ಮಾರ್ಸ್ ಪರ್ಸಿವರೆನ್ಸ್ ರೋವರ್ ಕಳುಹಿಸಿದೆ ನೋಡಿ.. ಚೊಚ್ಚಲ ಬಾಟ್ ಸೆಲ್ಫಿ!
Mars Ingenuity helicopter bot selfie | ಅಂದಹಾಗೆ ಈ ಮಾರ್ಸ್ ಪರ್ಸಿವರೆನ್ಸ್ ರೋವರ್ ನೌಕೆಯ ಗುರಿ/ಉದ್ದೇಶ ಏನೆಂದ್ರೆ ಮಂಗಳನ ಅಂಗಳದಲ್ಲಿ ರೌಂಡ್ಸ್ ಹೊಡೆಯುತ್ತಾ, ಪುರಾತನ ಸೂಕ್ಷ್ಮಾಣು ಜೀವಿಗಳು ಅಲ್ಲಿ ನೆಲೆಸಿದ್ದವೇ ಎಂಬುದನ್ನು ಸಂಶೋಧಿಸುವುದಾಗಿದೆ! ಮುಂದೆ ಮನುಷ್ಯನಿಗೂ ಮಂಗಳ ಗ್ರಹ ವಾಸಯೋಗ್ಯವೇ ಎಂಬುದನ್ನು ಅರಿಯುವ ಉದ್ದೇಶ ಹೊಂದಿದೆ.
ಇದೇ ವರ್ಷ ಫೆಬ್ರವರಿ 18ರಂದು ಮಂಗಳ ಗ್ರಹದ ಮೇಲೆ ಸುರಕ್ಷಿತವಾಗಿ ಇಳಿದಿರುವ ಮಾರ್ಸ್ ಪರ್ಸಿವರೆನ್ಸ್ ರೋವರ್ ಬಾಹ್ಯಾಕಾಶ ನೌಕೆಯು ತನ್ನಲ್ಲಿ ಅಳವಡಿಸಿರುವ ಬಾಟ್ ಅಂದ್ರೆ ಅದೊಂದು ಮಾದರಿಯ ಪುಟ್ಟ ಕಂಪ್ಯೂಟರ್ ರೋಬೋ ಮೂಲಕ 62 ಪ್ರತ್ಯೇಕ ಚಿತ್ರಗಳನ್ನು ಭೂಮಿಗೆ ಕಳುಹಿಸಿದ್ದು, ಅದನ್ನೆಲ್ಲ ಒಟ್ಟುಗೂಡಿಸಿ ನೋಡಿದಾಗ ಒಂದು ಸುಂದರ ಚಿತ್ರಣ ಮೂಡಿ ಬಂದಿದೆ. ಅದುವೇ ರೋವರ್ ಪಕ್ಕದಲ್ಲಿರುವ ಇಂಜೆನ್ಯುಟಿ ಹೆಲಿಕಾಪ್ಟರ್ ಚಿತ್ರ ಎಂದು ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್ Nasa’s Jet Propulsion Laboratory -JPL) ಟ್ವೀಟ್ ಮಾಡಿ ಜಗತ್ತಿಗೆ ತಿಳಿಸಿದೆ. ರೋವರ್ ನೌಕೆಯಿಂದ 13 ಅಡಿ ದೂರದಲ್ಲಿರುವ ಇಂಜೆನ್ಯುಟಿ ಹೆಲಿಕಾಪ್ಟರ್ ಚಿತ್ರವನ್ನು ಏಪ್ರಿಲ್ 6ರಂದು ಅಂದರೆ ರೋವರ್, ಮಂಗಳನ ಅಂಗಳಕ್ಕೆ ಇಳಿದ 46ನೇ ದಿನದಂದು ಭೂಮಿಗೆ ರವಾನಿಸಿದೆ.
ಹಾಗೆ ನೋಡಿದರೆ ರೋವರ್ ನೌಕೆ ಮತ್ತು ಇಂಜೆನ್ಯುಟಿ ಹೆಲಿಕಾಪ್ಟರ್ ಎರಡೂ ಪುಟ್ಟ ಪುಟ್ಟ ಕಂಪ್ಯೂಟರ್ ರೋಬೋಗಳೇ. ಮಂಗಳನ ಅಂಗಳದಲ್ಲಿರುವ ಜೆಜೆರೋ ಕ್ರೇಟರ್ ಭಾಗದಿಂದ ಈ ಮೊದಲ ಸೆಲ್ಫಿ ತೆಗೆದುಕಳುಹಿಸಿದೆ.. ಇಂಜೆನ್ಯುಟಿ ಹೆಲಿಕಾಪ್ಟರ್ ಸದ್ಯದಲ್ಲೇ ಮಂಗಳನ ಅಂಗಳದಲ್ಲಿ ನಿರ್ದಿಷ್ಟ ಗುರಿಯೊಂದಿಗೆ, ಸ್ವಚ್ಚಂದವಾಗಿ ಹಾರಾಡಲಿದೆ. ಅದು ಅದ್ಭುತವಾದ, ಬಲಾಢ್ಯ ಕಾರ್ಯಯೋಜನೆಯಾಗಲಿದೆ.. ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.
ವಾಟ್ಸನ್ ಅಂದ್ರೆ ವೈಡ್ ಆಂಗಲ್ ಟೊಪೊಗ್ರಾಫಿಕ್ ಸೆನ್ಸಾರ್ ಫಾರ್ ಆಪರೇಶನ್ಸ್ ಅಂಡ್ ಎಂಜಿನಿಯರಿಂಗ್ ಕ್ಯಾಮೆರಾ ಮೂಲಕ ಈ ಪುಟ್ಟ ಬಾಟ್ ರೋಬೋ ಈ ಮೊದಲ ಚಿತ್ರವನ್ನು ಕಳಿಸಿಕೊಟ್ಟಿದೆ. ಪರ್ಸಿವರೆನ್ಸ್ ರೋವರ್ ತುದಿಯಲ್ಲಿ ಈ ಕ್ಯಾಮೆರಾ ಸ್ಥಾಪಿತವಾಗಿದೆ.. ಪರ್ಸಿವರೆನ್ಸ್ ರೋವರ್ ಬಾಹ್ಯಾಕಾಶ ನೌಕೆಯ ಹೊಟ್ಟೆಯೊಳಗೆ ಅಡಗಿದ್ದ ಈ ಇಂಜೆನ್ಯುಟಿ ಹೆಲಿಕಾಪ್ಟರ್ ಬಾಟ್ ಭೂಮಿಯಿಂದ ಹಾರಿದ ಬಳಿಕ, ಕಳೆದ ವಾರ ಪರ್ಸಿವರೆನ್ಸ್ ರೋವರ್ ಒಡಲಾಳದಿಂದ ಹೊರಕ್ಕೆ ಬಂದಿದೆ.
ಸದ್ಯಕ್ಕೆ ಅಲ್ಲಲ್ಲೇ ಸುಳಿದಾಡುತ್ತಿರುವ ಈ ಇಂಜೆನ್ಯುಟಿ ಹೆಲಿಕಾಪ್ಟರ್ ಬಾಟ್ ಏಪ್ರಿಲ್ 11ರಿಂದ ಪೂರ್ಣ ಸಾಮರ್ಥ್ಯದೊಂದಿಗೆ ಹಾರಾಟ ನಡೆಸಲಿದೆ. ಅದಕ್ಕೂ ಮುನ್ನ ನಾಸಾ ದಿಂದ ನೇರವಾಗಿ ಪರ್ಸಿವರೆನ್ಸ್ ರೋವರ್ ನೌಕೆಗೆ ಹಾರಾಟ ಮಾರ್ಗದ ಸಂಕೇತಗಳು ರವಾನೆಯಾಗಲಿವೆ ಎಂದು ನಾಸಾ ಸ್ಪಷ್ಟಪಡಿಸಿದೆ.
ಅಂದಹಾಗೆ ಈ ಮಾರ್ಸ್ ಪರ್ಸಿವರೆನ್ಸ್ ರೋವರ್ ನೌಕೆಯ ಗುರಿ/ಉದ್ದೇಶ ಏನೆಂದ್ರೆ ಮಂಗಳನ ಅಂಗಳದಲ್ಲಿ ರೌಂಡ್ಸ್ ಹೊಡೆಯುತ್ತಾ, ಪುರಾತನ ಸೂಕ್ಷ್ಮಾಣು ಜೀವಿಗಳು ಅಲ್ಲಿ ನೆಲೆಸಿದ್ದವೇ ಎಂಬುದನ್ನು ಸಂಶೋಧಿಸುವುದಾಗಿದೆ! ಮುಂದೆ ಮನುಷ್ಯನಿಗೂ ಮಂಗಳ ಗ್ರಹ ವಾಸಯೋಗ್ಯವೇ ಎಂಬುದನ್ನು ಅರಿಯುವ ಉದ್ದೇಶ ಹೊಂದಿದೆ. ಮಂಗಳ ಗ್ರಹದ ಜೆಝೆರೋ ಕ್ರೇಟರ್ ಎಂಬುದು 350 ಲಕ್ಷ ಕೋಟಿ ವರ್ಷಗಳ ಹಿಂದಿನ ಸುಮಾರು 45 ಕಿ.ಮೀ ಉದ್ದದ ಬರಿದಾದ ನದಿ ಭಾಗವಾಗಿದೆ.
Two bots, one selfie. Greetings from Jezero Crater, where I’ve taken my first selfie of the mission. I’m also watching the #MarsHelicopter Ingenuity as it gets ready for its first flight in a few days. Daring mighty things indeed.
Images: https://t.co/owLX2LaK52 pic.twitter.com/rTxDNK69rs
— NASA’s Perseverance Mars Rover (@NASAPersevere) April 7, 2021
(Mars Perseverance rover and Ingenuity helicopter bots on mars mission sends first selfie)