ಸ್ಮಾರ್ಟ್ಫೋನ್ (Smartphone) ಮಾರುಕಟ್ಟೆ ಇಂದು ತುಂಬಾನೆ ವಿಶಾಲವಾಗಿದೆ. ಶವೋಮಿ (Xiaomi), ಸ್ಯಾಮ್ಸಂಗ್ (Samsung), ರಿಯಲ್ ಮಿ, ಒಪ್ಪೋ ಹೀಗೆ ಅನೇಕ ಬ್ರ್ಯಾಂಡ್ಗಳು ಹುಟ್ಟುಕೊಂಡಿದ್ದು ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿವೆ. ಚೀನಾ ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳ ನಡುವೆ ತನ್ನದೇ ಆದ ವಿಶೇಷ ಸ್ಥಾನ ಉಳಿಸಿಕೊಂಡಿರುವ ನೋಕಿಯಾ (Nokia) ಕಂಪೆನಿ ಸದ್ಯ ಹೊಸ ಮೊಬೈಲ್ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ.
ನೋಕಿಯಾ ಕಂಪೆನಿ Nokia C30 ಎಂಬ ಹೊಸ ಸ್ಮಾರ್ಟ್ಫೋನನ್ನು ತಯಾರಿಸುತ್ತಿದೆ. ಆದರೆ, ಬಿಡುಗಡೆಗು ಮುನ್ನವೇ ಇದರ ಪ್ರಮುಖ ಮಾಹಿತಿಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ. ಲೀಕ್ ಆಗಿರುವ ಮಾಹಿತಿಯ ಪ್ರಕಾರ ಈ ಸ್ಮಾರ್ಟ್ಫೋನಿನ ಎದುರು ಮತ್ತು ಹಿಂಭಾಗ ಗ್ರೀನ್-ವೈಟ್ ಎರಡು ಬಣ್ಣಗಳಲ್ಲಿ ಬರಲಿದೆ.
ಇನ್ನೂ ರಿಯರ್ ಕ್ಯಾಮೆರಾ ಸೆಟಪ್ ಇರಲಿದೆ ಎಂದು ಹೇಳಲಾಗಿದೆ. ಕ್ಯಾಮೆರಾ ಸರ್ಕಲ್ನ ಆಚೆಗೆ ಫ್ಲ್ಯಾಶ್ ಅಳವಡಿಸಲಾಗಿದೆಯಂತೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ನೀಡಲಾಗಿದೆ. ಇನ್ನುಳಿದಂತೆ ನೋಕಿಯಾ ಸಿ30 ಸ್ಮಾರ್ಟ್ಫೋನಿನ ಸೋರಿಕೆಯಾದ ಮಾಹಿತಿ ಇಲ್ಲಿದೆ.
Nokia C30 ಸ್ಮಾರ್ಟ್ಫೋನ್ 6.82 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ ಪ್ಲೇ ಅನ್ನು ಹೊಂದಿರಲಿದೆ. ಇದು 20.5:9 ಅನುಪಾತದೊಂದಿಗೆ ಬರಲಿದೆ. hexa-core 1.60 GHz ಚಿಪ್ಸೆಟ್ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, 3GB RAM ಆಯ್ಕೆ ಇರಲಿದೆಯಂತೆ. 64GB ಸ್ಟೋರೆಜ್ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದ್ದು, ಬರೋಬ್ಬರಿ 6,000mAh ಸಾಮರ್ಥ್ಯದ ಬ್ಯಾಟರಿ ಪವರ್ ಇರಲಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, 13 ಮೆಗಾಫಿಕ್ಸೆಲ್ನ ಪ್ರೈಮರಿ ರಿಯರ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್ ಕ್ಯಾಮೆರಾ ಅಳವಡಿಸಿದ್ದಾರಂತೆ. ಉಳಿದಂತೆ ಡ್ಯುಯೆಲ್ ಸಿಮ್ ಸಪೋರ್ಟ್, ವೈಫೈ, ಬ್ಯೂಟೂತ್ v4.2, ಜಿಪಿಎಸ್, ಮೈಕ್ರೊ ಯುಎಸ್ಬಿ ಮತ್ತು 3.5mm ಹೆಡ್ಫೋನ್ ಜ್ಯಾಕ್ ಬೆಂಬಲ ಪಡೆದುಕೊಂಡಿರಲಿದೆಯಂತೆ. ಇದರ ಬೆಲೆ 9,990 ರೂ. ಇರಬಹುದೆಂದು ಅಂದಾಜಿಸಲಾಗಿದೆ.
Flipkart ನಿಂದ ಬಂಪರ್ ಆಫರ್: ಅತಿ ಕಡಿಮೆ ಬೆಲೆಗೆ ಇಂದೇ ಖರೀದಿಸಿ ಸ್ಮಾರ್ಟ್ಟಿವಿ: ನಾಳೆ ಕೊನೇ ದಿನ
Whatsapp: ವಾಟ್ಸ್ಆ್ಯಪ್ನಲ್ಲಿ ನಿಮ್ಮನ್ನು ಯಾರು ಬ್ಲಾಕ್ ಮಾಡಿದ್ದಾರೆ ಎಂದು ತಿಳಿದುಕೊಳ್ಳುವುದು ಹೇಗೆ?