Vivo Y36: 4G, 5G ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಒಂದು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ವಿವೋ

|

Updated on: May 26, 2023 | 2:53 PM

ವಿವೋ ಕಂಪನಿ ಇದೀಗ ಮಾರುಕಟ್ಟೆಯಲ್ಲಿ ಹೊಸ ವಿವೋ ವೈ36 (Vivo Y36) ಸ್ಮಾರ್ಟ್‌ಫೋನ್‌ ಅನಾವರಣ ಮಾಡಿದೆ. ವಿಶೇಷ ಎಂದರೆ ಈ ಫೋನ್‌ 4G ವೇರಿಯಂಟ್‌ ಹಾಗೂ 5G ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಿದೆ.

Vivo Y36: 4G, 5G ಆವೃತ್ತಿಯಲ್ಲಿ ಕಡಿಮೆ ಬೆಲೆಗೆ ಒಂದು ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ವಿವೋ
Vivo Y36
Follow us on

ಪ್ರಸಿದ್ಧ ವಿವೋ (Vivo) ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ವಿವೋ ವೈ78 ಎಂಬ ಆಕರ್ಷಕ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದ್ದ ಕಂಪನಿ ಇದೀಗ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ವಿವೋ ವೈ36 (Vivo Y36) ಸ್ಮಾರ್ಟ್‌ಫೋನ್‌ ಅನಾವರಣ ಮಾಡಿದೆ. ವಿಶೇಷ ಎಂದರೆ ಈ ಫೋನ್‌ 4G ವೇರಿಯಂಟ್‌ ಹಾಗೂ 5G ವೇರಿಯಂಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ವಿವೋ Y36 4G ಫೋನ್ ಸದ್ಯಕ್ಕೆ ವಿದೇಶದಲ್ಲಿ ಮಾತ್ರ ರಿಲೀಸ್ ಆಗಿದೆ. ಇದರ 8GB RAM + 256GB ಸ್ಟೋರೇಜ್ ಸಾಮರ್ಥ್ಯದ ಬೆಲೆ IDR 3,399,000. ಅಂದರೆ ಭಾರತದಲ್ಲಿ ಇದರ ದರ ಸುಮಾರು 18,800 ರೂ. ಇರಬಹುದು. Y36 5G ಆಯ್ಕೆಯ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಕಂಪನಿ ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ
Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್
HTC U23 Pro: ಗ್ಯಾಜೆಟ್ ಮಾರುಕಟ್ಟೆಗೆ ಬಂತು ಹೊಸ ಎಚ್​ಟಿಸಿ ಸ್ಮಾರ್ಟ್​ಫೋನ್
Realme Narzo N53: ಬಜೆಟ್ ದರಕ್ಕೆ ಲಭ್ಯವಾಗುತ್ತಿದೆ ಸೂಪರ್ ರಿಯಲ್​ಮಿ ಸ್ಮಾರ್ಟ್​ಫೋನ್
Tech Tips: ಆಧಾರ್ ಕಾರ್ಡ್ ಕಳೆದು ಹೋದರೆ ಟೆನ್ಶನ್ ಬೇಡ: ಮರಳಿ ಪಡೆಯಲು ಹೀಗೆ ಮಾಡಿ ಸಾಕು

iQOO Neo 8 Series: ಮಾರುಕಟ್ಟೆಗೆ ಎಂಟ್ರಿಕೊಟ್ಟಿದೆ 120W ಫಾಸ್ಟ್ ಚಾರ್ಜರ್ ಎರಡು ಹೊಸ ಐಕ್ಯೂ ಸ್ಮಾರ್ಟ್​ಫೋನ್

ಫೀಚರ್ಸ್ ಏನಿದೆ?:

ವಿವೋ Y36 4ಜಿ ಮತ್ತು 5ಜಿ ಆವೃತ್ತಿ 720 x 1600 ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯದ 6.51 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ 4ಜಿ ಆವೃತ್ತಿ 90Hz ರಿಫ್ರೆಶ್ ರೇಟ್‌ ಪಡೆದಿದ್ದು, ಉತ್ತಮ ppi ಪಿಕ್ಸೆಲ್ ಸಾಂದ್ರತೆ ಈ ಡಿಸ್‌ಪ್ಲೇನಲ್ಲಿದೆ. 5ಜಿ ಆವೃತ್ತಿಯಲ್ಲಿ 60Hz ರಿಫ್ರೆಶ್ ರೇಟ್‌ ಹಾಗೂ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ನೀಡಲಾಗಿದೆ. ಎರಡೂ ಆವೃತ್ತಿ ಮೀಡಿಯಾಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್‌ ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಆಧಾರಿತ ಒರಿಜಿನ್ಓಎಸ್ ಓಷನ್ ಯುಐನಲ್ಲಿ ರನ್‌ ಆಗಲಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಇಂಟರ್ನಲ್‌ ಸ್ಟೋರೇಜ್‌ ಅನ್ನು ಹೆಚ್ಚಿಸುವ ಅವಕಾಶ ನೀಡಲಾಗಿದೆ.

ವಿವೋ Y36 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಕ್ಯಾಮೆರಾ, 2 ಮೆಗಾ ಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಕ್ಯಾಮೆರಾ ಹೊಂದಿದೆ. ವಿವೋ Y36 5ಜಿ ಆವೃತ್ತಿಯ ಸ್ಮಾರ್ಟ್‌ಫೋನ್​ನಲ್ಲಿ ಕೂಡ ಇದೇ ಆಯ್ಕೆ ಇರಬಹುದು ಎನ್ನಲಾಗಿದೆ.

ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಎರಡೂ ಫೋನ್44W ಚಾರ್ಜಿಂಗ್ ಅನ್ನು ಬೆಂಬಲಿಸುವ 5,000 mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ವೈ-ಫೈ, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 3.5 ಎಂಎಂ ಆಡಿಯೊ ಜಾಕ್ ಕನೆಕ್ಟಿವಿಟಿ ಆಯ್ಕೆಯ ಜೊತೆಗೆ ಸೆಕ್ಯೂರಿಟಿಗಾಗಿ ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ