AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿ ಇಡ್ತೀರಾ?: ಹಾಗಿದ್ರೆ ಈ ವಿಚಾರ ತಿಳಿದಿರಲಿ

Mobile data ON: ಮೊಬೈಲ್ ತುಂಬಾ ಉಪಯುಕ್ತ ಸಾಧನ. ನಿಮಗೆ ಒಂದು ಪ್ರಮುಖ ಮೆಸೇಜ್ ಸ್ವೀಕರಿಸಬೇಕಾದರೆ ಅಥವಾ ಕೆಲಸವಿದ್ದರೆ, ನೀವು ಖಂಡಿತವಾಗಿಯೂ ಡೇಟಾವನ್ನು ಆನ್‌ನಲ್ಲಿ ಇರಿಸಬಹುದು. ಆದಾಗ್ಯೂ, ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ಗೆ ಕೊಂಚ ಹಾನಿಯಾಗಬಹುದು, ಆದ್ದರಿಂದ ಅದು ಅಗತ್ಯವಿಲ್ಲದಿದ್ದರೆ, ನೀವು ಡೇಟಾವನ್ನು ಆಫ್ ಮಾಡುವುದು ಉತ್ತಮ.

Tech Tips: ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿ ಇಡ್ತೀರಾ?: ಹಾಗಿದ್ರೆ ಈ ವಿಚಾರ ತಿಳಿದಿರಲಿ
Mobile Data On
ಮಾಲಾಶ್ರೀ ಅಂಚನ್​
| Edited By: |

Updated on: Mar 06, 2025 | 11:44 AM

Share

(ಬೆಂಗಳೂರು, ಮಾ:06): ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ಗೇಮ್ಸ್, ಆಡಿಯೋ, ವಿಡಿಯೋ, ಶಾಪಿಂಗ್ ಮತ್ತು ಆನ್‌ಲೈನ್ ಶಿಕ್ಷಣದಿಂದ ಹಿಡಿದು ಬಹುತೇಕ ಎಲ್ಲದಕ್ಕೂ ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್ (Smartphone) ಅನ್ನು ಬಳಸುತ್ತಾರೆ. ಆದರೆ ಈ ಎಲ್ಲಾ ವಿಚಾರವನ್ನು ಬಳಸಲು, ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಅಂದರೆ ಮೊಬೈಲ್‌ನಲ್ಲಿ ಡೇಟಾ ಇರುವುದು ಅವಶ್ಯಕ. ಏಕೆಂದರೆ ಡೇಟಾ ಇಲ್ಲದೆ ಸ್ಮಾರ್ಟ್‌ಫೋನ್ ಹೊಂದುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವು ಜನರು ಇಂಪಾರ್ಟೆಟ್ ಮೆಸೇಜ್ ಬಂದ ತಕ್ಷಣ ಪ್ರತ್ಯುತ್ತರಿಸಲು ತಮ್ಮ ಫೋನ್‌ಗಳನ್ನು ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುತ್ತಾರೆ, ಇನ್ನು ಕೆಲವರು ಕೆಲಸದ ನಂತರ ಡೇಟಾವನ್ನು ಆಫ್ ಮಾಡುತ್ತಾರೆ. ಹಾಗಾದರೆ, ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡಬೇಕೇ ಅಥವಾ ಬೇಡವೇ?. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಮೊಬೈಲ್ ತುಂಬಾ ಉಪಯುಕ್ತ ಸಾಧನ. ನಿಮಗೆ ಒಂದು ಪ್ರಮುಖ ಮೆಸೇಜ್ ಸ್ವೀಕರಿಸಬೇಕಾದರೆ ಅಥವಾ ಕೆಲಸವಿದ್ದರೆ, ನೀವು ಖಂಡಿತವಾಗಿಯೂ ಡೇಟಾವನ್ನು ಆನ್‌ನಲ್ಲಿ ಇರಿಸಬಹುದು. ಆದಾಗ್ಯೂ, ದಿನವಿಡೀ ಮೊಬೈಲ್ ಡೇಟಾವನ್ನು ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ಗೆ ಕೊಂಚ ಹಾನಿಯಾಗಬಹುದು, ಆದ್ದರಿಂದ ಅದು ಅಗತ್ಯವಿಲ್ಲದಿದ್ದರೆ, ನೀವು ಡೇಟಾವನ್ನು ಆಫ್ ಮಾಡುವುದು ಉತ್ತಮ. ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ಹಲವು ಅನಾನುಕೂಲತೆಗಳಿದೆ, ಅವು ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಬ್ಯಾಟರಿ ಖಾಲಿಯಾಗುವಿಕೆ: ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಮುಖ್ಯವಾಗಿ ನೀವು ನಿಯಮಿತವಾಗಿ ಇಂಟರ್ನೆಟ್ ಬಳಸುವ ಅಪ್ಲಿಕೇಶನ್‌ಗಳನ್ನು ಬ್ಯಾಕ್​ಗ್ರೌಂಡ್ ರನ್ನಿಂಗ್​ನಲ್ಲಿ ಇಟ್ಟಿದ್ದರೆ ಬ್ಯಾಟರಿ ಬೇಗನೆ ಖಾಲಿ ಆಗುತ್ತದೆ.

ಇದನ್ನೂ ಓದಿ
Image
ಕೇಬಲ್ ಇಲ್ಲದೆ ಗೂಗಲ್ ತಾರಾ ಚಿಪ್​ನಿಂದ ಹೈಸ್ಪೀಡ್ ಇಂಟರ್ನೆಟ್
Image
ನಥಿಂಗ್ ಕಂಪನಿಯ 2 ಸ್ಮಾರ್ಟ್​ಫೋನ್ಸ್ ಬಿಡುಗಡೆ: ಬೆಚ್ಚು ಬೀಳಿಸುವ ಫೀಚರ್ಸ್
Image
ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಸ್ವಿಚ್ ಆಫ್ ಬರುವಂತೆ ಮಾಡೋದು ಹೇಗೆ?
Image
ನಿಮ್ಮ ಇನ್​ಬಾಕ್ಸ್ OTP ಗಳಿಂದ ತುಂಬಿದೆಯೇ?

ಡೇಟಾ ಬಳಕೆ: ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿರುವುದರಿಂದ ನಿಮ್ಮ ಡೇಟಾ ಪ್ಲಾನ್ ಅಂದುಕೊಂಡ ಸಮಯಕ್ಕಿಂತ ಬೇಗನೆ ವೇಗವಾಗಿ ಖಾಲಿಯಾಗಬಹುದು. ಅಲ್ಲದೆ, ಅನೇಕ ಅಪ್ಲಿಕೇಶನ್‌ಗಳು ಮೆಸೇಜ್ ಅಥವಾ ನೋಟಿಫಿಕೇಷನ್ ಮೂಲಕ ಡೇಟಾವನ್ನು ಬಳಸುತ್ತವೆ ಮತ್ತು ಅನೇಕ ಫೋನ್‌ಗಳು ಅಟೊಮೆಟಿಕ್ ಆಗಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಅಪ್ಡೇಟ್ ಮಾಡುತ್ತವೆ, ಹೀಗಾಗಿ ನಿಮ್ಮ ಫೋನ್‌ನ ಇಂಟರ್ನೆಟ್ ಬೇಗನೆ ಮುಗಿಯಬಹುದು.

Google Taara Chip: ಇಂಟರ್ನೆಟ್ ಜಗತ್ತಿನಲ್ಲಿ ಹೊಸ ಅಧ್ಯಾಯ: ಕೇಬಲ್ ಇಲ್ಲದೆ ಗೂಗಲ್ ತಾರಾ ಚಿಪ್​ನಿಂದ ಹೈಸ್ಪೀಡ್ ಇಂಟರ್ನೆಟ್

ಭದ್ರತಾ ಅಪಾಯಗಳು: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ಅದು ನಿಮ್ಮ ಸಾಧನವನ್ನು ಮಾಲ್‌ವೇರ್, ವೈರಸ್‌ಗಳು ಮತ್ತು ಹ್ಯಾಕರ್‌ಗಳಿಗೆ ಒಡ್ಡಿಕೊಳ್ಳಬಹುದು, ಅವರು ನಿಮ್ಮ ಫೋನ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಏಕೆಂದರೆ ನಿಮ್ಮ ಫೋನ್ ಯಾವಾಗಲೂ ಇಂಟರ್ನೆಟ್‌ಗೆ ಸಂಪರ್ಕದಲ್ಲಿರುತ್ತದೆ ಮತ್ತು ನಿಮ್ಮ ಫೋನ್ ಅಥವಾ ಅಪ್ಲಿಕೇಶನ್‌ಗಳ ಮೂಲಕ ಇಂಟರ್ನೆಟ್‌ನ ಲಾಭವನ್ನು ಪಡೆಯಬಹುದು.

ಲೊಕೇಷನ್ ಅಥವಾ ಪರ್ಸನಲ್ ಡೇಟಾ ಟ್ರ್ಯಾಕಿಂಗ್ ಸಮಸ್ಯೆ: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ನಿಮ್ಮ ಸಾಧನವು ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿರುತ್ತದೆ ಮತ್ತು ಸ್ವೀಕರಿಸುತ್ತಿರುತ್ತದೆ, ಇದನ್ನು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು, ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು.

ಕಿರಿ ಕಿರಿ: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವುದರಿಂದ, ನೋಟಿಫಿಕೇಷನ್, ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮ ನವೀಕರಣಗಳಿಂದ ನೀವು ವಿಚಲಿತರಾಗಬಹುದು, ಇದು ಇತರ ಕೆಲಸ ಅಥವಾ ನಿಮ್ಮ ಗಮನದ ಮೇಲೆ ಪರಿಣಾಮ ಬೀರಬಹುದು. ಇದಕ್ಕಾಗಿಯೇ ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದು ಅಪಾಯಕಾರಿ ಎನ್ನಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ