12 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್!
ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪು ನಿರ್ಣಯಗಳನ್ನ ತೆಗೆದುಕೊಂಡಿರೋದಾಗಿ ಒಪ್ಪಿಕೊಂಡಿದ್ದಾರೆ. ತಾನು ಮಾಡಿದ ಆ ಎರಡು ತಪ್ಪುಗಳಿಂದಲೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಬೇಕಾಯ್ತು ಎಂದಿದ್ದಾರೆ. ಜಮೈಕಾ ಮೂಲದ ಸ್ಟೀವ್ ಬಕ್ನರ್ ಸಚಿನ್ ತೆಂಡೂಲ್ಕರ್ಗೆ ಬೇಕು ಅಂತಾನೇ ಔಟ್ ನೀಡ್ತಾರೆ ಅನ್ನೋ ಆರೋಪವಿತ್ತು. ಈ ವಿಚಾರವನ್ನ ಕೆಲ ದಿನಗಳ ಹಿಂದೆಯಷ್ಟೇ ಬಕ್ನರ್ ಒಪ್ಪಿಕೊಂಡಿದ್ರು. ನಾನು ಸಚಿನ್ […]
ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪು ನಿರ್ಣಯಗಳನ್ನ ತೆಗೆದುಕೊಂಡಿರೋದಾಗಿ ಒಪ್ಪಿಕೊಂಡಿದ್ದಾರೆ. ತಾನು ಮಾಡಿದ ಆ ಎರಡು ತಪ್ಪುಗಳಿಂದಲೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಬೇಕಾಯ್ತು ಎಂದಿದ್ದಾರೆ.
ಜಮೈಕಾ ಮೂಲದ ಸ್ಟೀವ್ ಬಕ್ನರ್ ಸಚಿನ್ ತೆಂಡೂಲ್ಕರ್ಗೆ ಬೇಕು ಅಂತಾನೇ ಔಟ್ ನೀಡ್ತಾರೆ ಅನ್ನೋ ಆರೋಪವಿತ್ತು. ಈ ವಿಚಾರವನ್ನ ಕೆಲ ದಿನಗಳ ಹಿಂದೆಯಷ್ಟೇ ಬಕ್ನರ್ ಒಪ್ಪಿಕೊಂಡಿದ್ರು. ನಾನು ಸಚಿನ್ ವಿಚಾರದಲ್ಲಿ ಎರಡು ಸಲ ತಪ್ಪಾಗಿ ಔಟ್ ಕೊಟ್ಟಿದ್ದೇನೆ ಎಂದಿದ್ರು. ಆದರೆ ಈಗ 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಕ್ನರ್ ತಾವು ಮಾಡಿದ ಆ ಎರಡು ಲೋಪಗಳನ್ನ ಬಿಚ್ಚಿಟ್ಟಿದ್ದಾರೆ.
ನಾನು 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನ ಮಾಡಿದ್ದೆ. ಭಾರತ ಸಿಡ್ನಿ ಟೆಸ್ಟ್ ಪಂದ್ಯದ ಮೇಲೆ ಉತ್ತಮವಾದ ಹಿಡಿತ ಸಾಧಿಸಿತ್ತು. ಈ ಸಮಯದಲ್ಲಿ ನಾನು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳಿಗೆ ನೆರವಾಗುವಂಥ ಎರಡು ತೀರ್ಪುಗಳನ್ನ ನೀಡಿಬಿಟ್ಟೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನು ಮಾಡಿದ ಮೊದಲ ಅಂಪೈರ್ ನಾನು. ಆ ಎರಡು ತಪ್ಪುಗಳು ನನ್ನನ್ನು ಈಗಲೂ ಕಾಡುತ್ತಿದೆ ಎಂದು ಮರುಗಿದ್ದಾರೆ
ಇದೇ ಸಿಡ್ನಿ ಟೆಸ್ಟ್ ಪಂದ್ಯದಲ್ಲೇ ಭಾರತದ ಹರ್ಭಜನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಌಂಡ್ರ್ಯೂ ಸೈಮಂಡ್ಸ್ ನಡುವಿನ Monkeygate ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.