ಟೆಕ್ನಾಲಜಿ (Technology) ಇಂದು ಆಗಸದೆತ್ತರಕ್ಕೆ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇದರ ನಡುವೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ, ಸೈಬರ್ ಕ್ರೈಂ (Cyber crime) ನಂತಹ ಘಟನೆಗಳು ಕೂಡ ಹೆಚ್ಚುತ್ತಿವೆ. ಇದರಿಂದ ನಮ್ಮ ಡಾಟಾವನ್ನು ಸುರಕ್ಷಿತವಾಗಿ ಇಡುವುದು ಸವಾಲಿನ ಕೆಲಸ ಆಗಿಬಿಟ್ಟಿದೆ. ಹೀಗಿರುವಾಗ ಸರ್ಚ್ ಇಂಜಿನ್ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ (Google CEO Sundar Pichai) ಅವರು ನಿಮ್ಮ ಡಾಟಾವನ್ನು ಸುರಕ್ಷಿತವಾಗಿಡಲು ಕೆಲವೊಂದು ಟಿಪ್ಸ್ ನೀಡಿದ್ದಾರೆ.
ಬಿಬಿಸಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸುಂದರ್ ಪಿಚೈ ಪ್ರಮುಖವಾಗಿ ಪಾಸ್ವರ್ಡ್ ವಿಚಾರವಾಗಿ ಹೇಳಿದ್ದಾರೆ. ಪಾಸ್ವರ್ಡ್ ಅನ್ನು ಪದೇ ಪದೇ ಬದಲಾಯಿಸುವುದು ಉತ್ತಮ ಆಯ್ಕೆಯಲ್ಲ. ಬದಲಾಗಿ ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಆ್ಯಕ್ಟಿವ್ ಮಾಡಿಕೊಂಡರೆ ಸೇಫ್ ಎಂಬುದು ಅವರ ಅಭಿಪ್ರಾಯ. ಸುಂದರ್ ಪಿಚೈ ಅವರು ಕೂಡ ಇದೇ ನಿಯಮವನ್ನು ಅನುಸರಿಸುತ್ತಾರಂತೆ.
ಟು-ಫ್ಯಾಕ್ಟರ್ ಅಥೆಂಟಿಕೇಷನ್ ಅನ್ನು ಆ್ಯಕ್ಟಿವ್ ಮಾಡುವುದರಿಂದ ನಿಮ್ಮ ಯಾವುದೇ ಮಾಹಿತಿ ಹ್ಯಾಕ್ ಆಗುವುದನ್ನು ತಡೆಯಬಹುದು ಎಂಬುದು ಸುಂದರ್ ಅನಿಸಿಕೆ. ವಿಶ್ವದಾದ್ಯಂತ ಬಹುತೇಕ ದೇಶಗಳಲ್ಲಿ ಮುಕ್ತ ಇಂಟರ್ನೆಟ್ ದಾಳಿಗೆ ಗುರಿಯಾಗುತ್ತಿದೆ. ಹಲವು ದೇಶಗಳು ಮಾಹಿತಿಗಳ ಹರಿವನ್ನು ನಿರ್ಬಂಧಿಸುತ್ತಿವೆ ಮತ್ತು ಈ ಮಾದರಿಯನ್ನು ಪದೇಪದೇ ಟೇಕಿಟ್ ಫಾರ್ ಗ್ರಾಂಟೆಡ್ ಅಂತ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಈಗ ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್ ಸೇರಿದಂತೆ ಸಕ್ರಿಯವಾಗಿರುವ ಹೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ. ಇದನ್ನು ಆ್ಯಕ್ಟಿವ್ ಮಾಡುವುದರಿಂದ ಹ್ಯಾಕರ್ಗಳ ದಾಳಿಯಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳಬಹುದು.
ಇನ್ನೂ ಭಾರತದ ಬಗ್ಗೆಯೂ ಮಾತನಾಡಿರುವ ಸುಂದರ್, ನಾನೊಬ್ಬ ಅಮೆರಿಕ ನಾಗರಿಕ. ಆದರೆ ಭಾರತ ನನ್ನೊಳಗೆ ಆಳವಾಗಿ ಉಳಿದಿದೆ. ನಾನು ಇವತ್ತು ಏನಾಗಿದ್ದೇನೋ ಅದರ ದೊಡ್ಡ ಭಾಗವಾಗಿ ಭಾರತ ಇದೆ ಎಂದು ಹೇಳಿದರು.
ಕೇವಲ 60 ದಿನಗಳಲ್ಲಿ ನೀವು ಇಂಜಿನಿಯರ್ ಆಗಬೇಕೆ?: ಕನ್ನಡಿಗರಿಂದ ಕನ್ನಡಿಗರಿಗಾಗಿ ವಿನೂತನ ಪ್ರಯತ್ನ
Published On - 1:40 pm, Tue, 13 July 21