Galaxy A53: ನಂಬಲಾಗದ ಆಫರ್: 38,990 ರೂ. ಬೆಲೆಯ ಈ ಫೋನ್ ಮೇಲೆ 34,000 ರೂ. ಡಿಸ್ಕೌಂಟ್

| Updated By: Digi Tech Desk

Updated on: May 05, 2023 | 2:43 PM

lipkart Big Saving Days sale: ಗ್ಯಾಲಕ್ಸಿ A53 5G ಫೋನ್​ನ 8GB RAM + 128GB ವೇರಿಯಂಟ್‌ ಫೋನ್​ನ ಮೂಲಬೆಲೆ 38,990 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 17 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ 31,999 ರೂ. ಬೆಲೆಯಲ್ಲಿ ಲಭ್ಯವಾಗುತ್ತಿದೆ.

Galaxy A53: ನಂಬಲಾಗದ ಆಫರ್: 38,990 ರೂ. ಬೆಲೆಯ ಈ ಫೋನ್ ಮೇಲೆ 34,000 ರೂ. ಡಿಸ್ಕೌಂಟ್
samsung galaxy a53
Follow us on

ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ​ ಬಹುನಿರೀಕ್ಷಿತ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days sale) ಸೇಲ್ ಶುರುವಾಗಿದೆ. ಆರು ದಿನಗಳ ಕಾಲ ನಡೆಯಲಿರುವ ಈ ಸೇಲ್ ಮೇ 10ಕ್ಕೆ ಕೊನೆಗೊಳ್ಳಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡಲಾಗಿದೆ. ಅದರಲ್ಲೂ ಹೊಸ ಹೊಸ ಮೊಬೈಲ್​ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಪಡೆಯಬಹುದು. ನೀವು ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್​ ಟೈಮ್. ಈ ಸೇಲ್​ನಲ್ಲಿ 38,990 ರೂ. ಮೂಲಬೆಲೆ ಇರುವ ಸ್ಯಾಮ್​ಸಂಗ್ ಗ್ಯಾಲಕ್ಸಿ ಎ53 5ಜಿ (Samsung Galaxy A53 5G) ಸ್ಮಾರ್ಟ್​​ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

ಆಫರ್ ಏನು?:

ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಫೋನ್​ನ 8GB RAM + 128GB ವೇರಿಯಂಟ್‌ ಫೋನ್​ನ ಮೂಲಬೆಲೆ 38,990 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 17 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಮೂಲಕ 31,999 ರೂ. ಬೆಲೆಯಲ್ಲಿ ಲಭ್ಯವಾಗುತ್ತಿದೆ. 6991 ರೂ. ಅನ್ನು ಉಳಿಸಿಕೊಳ್ಳಬಹುದು. ಇದರ ಜೊತೆಗೆ ಆಕರ್ಷಕ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ. 28,250 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಪಡೆಯುವ ಅವಕಾಶ ಮಾಡಿಕೊಡಲಾಗಿದ್ದು, ನಿಮ್ಮ ಹಳೆಯ ಮೊಬೈಲ್ ಯಾವುದೇ ಸಮಸ್ಯೆ ಇಲ್ಲದೆ ಅತ್ಯುತ್ತಮವಾಗಿದ್ದರೆ ಅಷ್ಟೂ ಮೊತ್ತಕ್ಕೆ ಸೇಲ್ ಆಗಬಹುದು. ಹೀಗಾದಾಗ ಗ್ಯಾಲಕ್ಸಿ M32 ಸ್ಮಾರ್ಟ್​​ಫೋನ್ ಅನ್ನು ನೀವು ಕೇವಲ 3,749 ರೂ. ಗೆ ನಿಮ್ಮದಾಗಿಸಬಹುದು.

ಇದನ್ನೂ ಓದಿ
Flipkart Big Saving Days sale: ಫ್ಲಿಪ್​ಕಾರ್ಟ್​ನಲ್ಲಿ ಇಂದಿನಿಂದ​ ಬಿಗ್‌ ಸೇವಿಂಗ್‌ ಡೇಸ್‌: ಈ ಬಾರಿ ಕೂಡ ಬಂಪರ್ ಆಫರ್ಸ್
Amazon Great Summer Sale: ಅಮೆಜಾನ್ ಗ್ರೇಟ್ ಸಮ್ಮರ್ ಡೇಸ್ ಸೇಲ್: ಸ್ಮಾರ್ಟ್​ಫೋನ್​ಗಳ ಮೇಲೆ ಬಂಪರ್ ಆಫರ್
Infinix Smart 7 HD: ಬೆಲೆ ಕೇವಲ 5,999 ರೂ.: ಇಂದಿನಿಂದ ಭಾರತದಲ್ಲಿ ಈ ಹೊಸ ಫೋನ್ ಖರೀದಿಗೆ ಲಭ್ಯ
UPI Lite: ಪೇಟಿಎಂ ಬಳಿಕ ಫೋನ್​ಪೇನಲ್ಲೂ ಲೈಟ್; ಯುಪಿಐ ವಹಿವಾಟು ಕಡಿಮೆಗೊಳಿಸುವ ಕಾಲ ಬಂತಾ?

Instagram, Google: ಇನ್‌ಸ್ಟಾಗ್ರಾಮ್, ಗೂಗಲ್​​ನಲ್ಲಿ ಮಕ್ಕಳ ಲೈಂಗಿಕ ನಿಂದನೆ ವರದಿ ಹೆಚ್ಚಳ, ಸೂಕ್ತ ಕ್ರಮ ಅಗತ್ಯ ಎಂದ ಕೇಂದ್ರ

ಫೀಚರ್ಸ್ ಏನಿದೆ?:

ಸ್ಯಾಮ್​ಸಂಗ್ ಗ್ಯಾಲಕ್ಸಿ M32 ಸ್ಮಾರ್ಟ್​​ಫೋನ್ 6.4 ಇಂಚಿನ ಎಸ್-ಅಮೋಲೆಡ್ (sAMOLED) ಎಫ್‌ಹೆಚ್‌ಡಿ ಪ್ಯಾನೆಲ್ ಸ್ಕ್ರೀನ್ ಇದ್ದು, 90Hz ರೀಫ್ರೆಶ್ ರೇಟ್ ಇದೆ. ಮೀಡಿಯಾಟೆಕ್ ಹೀಲಿಯೋ ಜಿ80 ಪ್ರೊಸೆಸರ್ ಜೊತೆಗೂಡಿರುವುದರಿಂದ ಕಾರ್ಯಾಚರಣೆಯು ಸುಲಲಿತವಾಗಿದೆ. ಆಂಡ್ರಾಯ್ಡ್ 11 ಆಧಾರಿತ ಒನ್‌ಯುಐ 3.1 ನೊಂದಿಗೆ ಬರುತ್ತದೆ.

ಈ ಫೋನ್‌ನ ಪ್ರಧಾನ ಕ್ಯಾಮೆರಾದಲ್ಲಿ 64 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಸೆನ್ಸರ್ ಇದ್ದು, 8MP ವೈಡ್ ಆ್ಯಂಗಲ್ ಲೆನ್ಸ್ ಹಾಗೂ ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್‌ಗಳಿವೆ. ಸೆಲ್ಫೀಗಾಗಿ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಮುಂಭಾಗದ ಕ್ಯಾಮೆರಾ ಸೆಟಪ್ ನೀಡಲಾಗಿದೆ.

ಪ್ರಧಾನ ಕ್ಯಾಮೆರಾವು ಹೊರಾಂಗಣದಲ್ಲಿ ಅದ್ಭುತವಾಗಿ ಬಣ್ಣಗಳ ಮಿಳಿತದೊಂದಿಗೆ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಸಮೀಪದ ವಸ್ತುಗಳು ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳಿಂದಾಗಿ ಅತ್ಯುತ್ತಮವಾಗಿ ಸೆರೆಯಾಗುತ್ತವೆ. 20MP ಸಾಮರ್ಥ್ಯದ ಲೆನ್ಸ್ ಮೂಲಕ ಸೆಲ್ಫೀ, ಈಗಿನ ಅಗತ್ಯಕ್ಕೆ ತಕ್ಕಂತೆ ಚಿತ್ರಗಳಿಗೆ ಹೆಚ್ಚು ಸೌಂದರ್ಯ ಒದಗಿಸುತ್ತದೆ.

ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4ಜಿ, ವೈ-ಫೈ, ಬ್ಲೂಟೂತ್, ಮತ್ತು ಜಿಪಿಎಸ್ ಸೇರಿದಂತೆ ಪ್ರಮುಖ ನೂತನ ಫೀಚರ್​ಗಳಿಂದ ಕೂಡಿದೆ.

ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:09 pm, Fri, 5 May 23