Paris Olympics 2024: ಒಲಿಂಪಿಕ್ಸ್​ನಲ್ಲಿ ಅತೀ ಹೆಚ್ಚು ಪದಕ ಗೆದ್ದ ದೇಶ ಯಾವುದು ಗೊತ್ತಾ?

Paris Olympics 2024: ಭಾರತವು ಒಲಿಂಪಿಕ್ಸ್​ನಲ್ಲಿ ಈವರೆಗೆ 35 ಪದಕಗಳನ್ನು ಗೆದ್ದುಕೊಂಡಿದೆ. ಈ ಮೂವತ್ತೈದು ಪದಕಗಳಲ್ಲಿ 10 ಚಿನ್ನದ ಪದಕಗಳಿವೆ. ಆದರೆ ಇದರಲ್ಲಿ 8 ಚಿನ್ನದ ಪದಕಗಳು ಹಾಕಿ ತಂಡದಿಂದಾಗಿ ಸಿಕ್ಕಿರುವುದು ವಿಶೇಷ. ಇನ್ನುಳಿದ 2 ಪದಕಗಳನ್ನು ವೈಯುಕ್ತಿಕವಾಗಿ ಗೆಲ್ಲಲಾಗಿದೆ. ಅಂದರೆ ತಂಡವಲ್ಲದೆ, ಸ್ಪರ್ಧಾಳುವಾಗಿ ಕಣಕ್ಕಿಳಿದು ಚಿನ್ನದ ಪದಕ ಗೆಲ್ಲುವಲ್ಲಿ ಭಾರತೀಯರಿಬ್ಬರು ಯಶಸ್ವಿಯಾಗಿದ್ದಾರೆ.

Paris Olympics 2024: ಒಲಿಂಪಿಕ್ಸ್​ನಲ್ಲಿ ಅತೀ ಹೆಚ್ಚು ಪದಕ ಗೆದ್ದ ದೇಶ ಯಾವುದು ಗೊತ್ತಾ?
OlympicsImage Credit source: Shutterstock
Follow us
| Updated By: ಗಣಪತಿ ಶರ್ಮ

Updated on:Jul 13, 2024 | 11:56 AM

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​ಗೆ (Paris olympics 2024) ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಆರಂಭವಾಗಲಿರುವ ವಿಶ್ವ ಕ್ರೀಡಾಕೂಟಕ್ಕಾಗಿ ಈಗಾಗಲೇ ಎಲ್ಲಾ ದೇಶಗಳ ಕ್ರೀಡಾಪಟುಗಳು ಸಜ್ಜಾಗಿ ನಿಂತಿದ್ದಾರೆ. 17 ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾರತದ 112 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಹಾಗೆಯೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಒಟ್ಟು 206 ದೇಶಗಳ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಈ 206 ದೇಶಗಳಲ್ಲಿ ಈವರೆಗೆ ಅತೀ ಹೆಚ್ಚು ಪದಕ ಗೆದ್ದ ದೇಶ ಯಾವುದೆಂದು ಕೇಳಿದರೆ ಒಂದೇ ಉತ್ತರ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ.

ಹೌದು, ಒಲಿಂಪಿಕ್ಸ್ ಇತಿಹಾಸದಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದ ವಿಶ್ವ ದಾಖಲೆ ಯುಎಸ್​ಎ ದೇಶದ ಹೆಸರಿನಲ್ಲಿದೆ. 1896 ರಿಂದ ಶುರುವಾದ ಒಲಿಂಪಿಕ್ಸ್​ನಲ್ಲಿ ಈವರೆಗೆ 50 ಕ್ರೀಡಾಕೂಟಗಳು ನಡೆದಿದೆ. ಇದರಲ್ಲಿ 29 ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳನ್ನು 21 ನಗರಗಳಲ್ಲಿ ಆಯೋಜಿಸಲಾಗಿದೆ. ಹಾಗೆಯೇ 24 ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು 21 ನಗರಗಳಲ್ಲಿ ನಡೆದಿವೆ.

ಈ 50 ಕ್ರೀಡಾಕೂಟಗಳಲ್ಲಿ 3 ಸಾವಿರಕ್ಕೂ ಅಧಿಕ ಪದಕಗಳನ್ನು ಗೆಲ್ಲುವಲ್ಲಿ ಯುನೈಟೆಡ್ ಸ್ಟೇಟ್ ಆಫ್ ಅಮೆರಿಕದ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ 2 ಸಾವಿರಕ್ಕಿಂತಲೂ ಅಧಿಕ ಒಲಿಂಪಿಕ್ಸ್ ಪದಕ ಗೆದ್ದ ಏಕೈಕ ದೇಶವೆಂಬ ದಾಖಲೆಯನ್ನು ಯುಎಸ್​ಎ ನಿರ್ಮಿಸಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಅತೀ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪಟ್ಟಿ ಈ ಕೆಳಗಿನಂತಿದೆ…

ಅತೀ ಹೆಚ್ಚು ಒಲಿಂಪಿಕ್ ಪದಕ ಗೆದ್ದ ದೇಶಗಳು:

ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು
ಅಮೆರಿಕ (USA) 1229 1000 876 3105
ಸೋವಿಯತ್ ಒಕ್ಕೂಟ (USSR) 473 376 355 1204
ಜರ್ಮನಿ 384 419 408 1211
ಚೀನಾ (PRC) 384 281 235 900
ಗ್ರೇಟ್ ಬ್ರಿಟನ್ 325 351 359 1035
ಫ್ರಾನ್ಸ್ 312 336 392 1040
ಇಟಲಿ 299 278 308 885
ರಷ್ಯಾ 290 243 246 779
ಸ್ವೀಡನ್ 233 245 262 740
ಜಪಾನ್ 229 220 241 690

ಭಾರತ ಗೆದ್ದ ಪದಕಗಳೆಷ್ಟು?

ಭಾರತವು ಈವರೆಗೆ 24 ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿವೆ. ಈ ವೇಳೆ ಒಟ್ಟು 35 ಪದಕಗಳನ್ನು ಗೆದ್ದುಕೊಂಡಿದೆ. ಈ ವೇಳೆ 10 ಚಿನ್ನ, 9 ಬೆಳ್ಳಿ ಮತ್ತು 16 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಈ 10 ಚಿನ್ನದ ಪದಕಗಳಲ್ಲಿ 8 ಮೆಡಲ್​ಗಳು ಹಾಕಿ ಆಟದಿಂದ ಬಂದಿರುವುದು ವಿಶೇಷ. ಅಂದರೆ ವೈಯುಕ್ತಿಕವಾಗಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿರುವುದು ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ.

ಇದನ್ನೂ ಓದಿ: Paris Olympic 2024: ಪ್ಯಾರಿಸ್ ಒಲಿಂಪಿಕ್ಸ್​ ಪದಕದಲ್ಲಿ ಐಫೆಲ್ ಟವರ್ ತುಣುಕು

2008 ರ ಬೀಜಿಂಗ್ ಒಲಿಂಪಿಕ್ಸ್​ನಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್​ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ತಂದುಕೊಟ್ಟಿದ್ದರು. ಇದಾದ ಬಳಿಕ 2020ರ ಟೋಕಿಯೋ ಒಲಿಂಪಿಕ್ಸ್​ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಇದು ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಎಂಬುದು ವಿಶೇಷ.

Published On - 11:47 am, Sat, 13 July 24

ತಾಜಾ ಸುದ್ದಿ