Tokyo paralympics 2020: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್

mariyappan thangavelu and sharad kumar: ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

Tokyo paralympics 2020: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್
Tokyo paralympics 2020

ಟೋಕಿಯೊ ಪ್ಯಾರಾಲಿಂಪಿಕ್ಸ್ (Tokyo paralympics 2020)​ ಕ್ರೀಡಾಕೂಟದ ಎತ್ತರ ಜಿಗಿತ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು (mariyappan thangavelu) ಮತ್ತು ಶರದ್ ಕುಮಾರ್  (sharad kumar)  ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ. ತಂಗವೇಲು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದರೆ, ಶರದ್ ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 10 ಕ್ಕೆ ಏರಿದೆ. ಹೈ ಜಂಪ್ ಟಿ 63 ಈವೆಂಟ್‌ನಲ್ಲಿ ತಂಗವೇಲು ದ್ವಿತೀಯ ಸ್ಥಾನ ಅಲಂಕರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ರಿಯೋ ಪ್ಯಾರಾಲಿಂಪಿಕ್ಸ್ ಬಳಿಕ ಇದು ತಂಗವೇಲು ಅವರ ಎರಡನೇ ಪದಕ ಎಂಬುದು ವಿಶೇಷ. ಮರಿಯಪ್ಪನ್ ಮತ್ತು ಶರದ್ ಇಬ್ಬರೂ ತಮ್ಮ ಮೊದಲ ಪ್ರಯತ್ನದಲ್ಲಿ 1.73 ಮೀ ಮತ್ತು 1.77 ಮೀ ಯಶಸ್ವಿಯಾಗಿ ಜಿಗಿದಿದ್ದರು. ಈ ವೇಳೆ ಶರದ್ ಕುಮಾರ್ ಮುಂಚೂಣಿಯಲ್ಲಿದ್ದರು. ಆದಾಗ್ಯೂ, 1.86 ಮೀ ನಲ್ಲಿ ಮೂರು ಪ್ರಯತ್ನಗಳ ನಂತರವೂ ಶರದ್​ಗೆ ಯಶಸ್ವಿಯಾಗಿ ಜಂಪ್ ಮಾಡಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕಂಚಿನ ಪದಕದೊಂದಿಗೆ ಚಿನ್ನದ ರೇಸ್ ನಿಂದ ಹೊರಗುಳಿದರು.

ಇದರ ನಂತರ, ಅಮೆರಿಕದ ಗ್ರೇವ್ ಸ್ಯಾಮ್ ಮತ್ತು ಮರಿಯಪ್ಪನ್ ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರೂ 1.86 ಅಂಕದಲ್ಲಿ ಯಶಸ್ವಿ ಜಿಗಿತ ಪೂರೈಸಿದ್ದರು. ನಂತರ ನಡೆದ ಮೂರು ಪ್ರಯತ್ನಗಳಲ್ಲಿ ಮರಿಯಪ್ಪನ್ ವಿಫಲರಾದರು. ಮತ್ತೊಂದೆಡೆ, ಗ್ರೇವ್ ಯಶಸ್ವಿ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

ಕಳೆದ ಬಾರಿಯೂ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ಎತ್ತರ ಜಿಗಿತದಲ್ಲಿ ಎರಡು ಪದಕಗಳನ್ನು ಪಡೆದಿತ್ತು. ಆ ವೇಳೆ ಮರಿಯಪ್ಪನ್ ತಂಗವೇಲು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಜೊತೆಗೆ ವರುಣ್ ಸಿಂಗ್ ಭಾಟಿ ಕಂಚಿನ ಪದಕ ಗೆದಿದ್ದರು. ಈ ಬಾರಿ ಮರಿಯಪ್ಪನ್ ಬೆಳ್ಳಿ ಪದಕ ಗೆದ್ದರೂ ವರುಣ್ 7ನೇ ಸ್ಥಾನ ಪಡೆದು ಪದಕ ತಪ್ಪಿಸಿಕೊಂಡರು.

ಮಂಗಳವಾರ ಮುಂಜಾನೆ ನಡೆದ ಸ್ಪರ್ಧೆಯಲ್ಲಿ, ಶೂಟರ್ ಸಿಂಗರಾಜ್ ಅಧಾನಾ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಫ್ 1 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದಿದ್ದರು. ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: IPL 2022: ಐಪಿಎಲ್ ಹೊಸ ತಂಡಗಳಿಗೆ ಮೂಲ ಬೆಲೆ ಫಿಕ್ಸ್​: ಇಷ್ಟು ಮೊತ್ತ ನೀಡಿ ಖರೀದಿಸುವವರು ಯಾರು?

ಇದನ್ನೂ ಓದಿ: Pradeep Narwal: ಪ್ರೊ ಕಬಡ್ಡಿ ಲೀಗ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

ಇದನ್ನೂ ಓದಿ: ವಿಶ್ವದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

(Tokyo paralympics 2020: mariyappan thangavelu and sharad kumar won medal in high jump)

Read Full Article

Click on your DTH Provider to Add TV9 Kannada