Tokyo 2020 Paralympics: ಸೋಲಿನೊಂದಿಗೆ ಪ್ಯಾರಾಲಿಂಪಿಕ್ಸ್ ಅಭಿಯಾನ ಆರಂಭಿಸಿದ ಭಾರತ
Tokyo 2020 Paralympics: ಟೋಕಿಯೊ ಕ್ರೀಡಾಕೂಟದಲ್ಲಿ ಭಾರಗತೀಯ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಈಜು, ಪವರ್ ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೋ ಸೇರಿದಂತೆ ಒಂಬತ್ತು ಕ್ರೀಡೆಗಳಲ್ಲಿ ದೇಶದ 54 ಆಟಗಾರರು ಭಾಗವಹಿಸಲಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo 2020 Paralympics) ಅನ್ನು ಭಾರತೀಯ ಸ್ಪರ್ಧಿಗಳು ಸೋಲಿನೊಂದಿಗೆ ಆರಂಭಿಸಿದೆ. ಬುಧವಾರ ನಡೆದ ಮಹಿಳಾ ಟೆಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾವಿನಾ ಪಟೇಲ್ (Bhavina Patel) ಮತ್ತು ಸೋನಾಲ್ ಪಟೇಲ್ (Sonal Patel) ಮೊದಲ ಪಂದ್ಯದಲ್ಲೇ ಸೋಲುಂಡಿದ್ದಾರೆ. ಮಹಿಳಾ ವರ್ಗ 3 ವಿಭಾಗದಲ್ಲಿ ಈ ಸ್ಪರ್ಧೆಯಲ್ಲಿ ಸೋನಾಲ್ ಮೊದಲ ಸೆಟ್ನಲ್ಲಿ ಮುಂದಿದ್ದರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿ ಚೀನಾದ ಲಿ ಕ್ವಾನ್ 11-9, 3-11, 17-15, 7-11 4-11 ಸೆಟ್ಗಳಿಂದ ಪಂದ್ಯ ಗೆದ್ದುಕೊಂಡರು.
ಮತ್ತೊಂದೆಡೆ, ಮಹಿಳಾ ಸಿಂಗಲ್ಸ್ ಕ್ಲಾಸ್ 4 ಟೇಬಲ್ ಟೆನಿಸ್ ಪಂದ್ಯದಲ್ಲಿ ವಿಶ್ವ ನಂ .1 ಚೀನಾದ ಝು ಯಿಂಗ್ ವಿರುದ್ಧ ಭಾವಿನಾ 3-11 9-11 2-11 ಅಂತರದಿಂದ ಸೋಲನುಭವಿಸಿದರು. ಈ ಇಬ್ಬರ ಸೋಲಿನೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್ ಕ್ರೀಡಾ ಅಭಿಯಾನವನ್ನು ಆರಂಭಿಸಿದೆ.
ಟೋಕಿಯೊ ಕ್ರೀಡಾಕೂಟದಲ್ಲಿ ಭಾರಗತೀಯ ಸ್ಪರ್ಧಿಗಳು ಹಲವು ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಶೂಟಿಂಗ್, ಈಜು, ಪವರ್ ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೋ ಸೇರಿದಂತೆ ಒಂಬತ್ತು ಕ್ರೀಡೆಗಳಲ್ಲಿ ದೇಶದ 54 ಆಟಗಾರರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(Tokyo 2020 Paralympics: Sonal Patel, Bhavina Patel start with defeats)
Published On - 5:16 pm, Wed, 25 August 21