ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ಶವೋಮಿಯ ಸ್ವತಂತ್ರ ಬ್ರಾಂಡ್ ‘ಪೋಕೋ‘ ಶೀಘ್ರದಲ್ಲೇ ಭಾರತದಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಹೆಸರು ಪೋಕೋ X6 ನಿಯೋ (Poco X6 Neo). ಈ ಬಗ್ಗೆ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಟಿಪ್ಸ್ಟರ್ ಮಾಹಿತಿ ನೀಡಿದ್ದಾರೆ. ಕಂಪನಿಯು ಕಳೆದ ತಿಂಗಳು ಭಾರತದಲ್ಲಿ X6 ಸರಣಿಯನ್ನು ಪರಿಚಯಿಸಿದೆ. ಇದರಲ್ಲಿ ಪೋಕೋ X6 ಮತ್ತು ಪೋಕೋ X6 ಪ್ರೊ ಒಳಗೊಂಡಿದೆ.
ಪೋಕೋ X6 ಸ್ನಾಪ್ಡ್ರಾಗನ್ 7s Gen 2 ಅನ್ನು ಹೊಂದಿದೆ ಮತ್ತು X6 ಪ್ರೊನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 8300-Ultra SoC ಇದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು 1.5K ರೆಸಲ್ಯೂಶನ್‌ನೊಂದಿಗೆ AMOLED ಸ್ಕ್ರೀನ್‌ಗಳನ್ನು ಹೊಂದಿವೆ.
ಪೋಕೋ X6 ನಿಯೋ ಕುರಿತು ಮಾತನಾಡುತ್ತಾ, @saanjjjuuu ಎಂಬ ಟಿಪ್‌ಸ್ಟರ್ ಮುಂದಿನ ತಿಂಗಳು ಪೋಕೋ ತನ್ನ ಹೊಸ ಫೋನ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಮಾರ್ಚ್‌ನಲ್ಲಿ ಸಾಧನವು ಅನಾವರಣಗೊಳ್ಳಲಿದೆ. ಮುಂಬರುವ ಸ್ಮಾರ್ಟ್‌ಫೋನ್‌ನ ಪ್ರಮುಖ ಸ್ಪೆಕ್ಸ್ ಮತ್ತು ಬೆಲೆಯ ಬಗ್ಗೆ ಕೂಡ ಟಿಪ್‌ಸ್ಟರ್ ಮಾಹಿತಿಯನ್ನು ನೀಡಿದ್ದಾರೆ.
ಶಾಕಿಂಗ್: ಭಾರತದಲ್ಲಿ ಕೇವಲ 6,799 ರೂ. ಗೆ ಹೊಸ ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಲಾವಾ
ಮುಂಬರುವ ಪೋಕೋ ಫೋನ್ 6.67 ಇಂಚಿನ AMOLED ಡಿಸ್ಪ್ಲೇ ಹೊಂದಿರಬಹುದು ಎಂದು ಹೇಳಲಾಗಿದೆ. ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಮೀಡಿಯಾಟೆಕ್ ಡೈಮನ್ಶನ್ 6080 ಪ್ರೊಸೆಸರ್ ಅನ್ನು ಫೋನ್‌ನಲ್ಲಿ ನೀಡಬಹುದು.
5,000mAh ಬ್ಯಾಟರಿಯೊಂದಿಗೆ ಪ್ಯಾಕ್ ಮಾಡಲ್ಪಡುತ್ತದೆ, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ IP54 ರೇಟಿಂಗ್ ಅನ್ನು ಪಡೆದುಕೊಂಡಿದೆ ಅಂದರೆ ಅದು ನೀರು ಮತ್ತು ಧೂಳಿನಿಂದ ಉಂಟಾಗುವ ಹಾನಿಯಿಂದ ರಕ್ಷಿಸಲ್ಪಟ್ಟಿದೆ.
ಭಾರತದಲ್ಲಿ ಪೋಕೋ X6 ನಿಯೋ ಬೆಲೆ ಸುಮಾರು 15 ಸಾವಿರ ರೂಪಾಯಿ ಆಗಬಹುದು ಎಂದು ಟಿಪ್‌ಸ್ಟರ್ ಹೇಳಿಕೊಂಡಿದ್ದಾರೆ. ಪೋಕೋ X6 ಮತ್ತು X6 ಪ್ರೊ ಬೆಲೆಯ ಬಗ್ಗೆ ಮಾತನಾಡುತ್ತಾ, ಪೋಕೋ X6 ಅನ್ನು 8 GB + 256 GB ಮತ್ತು 12GB + 256 GB ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅವುಗಳ ಬೆಲೆ ಕ್ರಮವಾಗಿ 18,999 ಮತ್ತು 21,999 ರೂ. ಅಂತೆಯೆ X6 ಪ್ರೊ ಅನ್ನು 8GB + 256GB ರೂಪಾಂತರಕ್ಕೆ ರೂ 24,999 ಮತ್ತು 12GB + 512GB ರೂಪಾಂತರಕ್ಕಾಗಿ ರೂ 26,999 ಕ್ಕೆ ಬಿಡುಗಡೆ ಮಾಡಲಾಗಿದೆ.
ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ