಾಲ್ಗೆ 5 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ಅಕ್ಸರ್ ಪಟೇಲ್ ಬಾಲ್ಗೆ ಎಲ್ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಗೆಲುವಿಗೆ 23 ಬಾಲ್ಗೆ 43 ರನ್ ಬೇಕಿದೆ. ಕೇನ್ ವಿಲಿಯಮ್ಸನ್ ಮೇಲೆ ಸನ್ರೈಸರ್ಸ್ ತಂಡ ಗೆಲ್ಲಿಸುವ ಒತ್ತಡವಿದೆ.
ಸನ್ರೈಸರ್ಸ್ ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ ಅರ್ಧಶತಕ ಪೂರೈಸಿದ್ದಾರೆ. 42 ಬಾಲ್ಗೆ 51 ರನ್ ಗಳಿಸಿ ಅವರು ಆಡುತ್ತಿದ್ದಾರೆ. ತಂಡ ಗೆಲ್ಲಲು 24 ಬಾಲ್ಗೆ 43 ರನ್ ಬೇಕಿದೆ. ಅಭಿಷೇಕ್ ಶರ್ಮಾ ಕ್ರೀಸ್ನಲ್ಲಿದ್ದಾರೆ. ಎಸ್ಆರ್ಎಚ್ 16 ಓವರ್ಗೆ 117 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ.
9 ಬಾಲ್ಗೆ 9 ರನ್ ಗಳಿಸಿ ಕೇದಾರ್ ಜಾಧವ್ ವಿಕೆಟ್ ಒಪ್ಪಿಸಿದ್ದಾರೆ. ಅಮಿತ್ ಮಿಶ್ರಾ ಬೌಲಿಂಗ್ಗೆ ಸ್ಟಂಪ್ ಔಟ್ ಆಗಿದ್ದಾರೆ. ತಂಡದ ಗೆಲುವಿಗೆ 34 ಬಾಲ್ಗೆ 56 ರನ್ ಬೇಕಾಗಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ 100 ರನ್ ದಾಖಲಿಸಿ ಆಡುತ್ತಿದೆ. 14 ಓವರ್ಗೆ 3 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ 37 ಬಾಲ್ಗೆ 44 ರನ್ ಹಾಗೂ ಕೇದಾರ್ ಜಾಧವ್ 7 ಬಾಲ್ಗೆ 9 ರನ್ ಪೇರಿಸಿದ್ದಾರೆ. ಗೆಲ್ಲಲು 36 ಬಾಲ್ಗೆ 56 ರನ್ ಬೇಕಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ 12 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 88 ರನ್ ದಾಖಲಿಸಿದೆ. ಸನ್ರೈಸರ್ಸ್ ಪರ ಕೇನ್ ವಿಲಿಯಮ್ಸನ್ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ಮತ್ತೊಂದು ವಿಕೆಟ್ ಪತನವಾಗಿದೆ. ವಿರಾಟ್ ಸಿಂಗ್ 14 ಬಾಲ್ಗೆ 4 ರನ್ ಗಳಿಸಿ ಅವೇಶ್ ಖಾನ್ ಬಾಲ್ಗೆ ಸ್ಟಾಯಿನಿಸ್ಗೆ ಕ್ಯಾಚ್ ನೀಡಿದ್ದಾರೆ.
ಕೇನ್ ವಿಲಿಯಮ್ಸನ್ ಉತ್ತಮ ಆಟ ಆಡುತ್ತಿದ್ದಾರೆ. 28 ಬಾಲ್ಗೆ 34 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 11 ಓವರ್ ಅಂತ್ಯಕ್ಕೆ 84 ರನ್ ಗಳಿಸಿರುವ ಸನ್ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 54 ಬಾಲ್ಗೆ 76 ರನ್ ಬೇಕಿದೆ. ವಿಜಯ್ ಶಂಕರ್, ಅಭಿಷೇಕ್ ಶರ್ಮಾ ಬ್ಯಾಟಿಂಗ್ಗೆ ಬಾಕಿ ಇದ್ದಾರೆ.
9 ಓವರ್ಗಳ ಅಂತ್ಯಕ್ಕೆ ಸನ್ರೈಸರ್ಸ್ ಹೈದರಾಬಾದ್ ತಂಡ 2 ವಿಕೆಟ್ ಕಳೆದುಕೊಂಡು 72 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ 21 ಬಾಲ್ಗೆ 25 ಹಾಗೂ ವಿರಾಟ್ ಸಿಂಗ್ 7 ಬಾಲ್ಗೆ 2 ರನ್ ಗಳಿಸಿ ಆಡುತ್ತಿದ್ದಾರೆ. ಗೆಲ್ಲಲು 66 ಬಾಲ್ಗೆ 88 ರನ್ ಬೇಕಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು 72 ಬಾಲ್ಗೆ 96 ರನ್ ಬೇಕಾಗಿದೆ. 8 ಓವರ್ಗೆ 2 ವಿಕೆಟ್ ಕಳೆದುಕೊಂಡಿರುವ ಎಸ್ಆರ್ಎಚ್ 64 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ ಹಾಗೂ ವಿರಾಟ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
38 ರನ್ ಗಳಿಸಿದ್ದ ಬೈರ್ಸ್ಟೋ ಅವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಔಟಾಗುವುದಕ್ಕೂ ಮುನ್ನ ಬೈರ್ಸ್ಟೋ 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು.
ನಿಗದಿತ 20 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಿದೆ. ಸನ್ರೈಸರ್ಸ್ ಗೆಲ್ಲಲು 160 ರನ್ಗಳ ಟಾರ್ಗೆಟ್ ನೀಡಿದೆ. ಡೆಲ್ಲಿ ಪರ ಸ್ಮಿತ್ 34 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗೆ 4 ವಿಕೆಟ್ ಕಳೆದುಕೊಂಡು 145 ರನ್ ದಾಖಲಿಸಿದೆ. ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಔಟಾದ ಬೆನ್ನಲ್ಲೇ ಹೆಟ್ಮಿಯರ್ ಕೂಡ ನಿರ್ಗಮಿಸಿದ್ದಾರೆ. 2 ಬಾಲ್ಗೆ 1 ರನ್ ದಾಖಲಿಸಿದ ಅವರು ಸಿದ್ಧಾರ್ಥ್ ಕೌಲ್ ಬಾಲ್ಗೆ ವಿಲಿಯಮ್ಸನ್ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 27 ಬಾಲ್ಗೆ 37 ರನ್ ಗಳಿಸಿ ಔಟ್ ಆಗಿದ್ದಾರೆ. ಸಿದ್ಧಾರ್ಥ್ ಕೌಲ್ ಬೌಲಿಂಗ್ಗೆ ಸುಚಿತ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.
ಐಪಿಎಲ್ ಟೂರ್ನಿಯ ಫೇರ್ ಪ್ಲೇ ಅವಾರ್ಡ್ ಪಟ್ಟಿಯಲ್ಲಿ ಯಾವ ತಂಡ ಎಲ್ಲಿದೆ ಎಂದು ಇಲ್ಲಿ ಮಾಹಿತಿ ಇದೆ.
18 ಓವರ್ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ 142 ರನ್ ಕಲೆಹಾಕಿದೆ. ಡೆಲ್ಲಿ ಪರ ರಿಷಭ್ ಪಂತ್ 37 ಮತ್ತು ಸ್ಮಿತ್ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 17ಮೇ ಓವರ್ಗೆ 130 ರನ್ ಗಡಿ ದಾಟಿದ್ದಾರೆ. 2 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾರೆ.
ಪಂದ್ಯದಲ್ಲಿ ವಿಜಯ್ ಶಂಕರ್ ಬೌಲಿಂಗ್ ಮಾಡಿದ ಆ ಒಂದು ಬಾಲ್ ಹೇಗಿತ್ತು? ಇಲ್ಲಿ ನೋಡಿ..
ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿದೆ. ಮೊದಲ ಎರಡು ವಿಕೆಟ್ ಪತನದ ಬಳಿಕ ಡೆಲ್ಲಿ ರನ್ ವೇಗ ಇಳಿಕೆಯಾಗಿದೆ. ತಂಡದ ಪರ ರಿಷಭ್ ಪಂತ್ 24 ಹಾಗೂ ಸ್ಟೀವ್ ಸ್ಮಿತ್ 13 ರನ್ ಗಳಿಸಿ ಆಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 13 ಓವರ್ಗೆ 2 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ಸ್ಟೀವ್ ಸ್ಮಿತ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೆಟ್ಮಿಯರ್ ಹಾಗೂ ಸ್ಟಾಯಿನಿಸ್ ಬ್ಯಾಟಿಂಗ್ಗೆ ಬಾಕಿ ಇದ್ದಾರೆ.
ಶಿಖರ್ ಧವನ್ ಬೆನ್ನಲ್ಲೆ ಮತ್ತೊಬ್ಬ ಆರಂಭಿಕ ಆಟಗಾರ ಪೃಥ್ವಿ ಶಾ ಔಟ್ ಆಗಿದ್ದಾರೆ. 39 ಬಾಲ್ಗೆ 53 ರನ್ ಗಳಿಸಿ ರನೌಟ್ ಆಗಿದ್ದಾರೆ. ರಿಷಭ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 86 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ.
ಶಿಖರ್ ಧವನ್ 26 ಬಾಲ್ಗೆ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಪೃಥ್ವಿ ಶಾ 36 ಬಾಲ್ಗೆ 1 ಸಿಕ್ಸರ್ ಹಾಗೂ 7 ಬೌಂಡರಿ ಸಹಿತ 51 ರನ್ ದಾಖಲಿಸಿದ್ದಾರೆ. 10.2 ಓವರ್ಗೆ ಡೆಲ್ಲಿ 81 ರನ್ ದಾಖಲಿಸಿ ಉತ್ತಮ ಆಟವಾಡುತ್ತಿದೆ. ಹೈದರಬಾದ್ ಬೌಲರ್ಸ್ಗೆ ವಿಕೆಟ್ ಪಡೆಯುವ ಒತ್ತಡ ಹೆಚ್ಚಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ 9 ಓವರ್ ಅಂತ್ಯಕ್ಕೆ 76 ರನ್ ಗಳಿಸಿದೆ. ವಿಕೆಟ್ ನಷ್ಟವಾಗಿಲ್ಲ. ಪೃಥ್ವಿ ಶಾ 48 ಹಾಗೂ ಶಿಖರ್ ಧವನ್ 26 ರನ್ ದಾಖಲಿಸಿದ್ದಾರೆ.
ಪವರ್ಪ್ಲೇ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ 51 ರನ್ ದಾಖಲಿಸಿದೆ. ಪೃಥ್ವಿ ಶಾ 23 ಬಾಲ್ಗೆ 39 ಹಾಗೂ ಶಿಖರ್ ಧವನ್ 13 ಬಾಲ್ಗೆ 11 ರನ್ ಪೇರಿಸಿದ್ದಾರೆ.
ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 5 ಓವರ್ಗೆ 48 ರನ್ ದಾಖಲಿಸಿದೆ. ವಿಕೆಟ್ ಕಳೆದುಕೊಂಡಿಲ್ಲ.
3 ಓವರ್ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 33 ರನ್ ಗಳಿಸಿದೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅಮೋಘ ಆರಂಭ ಒದಗಿಸಿಕೊಟ್ಟಿದ್ದಾರೆ. 3 ಓವರ್ಗಳಲ್ಲಿ ಒಟ್ಟು 6 ಬೌಂಡರಿ ಹಾಗೂ 1 ಸಿಕ್ಸರ್ ಬಂದಿದ್ದು, ಚೆನ್ನೈ ಪಿಚ್ನಲ್ಲಿ ಬೃಹತ್ ಮೊತ್ತ ಕಲೆಹಾಕುವ ಉತ್ಸಾಹದಲ್ಲಿ ಪಂತ್ ಪಡೆ ಇದೆ.
ಡೆಲ್ಲಿ ಕ್ಯಾಪಿಟಲ್ಸ್ 2 ಓವರ್ಗೆ ಭರ್ಜರಿ 26 ರನ್ ದಾಖಲಿಸಿದೆ. ಪೃಥ್ವಿ ಶಾ 9 ಬಾಲ್ಗೆ 20 ರನ್ ಕಲೆಹಾಕಿದ್ದಾರೆ. ಎಸ್ಆರ್ಎಚ್ ಪರ ಅಭಿಷೇಕ್ ಶರ್ಮಾ ಮತ್ತು ಖಲೀಲ್ ಅಹ್ಮದ್ 14, 12 ರನ್ ಬಿಟ್ಟುಕೊಟ್ಟಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಡೆಲ್ಲಿ ಪರ ಪೃಥ್ವಿ ಶಾ ಮೊದಲ ಓವರ್ನಲ್ಲಿ ಮೂರು ಬೌಂಡರಿ ಸಿಡಿಸಿದ್ದಾರೆ. ಶಿಖರ್ ಧವನ್ ಹಾಗೂ ಶಾ ಕಣಕ್ಕಿಳಿದಿದ್ದು, 1 ಓವರ್ಗೆ ವಿಕೆಟ್ ಕಳೆದುಕೊಳ್ಳದೆ 12 ರನ್ ಗಳಿಸಿದ್ದಾರೆ. ಖಲೀಲ್ ಅಹ್ಮದ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ ಈ ರೀತಿ ಇದೆ..
ಸನ್ರೈಸರ್ಸ್ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಸನ್ರೈಸರ್ಸ್ ಹೈದರಾಬಾದ್ ಬೌಲಿಂಗ್ ಮಾಡಲಿದೆ.
Published On - 11:50 pm, Sun, 25 April 21