ಅಹಮದಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಇಂದು ನಡೆದ ಪಂದ್ಯದಲ್ಲಿ ಕೊಹ್ಲಿ, ಅವರ ಹೆಸರಿಗೆ ಅತಿ ಕೆಟ್ಟ ದಾಖಲೆಯೊಂದನ್ನು ಬರೆಸಿಕೊಂಡಿದ್ದಾರೆ. ಎರಡನೇ ದಿನ ಚೇತೇಶ್ವರ ಪೂಜಾರ ಔಟಾದ ನಂತರ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ನಿರೀಕ್ಷೆಯಲ್ಲಿದ್ದರು. ಕೆಲವರು, ಕೊಹ್ಲಿ ತಮ್ಮ 71 ನೇ ಅಂತರರಾಷ್ಟ್ರೀಯ ಶತಕವನ್ನು ಪೂರ್ಣಗೊಳಿಸಬೇಕೆಂದು ಆಶಿಸಿದರು. ಆದರೆ ವಿರಾಟ್ ಕೇವಲ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಈ ಮೂಲಕ ಕೊಹ್ಲಿ ಹೆಸರಿನಲ್ಲಿ ಮುಜುಗರದ ದಾಖಲೆಯೊಂದು ಇಂದು ದಾಖಲಾಗಿದೆ.
ವಾಸ್ತವವಾಗಿ, ವಿರಾಟ್ ಕೊಹ್ಲಿ ತನ್ನ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳುತ್ತಿರುವುದು ಇದು ಎಂಟನೇ ಬಾರಿ ಆಗಿದೆ. ಇದರೊಂದಿಗೆ ಕೊಹ್ಲಿ, ಇಷ್ಟು ದಿನ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ಈ ಬ್ಲಾಕ್ ಪಾಯಿಂಟ್ ದಾಖಲೆಯನ್ನು ಸಮಗೊಳಿಸಿದ್ದಾರೆ. ಧೋನಿ ಇದುವರೆಗೆ ಖಾತೆ ತೆರೆಯದೆ 8 ಬಾರಿ ಔಟಾಗಿದ್ದರು. ಆದರೆ ಈಗ ವಿರಾಟ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಸರಣಿಯಲ್ಲಿ ಕೊಹ್ಲಿ ಎರಡು ಬಾರಿ ಶೂನ್ಯಕ್ಕೆ ಔಟ್..
ಇದು ಮಾತ್ರವಲ್ಲ, ವಿರಾಟ್ ಕೊಹ್ಲಿ ಅವರ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಟೆಸ್ಟ್ ಸರಣಿಯಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧ ಕೊಹ್ಲಿ ಈ ಸಾಧನೆ ಮಾಡಿದ್ದು, 2014 ರಲ್ಲಿ ಆಡಿದ ಸರಣಿಯಲ್ಲಿ, ವಿರಾಟ್ ಕೊಹ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆ ಸರಣಿಯಲ್ಲಿ, ಲಿಯಾಮ್ ಪ್ಲಂಕೆಟ್ ಮತ್ತು ಜೇಮ್ಸ್ ಆಂಡರ್ಸನ್, ಕೊಹ್ಲಿಗೆ ಖಾತೆ ತೆರೆಯುವ ಅವಕಾಶವನ್ನು ನೀಡಿರಲಿಲ್ಲ. ಆದಾದ ನಂತರ ಈ ಸರಣಿಯಲ್ಲಿ ಮೊಯಿನ್ ಅಲಿ ಮತ್ತು ಬೆನ್ ಸ್ಟೋಕ್ಸ್, ವಿರಾಟ್ ಕೊಹ್ಲಿಯನ್ನು ಶೂನ್ಯಕ್ಕೆ ಪೆವಿಲಿಯನ್ ಸೇರಿಸಿದ್ದಾರೆ.
ಸ್ಟೋಕ್ಸ್ಗೆ ಐದು ಬಾರಿ ಬಲಿಯಾಗಿರುವ ಕೊಹ್ಲಿ
ಇದರೊಂದಿಗೆ ವಿರಾಟ್ ಕೊಹ್ಲಿಯನ್ನು 5 ಬಾರಿ ಔಟ್ ಮಾಡಿದ ಬೌಲರ್‌ಗಳ ಪಟ್ಟಿಗೆ ಈಗ ಬೆನ್ ಸ್ಟೋಕ್ಸ್ ಸೇರಿದ್ದಾರೆ. ಈ ಮೊದಲು ತನ್ನ ವೃತ್ತಿ ಜೀವನದಲ್ಲಿ ಇಷ್ಟು ಬಾರಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಲು ಬೆನ್ ಸ್ಟೋಕ್ಸ್ಗೆ ಸಾಧ್ಯವಾಗಿಲ್ಲ. ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಅವರನ್ನು ನಾಲ್ಕು ಬಾರಿ ಸ್ಟೋಕ್ಸ್ ಔಟ್ ಮಾಡಿದ್ದಾರೆ.
ಇದನ್ನೂ ಓದಿ:India vs England: ಸಿರಾಜ್ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ಕೊಹ್ಲಿಯಿಂದ ಬೆನ್ ಸ್ಟೋಕ್ಸ್ಗೆ ಮೈದಾನದಲ್ಲೇ ಅವಾಜ್