ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ದೊಡ್ಡ ಟೆಲಿಕಾಂ ಕಂಪನಿಗಳಿಗೆ ಶಾಕ್ ನೀಡಿದೆ. ದೇಶಾದ್ಯಂತ ಫೋನ್ ಬಳಕೆದಾರರು ನಕಲಿ ಕರೆಗಳಿಂದ ಬೇಸತ್ತಿದ್ದಾರೆ. ಇಂತಹ ಕರೆಗಳನ್ನು ನಿಲ್ಲಿಸುವಂತೆ ಟ್ರಾಯ್ ಹಲವಾರು ಬಾರಿ ಟೆಲಿಕಾಂ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರೂ ಪ್ರಸಿದ್ಧ ಕಂಪನಿಗಳು ಈ ಸೂಚನೆಯನ್ನು ಪಾಲಿಸಲು ವಿಫಲವಾಗಿವೆ. ಇದೀಗ ಈ ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಇದುವರೆಗೆ 110 ಕೋಟಿ ರೂ. ದಂಡ ವಿಧಿಸಿದೆ. ಹೀಗಿದ್ದರೂ ಅಪರಿಚಿತ ಸಂಖ್ಯೆಗಳಿಂದ ಬರುವ ನಕಲಿ ಕರೆಗಳು ಭಾರತದಲ್ಲಿ ನಿಂತಿಲ್ಲ ಎಂಬುದು ದುರಾದೃಷ್ಟಕರ.
ಫೇಕ್ ಕಾಲ್ಗಳನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಟ್ರಾಯ್ ಪದೇ ಪದೇ ಟೆಲಿಕಾಂ ಕಂಪನಿಗಳಿಗೆ ಕೇಳಿಕೊಂಡಿದೆ. ಕೆಲವು ಮಾರ್ಕೆಟಿಂಗ್ ಸಂಸ್ಥೆಗಳು ಟೆಲಿಮಾರ್ಕೆಟಿಂಗ್ ಸಂಖ್ಯೆಗಳ ಬದಲಿಗೆ ಸಾಮಾನ್ಯ ಫೋನ್ ಸಂಖ್ಯೆಗಳ ಮೂಲಕ ಸಂಪರ್ಕಿಸುತ್ತವೆ. ಇದು ಪರಿಚಯಸ್ಥರ ಕರೆ ಎಂದು ಜನರು ಭಾವಿಸುತ್ತಾರೆ, ಆದರೆ ಇವು ನಕಲಿ ಟೆಲಿಮಾರ್ಕೆಟಿಂಗ್ ಸಂಖ್ಯೆಗಳು. ಪ್ರಸ್ತುತ, ಟೆಲಿಕಾಂ ಆಪರೇಟರ್‌ಗಳು ಅಂತಹ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ವಿಫಲರಾಗಿದ್ದಾರೆ.
ಭಾರತದಲ್ಲಿ ಮೊದಲ ಸೇಲ್ ಕಾಣುತ್ತಿದೆ ಒನ್ಪ್ಲಸ್ 12R: ಬೆಲೆ ಎಷ್ಟು?, ಏನಿದೆ ಆಫರ್?
ನಕಲಿ ಕರೆಗಳನ್ನು ನಿಲ್ಲಿಸಲು ವಿಫಲವಾಗಿರುವ ಟೆಲಿಕಾಂ ಕಂಪನಿಗಳ ಮೇಲೆ ಇಲ್ಲಿಯವರೆಗೆ 110 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ನಂಬರ್ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಮಾತ್ರವಲ್ಲದೆ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ (Vi) ಸೇರಿದಂತೆ ದೇಶದಲ್ಲಿ ಮೂರು ದೊಡ್ಡ ಟೆಲಿಕಾಂ ಕಂಪನಿಗಳ ಮೇಲೆ ದಂಡ ಹಾಕಲಾಗಿದೆ. ಇದಲ್ಲದೇ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೂಡ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಸ್ಲ್ಯಾಮ್ ಕಾಲ್ ಬರುತ್ತಿದೆ. ಸದ್ಯ ಯಾವ ಟೆಲಿಕಾಂ ಕಂಪನಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಈಗಾಗಲೇ ಅನಗತ್ಯ ಕರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಟ್ರಾಯ್ 74,000 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳ ಸಂಪರ್ಕವನ್ನು ಕಡಿತಗೊಳಿಸಿದೆ. ಹೀಗಿದ್ದರೂ, ಅನಗತ್ಯ ಕರೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 20 ಲಕ್ಷಕ್ಕೂ ಹೆಚ್ಚು ಅನಗತ್ಯ ಕರೆಗಳನ್ನು ಜನರು ಸ್ವೀಕರಿಸುತ್ತಾರಂತೆ.
ಆ್ಯಪಲ್ಗೆ ಬಿಗ್ ಶಾಕ್: 2024 ರ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಆ್ಯಪಲ್ ಹಿಂದಿಕ್ಕಿದ ಹುವೈ
ಟ್ರಾಯ್ 11 ಲಕ್ಷಕ್ಕೂ ಹೆಚ್ಚು ಟೆಲಿಮಾರ್ಕೆಟರ್‌ಗಳಿಗೆ ನೋಟಿಸ್ ಕಳುಹಿಸಿದೆ. ಅದೇ ಸಮಯದಲ್ಲಿ, 2 ಲಕ್ಷ ಸಂಖ್ಯೆಗಳಲ್ಲಿ ಹೊರಹೋಗುವ ಸೇವೆಯನ್ನು 6 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಸ್ಪ್ಯಾಮ್ ಕರೆಗಳನ್ನು ನಿಲ್ಲಿಸಲು ಕೃತಕ ಬುದ್ಧಿಮತ್ತೆ (AI) ಸಹಾಯವನ್ನು ಕೂಡ ಬಳಸಲಾಗುತ್ತಿದೆ. AI ಮೂಲಕ 30 ಲಕ್ಷ SMS ಹೆಡರ್‌ಗಳನ್ನು ಮತ್ತು ಸುಮಾರು 2 ಲಕ್ಷ SMS ಟೆಂಪ್ಲೇಟ್‌ಗಳನ್ನು ತೆಗೆದುಹಾಕಲಾಗಿದೆ. ನೀವು ಸಹ ನಕಲಿ ಮತ್ತು ಅನಗತ್ಯ ಕರೆಗಳಿಂದ ತೊಂದರೆಗೊಳಗಾಗಿದ್ದರೆ, ಟ್ರಾಯ್ನ ಅಪ್ಲಿಕೇಶನ್ TRAI DND 3.0 ನಲ್ಲಿ ದೂರು ನೀಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ