AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಗೂಗಲ್​ ಪೇ, ಫೋನ್ ​ಪೇ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡ್ಬಹುದು! ಹೇಗೆ?

ಎಟಿಎಂ ಕಂಪೆನಿ ಎನ್​ಸಿಆರ್ ಕಾರ್ಪೋರೇಷನ್​ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಸಿಟಿ ಯೂನಿಯನ್​ ಬ್ಯಾಂಕ್​ ಎನ್​​ಸಿಆರ್​ ಜತೆ ಕೈ ಜೋಡಿಸಿದೆ.

ಇನ್ಮುಂದೆ ಗೂಗಲ್​ ಪೇ, ಫೋನ್ ​ಪೇ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡ್ಬಹುದು! ಹೇಗೆ?
ಪ್ರಾತಿನಿಧಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on:Apr 03, 2021 | 7:05 AM

Share

ಭಾರತ ಡಿಜಿಟಲೀಕರಣದತ್ತ ಸಾಗುತ್ತಿದೆ. ಯಾವುದೇ ಅಂಗಡಿಗೆ ತೆರಳಿದರೂ ಗೂಗಲ್​ ಪೇ, ಫೋನ್​ ಪೇ ಮೊದಲಾದ ಆ್ಯಪ್​ಗಳ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ. ಇನ್ಮುಂದೆ ಈ ಆ್ಯಪ್​ಗಳ ಸಹಾಯದಿಂದ ನೀವು ಎಟಿಎಂನಲ್ಲಿ ಹಣ ಕೂಡ ವಿತ್​ಡ್ರಾ ಮಾಡಬಹುದಾಗಿದೆ! ಹೀಗೊಂದು ಹೊಸ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಇದು ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ಬಂದರೆ ಕಾರ್ಡ್​ಲೆಸ್​ ವ್ಯವಹಾರಕ್ಕೆ ಮತ್ತಷ್ಟು ಒತ್ತು ಸಿಗಲಿದೆ. ಎಟಿಎಂ ಕಂಪೆನಿ ಎನ್​ಸಿಆರ್ ಕಾರ್ಪೋರೇಷನ್​ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಸಿಟಿ ಯೂನಿಯನ್​ ಬ್ಯಾಂಕ್​ ಎನ್​​ಸಿಆರ್​ ಜತೆ ಕೈ ಜೋಡಿಸಿದೆ. ಮೊದಲ ಹಂತದಲ್ಲಿ ಸುಮಾರು 1500 ಎಟಿಎಂಗಳನ್ನು ಅಪ್​ಗ್ರೇಡ್​ ಮಾಡಲಾಗುತ್ತಿದೆ. ಈ ಎಟಿಎಂಗಳಲ್ಲಿ ಮಾತ್ರ ಹೊಸ ಆಯ್ಕೆ ಸಿಗಲಿದೆ.

ಹಣ ವಿತ್​ಡ್ರಾ ಮಾಡೋದು ಹೇಗೆ? ಅಪ್​ಗ್ರೇಡ್​ ಆದ ಎಟಿಎಂನಲ್ಲಿ ಮಾತ್ರ ಯುಪಿಐ (ಗೂಗಲ್​ ಪೇ, ಭೀಮ್, ಪೇಟಿಎಂ, ಫೋನ್​ಪೇ) ಮೂಲಕ ಹಣ ವಿತ್​ ಡ್ರಾ ಮಾಡಬಹುದು. ಎಟಿಎಂ ಯಂತ್ರದ ಮೇಲೆ ಒಂದು QR code ಇಡಲಾಗುತ್ತದೆ. ಇದನ್ನು ಸ್ಕ್ಯಾನ್​ ಮಾಡಬೇಕು. ಸ್ಕ್ಯಾನ್​ ಪೂರ್ಣಗೊಂಡ ನಂತರ ನಿಮಗೆ ವಿತ್​ಡ್ರಾ ಮಾಡಲು ಎಷ್ಟು ಹಣ ಬೇಕು ಎಂಬುದನ್ನು ಉಲ್ಲೇಖ ಮಾಡಿ ಪ್ರೊಸೆಸ್​ ಕೊಡಬೇಕು. ನಂತರ ಯುಪಿಐ ಪಿನ್​ ನೋಂದಣಿ ಮಾಡಬೇಕು. ಆಗ, ಎಟಿಎಂ ಮೂಲಕ ಹಣ ಬರಲಿದೆ. ಒಮ್ಮೆಗೆ 5,000 ರೂಪಾಯಿ ಮಾತ್ರ ವಿತ್​ಡ್ರಾ ಮಾಡಲು ಅವಕಾಶ ಇದೆ.

ಯಪಿಐ ಎಂದರೇನು? ಏಕಿಕೃತ ಪಾವತಿ ವ್ಯವಸ್ಥೆ ಎಂಬುದು ಯಪಿಐ ವಿಸ್ತ್ರತ ರೂಪ. ಒಂದು ಬ್ಯಾಂಕ್​ ಖಾತೆಯಿಂದ ಮತ್ತೊಂದು ಬ್ಯಾಂಕ್​ ಖಾತೆಗೆ ಹಣ ವರ್ಗಾವಣೆ ಮಾಡಲು ಇದು ಸಹಕಾರಿ. ಪ್ರತಿ ಬಳಕೆದಾರರ ಯಪಿಐ ಸಂಖ್ಯೆ ಬೇರೆಯದೇ ಆಗುತ್ತದೆ. ನೀವು ಒಂದು ಯುಪಿಐ ಅಪ್ಲಿಕೇಶನ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು ಮತ್ತು ಕೆಲವೇ ಸೆಕೆಂಡುಗಳಲ್ಲಿ ಹಣವನ್ನು ವರ್ಗಾಯಿಸಬಹುದು.

ಇದನ್ನೂ ಓದಿ: ಮೊಬಿಕ್ವಿಕ್​​ನ 35 ಲಕ್ಷ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಿದೆ ಎಂದ ಸಂಶೋಧಕ; ಅಂಥದ್ದೇನೂ ಆಗಿಲ್ಲ ಎಂದ ಕಂಪೆನಿ

(Now You Can Withdraw Amounts from ATM Using Phone Pe and Google Pay Here is How)

Published On - 7:03 am, Sat, 3 April 21

Follow Us
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ‘ಚೆನ್ನಮ್ಮ‘
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಜಂತರ್ ಮಂತರ್ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಅಂತ್ಯಕ್ರಿಯೆಗೂ ಮುನ್ನ ಚೆನ್ನಮ್ಮನ ಬಗ್ಗೆ ಹೆಚ್​​​​ಡಿಡಿ ಭಾವುಕ ಮಾತು
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ಪ್ರೀತಿಯ ಚುಂಬನ: ಪುತ್ರ ರೇವಣ್ಣರಿಂದ ತಾಯಿಗೆ ಅಂತಿನ ನಮನ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ತಾಯಿ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕಿದ ಹೆಚ್​​​​.ಡಿ ಕುಮಾರಸ್ವಾಮಿ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ
ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯ ನೆರವೇರಿಸುವವರು ಇವರೇ