AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿ ಮುಡಿಗೇರಿಸಿಕೊಂಡ ಪ್ರಶಸ್ತಿಗಳಾವುವು? ಇಲ್ಲಿದೆ ಸಮಗ್ರ ಮಾಹಿತಿ

Lionel Messi: ಅವರ ಎತ್ತರ ಕೇವಲ ಐದೂವರೆ ಅಡಿ ಇರಬಹುದು, ಆದರೆ ಅವರು ಬರೆದ ದಾಖಲೆಗಳ ಮುಂದೆ ಇಡೀ ಫುಟ್‌ಬಾಲ್ ಜಗತ್ತೇ ತಲೆಬಾಗಿ ನಿಲ್ಲುತ್ತದೆ. ಮೈದಾನದಲ್ಲಿ ಚೆಂಡು ಅವರ ಕಾಲಿಗೆ ಸಿಕ್ಕರೆ ಸಾಕು, ಅಲ್ಲಿ ಕ್ರೀಡೆಯಲ್ಲ, ಮಂತ್ರಜಾಲ ಸೃಷ್ಟಿಯಾಗುತ್ತದೆ. ಕಾಲಿನಲ್ಲೇ ಕಾವ್ಯ ಬರೆಯುವ, ಎದುರಾಳಿಗಳ ಕೋಟೆಯನ್ನು ನಿರಾಯಾಸವಾಗಿ ಬೇಧಿಸುವ ಆ ಮಾಂತ್ರಿಕನೇ ಲಿಯೋನೆಲ್ ಆಂಡ್ರೆಸ್ ಮೆಸ್ಸಿ. 

ಮೆಸ್ಸಿ ಮುಡಿಗೇರಿಸಿಕೊಂಡ ಪ್ರಶಸ್ತಿಗಳಾವುವು? ಇಲ್ಲಿದೆ ಸಮಗ್ರ ಮಾಹಿತಿ
Lionel Messi
ಝಾಹಿರ್ ಯೂಸುಫ್
|

Updated on: Sep 01, 2026 | 8:02 AM

Share

ಒಂದು ಅದ್ಭುತ ಯುಗಕ್ಕೆ ಅಧಿಕೃತ ತೆರೆ ಬಿದ್ದಿದೆ! ನೀಲಿ ಮತ್ತು ಬಿಳಿ ಜೆರ್ಸಿ ಧರಿಸಿ, ಮೈದಾನದಲ್ಲಿ ಮಂತ್ರಜಾಲ ಸೃಷ್ಟಿಸುತ್ತಿದ್ದ ಫುಟ್‌ಬಾಲ್ ಇತಿಹಾಸದ ಸರ್ವಶ್ರೇಷ್ಠ ಕಾಲ್ಚೆಂಡು ಲಿಯೋನೆಲ್ ಮೆಸ್ಸಿ, ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಹೇಳಿದ್ದಾರೆ. ‘ನನ್ನ ಬಳಿ ನೀಡಲು ಇನ್ನು ಏನೂ ಉಳಿದಿಲ್ಲ’ ಎಂದು ಜಗತ್ತಿನ ಕೋಟ್ಯಂತರ ಅಭಿಮಾನಿಗಳ ಹೃದಯ ಭಾರವಾಗಿಸಿ ಮೆಸ್ಸಿ ಮೈದಾನದಿಂದ ಹೊರನಡೆದಿದ್ದಾರೆ.

ದೇಶಕ್ಕಾಗಿ ವಿಶ್ವಕಪ್ ಹಾಗೂ ಕೋಪಾ ಅಮೆರಿಕ ಟ್ರೋಫಿಗಳನ್ನು ಗೆದ್ದುಕೊಟ್ಟು, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದ ಮೆಸ್ಸಿ, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಮುಡಿಗೇರಿಸಿಕೊಂಡ ಪ್ರಮುಖ ಟ್ರೋಫಿಗಳು ಮತ್ತು ವೈಯಕ್ತಿಕ ಪ್ರಶಸ್ತಿಗಳ ಸಮಗ್ರ ವಿವರ ಇಲ್ಲಿದೆ…

  • ಫಿಫಾ ವಿಶ್ವಕಪ್: 2022ರಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿ ವಿಶ್ವಕಪ್ ಮುಕುಟ ಮುಡಿಸಿದರು.
  • ಕೋಪಾ ಅಮೆರಿಕ: ಒಟ್ಟು 2 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ — 2021 ಮತ್ತು 2024.
  • ಫಿನಾಲಿಸಿಮಾ: 2022ರಲ್ಲಿ ಕೋಪಾ ಅಮೆರಿಕ ಚಾಂಪಿಯನ್ ಅರ್ಜೆಂಟೀನಾ ಮತ್ತು ಯುರೋ ಕಪ್ ಚಾಂಪಿಯನ್ ಇಟಲಿ ನಡುವೆ ನಡೆದ ಪಂದ್ಯದಲ್ಲಿ ಜಯಗಳಿಸಿ ಈ ಟ್ರೋಫಿ ಪಡೆದರು.
  • ಒಲಿಂಪಿಕ್ ಚಿನ್ನದ ಪದಕ: 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅರ್ಜೆಂಟೀನಾ ಒಲಿಂಪಿಕ್ ತಂಡದ ಪರ ಚಿನ್ನದ ಪದಕ ಗೆದ್ದಿದ್ದಾರೆ.
  • ಫಿಫಾ ಯು-20 ವಿಶ್ವಕಪ್: 2005ರಲ್ಲಿ ಯುವ ತಂಡದ ಪರವಾಗಿ ವಿಶ್ವ ಚಾಂಪಿಯನ್ ಆಗಿದ್ದರು.

ವೈಯಕ್ತಿಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು:

ಫಿಫಾ ವಿಶ್ವಕಪ್ ಗೋಲ್ಡನ್ ಬಾಲ್: 2 ಬಾರಿ (2014 ಮತ್ತು 2022) ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಆಟಗಾರ ಇವರಾಗಿದ್ದಾರೆ.

ಕೋಪಾ ಅಮೆರಿಕ ಗೋಲ್ಡನ್ ಬಾಲ್: 2 ಬಾರಿ (2015 ಮತ್ತು 2021) ಟೂರ್ನಿಯ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

ಬ್ಯಾಲನ್ ಡಿ’ಓರ್: ವಿಶ್ವದ ಅತ್ಯುತ್ತಮ ಫುಟ್‌ಬಾಲ್ ಆಟಗಾರನಿಗೆ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೆಸ್ಸಿ ದಾಖಲೆಯ 8 ಬಾರಿ (2009-2012, 2015, 2019, 2021, 2023) ಗೆದ್ದಿದ್ದಾರೆ.

ದಿ ಬೆಸ್ಟ್ ಫಿಫಾ ಪುರುಷರ ಆಟಗಾರ: 3 ಬಾರಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ, ಲಿಯೋನೆಲ್ ಮೆಸ್ಸಿ ಗೆದ್ದಿರುವ ಎಲ್ಲಾ ಪ್ರಮುಖ ಪ್ರಶಸ್ತಿಗಳ ಈ ಅಪರೂಪದ ಸಂಯೋಜನೆಯನ್ನು ಗೆದ್ದ ಮತ್ತೊಬ್ಬ ಆಟಗಾರ ಫುಟ್‌ಬಾಲ್ ಇತಿಹಾಸದಲ್ಲೇ ಇಲ್ಲ. ಇದೇ ಕಾರಣಕ್ಕಾಗಿ ಮೆಸ್ಸಿಯನ್ನು ಫುಟ್‌ಬಾಲ್ ಜಗತ್ತಿನ ‘ಸಾರ್ವಭೌಮ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದಿಂದ 7 ಆಟಗಾರರು ಔಟ್..!

ಒಟ್ಟಾರೆಯಾಗಿ ಹೇಳುವುದಾದರೆ,  ಕಾಲ ಉರುಳಬಹುದು, ಮೈದಾನಕ್ಕೆ ಹೊಸ ಹೊಸ ಆಟಗಾರರು ಬರಬಹುದು. ಆದರೆ ನೀಲಿ-ಬಿಳಿ ಜೆರ್ಸಿಯಲ್ಲಿ 10ನೇ ನಂಬರ್ ಧರಿಸಿ ಮೆಸ್ಸಿ ಮೈದಾನಕ್ಕಿಳಿಯುತ್ತಿದ್ದಾಗ ಮೂಡುತ್ತಿದ್ದ ಆ ರೋಮಾಂಚನವನ್ನು ಮರುಸೃಷ್ಟಿಸಲು ಯಾರಿಂದಲೂ ಸಾಧ್ಯವಿಲ್ಲ.

ಮೆಸ್ಸಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ದೈಹಿಕವಾಗಿ ದೂರವಾಗಿರಬಹುದು, ಆದರೆ ಅವರು ನೀಡಿದ ಪ್ರತಿ ಗೋಲು, ಗೆದ್ದುಕೊಟ್ಟ ಪ್ರತಿ ಟ್ರೋಫಿ ಮತ್ತು ಮೈದಾನದಲ್ಲಿ ತೋರಿದ ಮಾಂತ್ರಿಕತೆ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ.

Follow Us
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ