Zimbabwe vs India 3rd T20, Live Score: ಶತಕ ವಂಚಿತರಾದ ವೈಭವ್

IND vs ZIM 3rd T20 Live Cricket Score: ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ಹರಾರೆಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Zimbabwe vs India 3rd T20, Live Score: ಶತಕ ವಂಚಿತರಾದ ವೈಭವ್
Ind Vs Zim

Updated on: Jul 26, 2026 | 5:40 PM

LIVE Cricket Score & Updates

  • 26 Jul 2026 05:40 PM (IST)

    IND vs ZIM 3rd T20 Live: ವೈಭವ್ ಔಟ್

    ವೈಭವ್ 81 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿ ಔಟಾದರು. ಭಾರತ 15 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿದೆ. ತಿಲಕ್ ವರ್ಮಾ ಈಗ ಕ್ರೀಸ್ ನಲ್ಲಿದ್ದಾರೆ.

  • 26 Jul 2026 05:34 PM (IST)

    IND vs ZIM 3rd T20 Live: 14 ಓವರ್‌ಗಳಲ್ಲಿ 129 ರನ್‌

    ಭಾರತ 14 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 129 ರನ್‌ಗಳನ್ನು ಗಳಿಸಿದೆ. ನಾಯಕ ಶ್ರೇಯಸ್ ವೈಭವ್ ಅವರೊಂದಿಗೆ ಕ್ರೀಸ್‌ನಲ್ಲಿದ್ದಾರೆ. ವೈಭವ್ ಪ್ರಸ್ತುತ 74 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ.

  • 26 Jul 2026 05:23 PM (IST)

    IND vs ZIM 3rd T20 Live: ಇಶಾನ್ ಔಟ್

    ಇಶಾನ್ ಕಿಶನ್ 29 ರನ್ ಗಳಿಸಿ ಔಟಾದರು. ಭಾರತದ ಎರಡನೇ ವಿಕೆಟ್ ಪತನವಾಯಿತು. ಭಾರತ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 101 ರನ್ ಗಳಿಸಿದೆ

  • 26 Jul 2026 05:16 PM (IST)

    IND vs ZIM 3rd T20 Live: ವೈಭವ್ 31 ಎಸೆತಗಳಲ್ಲಿ ಅರ್ಧಶತಕ

    ವೈಭವ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಭಾರತ 10 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 95 ರನ್ ಗಳಿಸಿದೆ. ವೈಭವ್ ಮತ್ತು ಇಶಾನ್ 49 ಎಸೆತಗಳಲ್ಲಿ 75 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದು ವೈಭವ್ ಅವರ ಸರಣಿಯಲ್ಲಿ ಎರಡನೇ ಅರ್ಧಶತಕವಾಗಿತ್ತು.

  • 26 Jul 2026 05:08 PM (IST)

    IND vs ZIM 3rd T20 Live: ಇಶಾನ್-ವೈಭವ್ ಅರ್ಧಶತಕದ ಜೊತೆಯಾಟ

    ಇಶಾನ್ ಮತ್ತು ವೈಭವ್ ಅರ್ಧಶತಕದ ಜೊತೆಯಾಟ ನಡೆಸಿದ್ದಾರೆ. ಭಾರತ 7 ಓವರ್‌ಗಳಲ್ಲಿ 1 ವಿಕೆಟ್‌ಗೆ 78 ರನ್ ಗಳಿಸಿದೆ. ವೈಭವ್ ಅರ್ಧಶತಕದ ಸಮೀಪಿಸುತ್ತಿದ್ದಾರೆ.

  • 26 Jul 2026 04:57 PM (IST)

    IND vs ZIM 3rd T20 Live: 4 ಓವರ್‌ಗಳು ಪೂರ್ಣ

    4 ಓವರ್‌ಗಳ ಅಂತ್ಯಕ್ಕೆ ಟೀಮ್ ಇಂಡಿಯಾ 1 ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿದೆ. ವೈಭವ್ ಸೂರ್ಯವಂಶಿ 21 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಶಾನ್ ಕಿಶನ್ 5 ರನ್‌ಗಳೊಂದಿಗೆ ಅವರಿಗೆ ಬೆಂಬಲ ನೀಡುತ್ತಿದ್ದಾರೆ

  • 26 Jul 2026 04:46 PM (IST)

    IND vs ZIM 3rd T20 Live: ಅಭಿಷೇಕ್ ಶರ್ಮಾ ಔಟ್

    ಮೂರನೇ ಪಂದ್ಯದಲ್ಲಿಯೂ ಅಭಿಷೇಕ್ ಶರ್ಮಾ 4 ಎಸೆತಗಳಲ್ಲಿ 2 ರನ್ ಗಳಿಸಿ ಔಟಾದರು. ಭಾರತದ ಮೊದಲ ವಿಕೆಟ್ ಪತನವಾಯಿತು. ಇಶಾನ್ ಕಿಶನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಭಾರತ 2 ಓವರ್‌ಗಳಲ್ಲಿ 1 ವಿಕೆಟ್‌ಗೆ 21 ರನ್ ಗಳಿಸಿದೆ.

  • 26 Jul 2026 04:26 PM (IST)

    IND vs ZIM 3rd T20 Live: ಭಾರತದ ಪ್ಲೇಯಿಂಗ್ 11

    ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ರವಿ ಬಿಷ್ಣೋಯ್, ಅಶೋಕ್ ಶರ್ಮಾ, ಯಶ್ ಠಾಕೂರ್, ಮಯಾಂಕ್ ಯಾದವ್.

  • 26 Jul 2026 04:26 PM (IST)

    IND vs ZIM 3rd T20 Live: ಜಿಂಬಾಬ್ವೆಯ ಆಡುವ 11

    ಬ್ರಿಯಾನ್ ಬೆನೆಟ್, ಬೆನ್ ಕರನ್, ಡಿಯೋನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಾಶೆ ಮರುಮಾನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮುರಿ, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಬಾನಿ.

  • 26 Jul 2026 04:07 PM (IST)

    IND vs ZIM 3rd T20 Live: ಟಾಸ್ ಗೆದ್ದ ಟೀಂ ಇಂಡಿಯಾ

    ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ಇಂದು ಹರಾರೆಯಲ್ಲಿ ನಡೆಯುತ್ತಿದೆ. ಶನಿವಾರ ನಡೆದ ಎರಡನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟಿ20 ಸರಣಿಯನ್ನು ಗೆದ್ದ ನಂತರ, ಭಾರತ ತಂಡ ಜಿಂಬಾಬ್ವೆಯನ್ನು ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.

Published On - 4:05 pm, Sun, 26 July 26

Follow Us