ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್ನೊಂದಿಗೆ ಮತ್ತೆ ಬಂದಿದೆ. ಕಳೆದ ವರ್ಷ ಐಕ್ಯೂ ನಿಯೋ 6 (iQOO Neo 6) ಎಂಬ ಫೋನನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ರಿಲೀಸ್ ಮಾಡಿದೆ. ತನ್ನ ಫಾಸ್ಟ್ ಚಾರ್ಜರ್ನಿಂದ ಟೆಕ್ ಪ್ರಿಯರ ನಿದ್ದೆಗೆಡಿಸಿರುವ ಈ ಫೋನ್ನಲ್ಲಿ ಬಲಿಷ್ಠವಾದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.
ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM ಹಾಗೂ 128GB ಆಂತರಿಕ ಸಂಗ್ರಹಣೆಯ ವೇರಿಯಂಟ್‌ಗೆ 29,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM + 256GB ವೇರಿಯಂಟ್‌ಗೆ 33,999 ರೂ. ಇದೆ. ವಿಶೇಷ ಎಂದರೆ ಈ ಫೋನ್ ಇಂದಿನಿಂದಲೇ ಖರೀದಿಗೆ ಸಿಗುತ್ತಿದೆ. ಮದ್ಯಾಹ್ನ 1 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಪಡೆದುಕೊಳ್ಳಬಹುದು. 1,500 ರೂ. ರಿಯಾಯಿತಿಯ ಬ್ಯಾಂಕ್ ಆಫರ್ ಕೂಡ ಘೋಷಿಸಲಾಗಿದೆ.
iPhone 14 Pro Max | ಆ್ಯಪಲ್ ಹೊಸ ಐಫೋನ್ 14 ಪ್ರೊ ಮ್ಯಾಕ್ಸ್ ತಯಾರಿಸಲು ಎಷ್ಟು ವೆಚ್ಚವಾಗುತ್ತದೆ?
ಈ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪ್ರಮುಖ SoC 4nm ಪ್ರಕ್ರಿಯೆಯನ್ನು ಆಧರಿಸಿದ್ದು, ಅತ್ಯಂತ ವೇಗವನ್ನು ಪಡೆದುಕೊಂಡಿರುವುದರಿಂದ ಗೇಮಿಂಗ್ಗೆ ಹೇಳಿ ಮಾಡಿಸಿದ್ದಾಗಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್ನಲ್ಲಿ ರನ್ ಆಗಲಿದೆ.
Tick-tock, tick-tock, goes the clock
??? = 1800 seconds = 30 mins to go for the the #iQOONeo7 5G SALE on @amazonIN!
Ready to get the #PowerToWin?
Buy Now: https://t.co/zn6LVBm2lL
Watch Now: https://t.co/MYRNzdZqe6
Follow @IqooInd on Twitter#AmazonSpecials pic.twitter.com/EW3Iv7NtYe— iQOO India (@IqooInd) February 16, 2023
ಐಕ್ಯೂ ನಿಯೋ 7 ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ನ OIS ಕ್ಯಾಮೆರಾ ನೀಡಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ಇದೆ. 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ನೈಟ್ ಮೋಡ್ ಆನ್-ಆಫ್ ಆಯ್ಕೆ, ಇನ್ಸ್ಟಾಗ್ರಾಮ್ ರೀಲ್ಸ್ಗೆ ಸೈಲ್ ವಿಡಿಯೋ ಜೊತೆಗೆ ಹಿಂಭಾಗ ಮತ್ತು ಹಿಂಭಾಗ ಡ್ಯುಯೆಲ್ ವೀವ್ ರೆಕಾರ್ಡಿಂಗ್ ಆಯ್ಕೆ ಅಳವಡಿಸಲಾಗಿದೆ.
ಈ ಫೋನಿನ ಮತ್ತೊಂದು ಪ್ರಮುಖ ಫೀಚರ್ ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್. ಇದರಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕೇವಲ 10 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಫುಲ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್ ಅನ್ನು ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Thu, 16 February 23