Tech Tips: AI ಫೋಟೋಗಳನ್ನು ಕಂಡುಹಿಡಿಯುವುದು ಹೇಗೆ?

ನಾವು ನೋಡುವ ಫೋಟೋಗಳು AI ಮೂಲಕ ಮಾಡಲಾಗಿದೆಯಾ?, ಅದು ನಿಜವೋ ಅಲ್ಲವೋ ಎಂದು ತಿಳಿಯಬಹುದು. ಕೆಲವು ಸರಳ ಸಲಹೆಗಳ ಸಹಾಯದಿಂದ ಇದನ್ನು ಕಂಡುಹಿಡಿಯಬಹುದು. ಈ ಸಲಹೆಗಳು ಯಾವುವು ಎಂಬುದನ್ನು ನೋಡೋಣ.

Tech Tips: AI ಫೋಟೋಗಳನ್ನು ಕಂಡುಹಿಡಿಯುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 02, 2024 | 4:31 PM

ಕೃತಕ ಬುದ್ಧಿಮತ್ತೆ ಪ್ರಸ್ತುತ ಟ್ರೆಂಡಿಂಗ್​ನಲ್ಲಿದೆ. AI ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃತಕ ಬುದ್ಧಿಮತ್ತೆಯನ್ನು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಆದರೆ AI ಯೊಂದಿಗೆ ಎಷ್ಟು ಅನುಕೂಲಗಳಿವೆಯೋ, ಅದೇ ಪ್ರಮಾಣದಲ್ಲಿ ಅನಾನುಕೂಲಗಳೂ ಇವೆ. ಅದರಲ್ಲೂ ಎಐ ತಂತ್ರಜ್ಞಾನದಿಂದ ತಯಾರಾದ ಫೋಟೋಗಳು ಪ್ರತಿ ದಿನ ವೈರಲ್ ಆಗುತ್ತಿವೆ. ನೈಜ ಫೋಟೋಗಳಂತೆ ಕಾಣುವ ಈ ನಕಲಿ ಫೋಟೋಗಳು ಕೆಲವು ಸಂದರ್ಭಗಳಲ್ಲಿ ಸೆಲೆಬ್ರಿಟಿಗಳಿಗೂ ತೊಂದರೆ ನೀಡುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ವೈರಲ್ ಆಗುವ ಫೋಟೋಗಳಲ್ಲಿ ಯಾವುದು ಒರಿಜಿನಲ್ ಫೋಟೋ? ಅಥವಾ ಯಾವುದು ನಕಲಿ?, ಫೋಟೋವನ್ನು ಯಾವುದರಿಂದ ಮಾಡಲ್ಪಟ್ಟಿದೆ ಎಂದು ತಿಳಿಯುವುದು ಕಷ್ಟವಾಗುತ್ತಿದೆ. ಆದರೆ, ಇದಕ್ಕೊಂದು ಮಾರ್ಗವಿದೆ. ನಾವು ನೋಡುವ ಫೋಟೋಗಳು AI ಮೂಲಕ ಮಾಡಲಾಗಿದೆಯಾ?, ಅದು ನಿಜವೋ ಅಲ್ಲವೋ ಎಂದು ತಿಳಿಯಬಹುದು. ಕೆಲವು ಸರಳ ಸಲಹೆಗಳ ಸಹಾಯದಿಂದ ಇದನ್ನು ಕಂಡುಹಿಡಿಯಬಹುದು. ಈ ಸಲಹೆಗಳು ಯಾವುವು ಎಂಬುದನ್ನು ನೋಡೋಣ.

ಗೂಗಲ್‌ನಲ್ಲಿ ಫೋಟೋದ ರಿವರ್ಸ್ ಇಮೇಜ್ ಮಾಡುವ ಮೂಲಕ ಇದು AI ಫೋಟೋ ಅಥವಾ ಸಾಮಾನ್ಯ ಫೋಟೋ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಫೋಟೋವನ್ನು ಕಾಪಿ ಮಾಡಿ ಗೂಗಲ್ ಸರ್ಚ್ ನಲ್ಲಿ ಹಾಕುವ ಮೂಲಕ ಫೋಟೋದ ಮೂಲವನ್ನು ಕಂಡುಹಿಡಿಯಬಹುದು. ಅಲ್ಲದೆ, ಗೂಗಲ್ ಲೆನ್ಸ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ, ಫೋಟೋದ ಹಿನ್ನಲೆಯನ್ನು ತಿಳಿದು ಇದು ಇದು ನಕಲಿಯೇ? ಎಂದು ಕಂಡುಹಿಡಿಯಬಹುದು. AI ಇಮೇಜ್ ಡಿಟೆಕ್ಟರ್ ವೈಶಿಷ್ಟ್ಯಗಳ ಸಹಾಯದಿಂದ ಫೋಟೋ ಮೂಲವಾಗಿದೆಯೇ? ಇದನ್ನು AI ಯೊಂದಿಗೆ ಮಾಡಲಾಗಿದೆಯೇ ಎಂದು ನೀವು ಕಂಡುಹಿಡಿಯಬಹುದು.

ಹೈವ್ ಮಾಡರೇಶನ್, ಆಪ್ಟಿಕ್ ಎಐ ಆರ್ ನಾಟ್, ಮೇಬೇಸ್ ಎಐ ಆರ್ಟ್ ಡಿಟೆಕ್ಟರ್ ಮುಂತಾದ ಇಮೇಜ್ ಡಿಟೆಕ್ಟರ್ ಟೂಲ್‌ಗಳು ಇದಕ್ಕಾಗಿ ಲಭ್ಯವಿದೆ. ಇದರಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ, ನೀವು ಚಿತ್ರದ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಗೂಗಲ್ AI ಟೂಲ್‌ಬಾರ್ ಕೂಡ ಇದನ್ನು ಹೇಳುತ್ತದೆ. ಗೂಗಲ್ ಚಾಟ್ ಬೋಟ್‌ನಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡುವ ಮೂಲಕ, ಫೋಟೋದ ನಿಜಾಂಶವನ್ನು ನೀವು ಕಂಡುಹಿಡಿಯಬಹುದು.

ಹಾಗೆಯೆ ಒಂದು ಫೋಟೋವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದು ಎಐ ಫೋಟೋ ಅಥವಾ ರಿಯಲ್ ಫೋಟೋ ಎಂದು ಕಂಡುಹಿಡಿಯಬಹುದು. ನೀವು ಯಾವುದೇ ವ್ಯಕ್ತಿಯ ಫೋಟೋವನ್ನು ನೋಡಿದರೆ, ಅವರ ಮುಖ ಮತ್ತು ಕೂದಲನ್ನು ಎಚ್ಚರಿಕೆಯಿಂದ ನೋಡಿ. ಅಲ್ಲಿ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಿರಿ ಮತ್ತು ಈ ಆಧಾರದ ಮೇಲೆ ಆ ಫೋಟೋವನ್ನು AI ನಿಂದ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಎಚ್ಚರಿಕೆಯಿಂದ ಕಣ್ಣುಗಳನ್ನು ನೋಡುವ ಮೂಲಕ ಕೂಡ ಇದನ್ನು ಕಂಡುಹಿಡಿಯಬಹುದು.

ಇದನ್ನೂ ಓದಿ: ಇನ್ಮುಂದೆ ನಿಮಗೆ OTP ಮೆಸೇಜ್ ತಡವಾಗಿ ಬರುತ್ತೆ: ಟ್ರಾಯ್​ನಿಂದ ಬಂದಿದೆ ಹೊಸ ನಿಯಮ

ನಿಮಗೆ ಫೋಟೋಗ್ರಫಿ ಬಗ್ಗೆ ಐಡಿಯಾ ಇದ್ದರೆ ಇದನ್ನು ಸುಲಭವಾಗಿ ಕಂಡುಹಿಡಿಯಬಹುದು. ಹೇಗೆಂದರೆ ಫೋಟೋದ ನೆರಳುಗಳು ಮತ್ತು ಬೆಳಕನ್ನು ಎಚ್ಚರಿಕೆಯಿಂದ ನೋಡುವ ಮೂಲಕ ನೀವು AI ಫೋಟೋಗಳನ್ನು ಗುರುತಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ; ಕೊಚ್ಚಿಹೋದ ಬಸ್​ಗಳು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
‘ಚೈತ್ರಾ ಯಾರಿಗೆ ಹಾಲು ಕೊಡ್ತಾರೆ ಅಂತ ಗೊತ್ತಾಗಲ್ಲ’: ಐಶ್ವರ್ಯಾ ನೇರ ಮಾತು
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ CM ಶಂಕುಸ್ಥಾಪನೆ
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಯಡಿಯೂರಪ್ಪ ಒಂದು ಸ್ಪೆಂಟ್ ಫೋರ್ಸ್, ಲಿಂಗಾಯತರಿಗೂ ಬೇಡವಾಗಿದ್ದಾರೆ: ಯತ್ನಾಳ್
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಹೊಡೆದಾಟ, ಪೊಲೀಸ್ ಎಂಟ್ರಿ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಬೇರೆ ನಾಯಕರೇಕೆ ಯತ್ನಾಳ್​ರಂತೆ ಹೋರಾಟಕ್ಕೆ ಮುಂದಾಗಲಿಲ್ಲ? ಬಂಗಾರಪ್ಪ
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ವಾಪಸ್ ಪಡೆಯಬೇಕು: ಡಿಕೆ ಸುರೇಶ್
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಹೋರಾಟದ ಮಧ್ಯಂತರ ವರದಿ ಸಲ್ಲಿಸಲು ಇಂದು ದೆಹಲಿಗೆ ತೆರಳಲಿರುವ ಯತ್ನಾಳ್ ತಂಡ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ
ಕ್ಯಾಚ್ ಬಿಟ್ಟ ಸರ್ಫರಾಝ್​​ ಖಾನ್​​ಗೆ ಪಂಚ್ ಕೊಟ್ಟ ರೋಹಿತ್ ಶರ್ಮಾ