WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್​ ಕಾಲ್​ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 19, 2021 | 11:44 PM

ಫೇಸ್​ಬುಕ್ ಮಾಲೀಕತ್ವದ ವಾಟ್ಸ್ಯಾಪ್​ ಕಂಪನಿಯು ಈವರೆಗೆ ಇಂಥ ಅವಕಾಶ ನೀಡಿರಲಿಲ್ಲ. ಈಗಾಗಲೇ ಕಾಲ್​ನಲ್ಲಿರುವ ಭಾಗಿದಾರರು ಮಾತ್ರ ಮತ್ತೊಬ್ಬರನ್ನು ಕಾಲ್​ಗೆ ಸೇರಿಸಲು ಅವಕಾಶವಿತ್ತು.

WhatsApp New Feature: ಕರೆ ಮಧ್ಯೆ ಸೇರಿಕೊಳ್ಳಲು ಅವಕಾಶವಿರುವ ಹೊಸ ಗ್ರೂಪ್​ ಕಾಲ್​ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್
ಹೊಸ ಆಯ್ಕೆ ಪರಿಚಯಿಸಿದ ವಾಟ್ಸ್ಯಾಪ್
Follow us on

ದೆಹಲಿ: ವಾಟ್ಸ್ಯಾಪ್ ಸೋಮವಾರ ತನ್ನ ಆ್ಯಪ್​ಗೆ ಹೊಸದೊಂದು ವೈಶಿಷ್ಟ್ಯ ಪರಿಚಯಿಸಿದೆ. ಗ್ರೂಪ್​ ಕಾಲ್ ಆರಂಭವಾಗಿ, ಸಕಾಲದಲ್ಲಿ ಕಾಲ್​ಗೆ ಸೇರಿಕೊಳ್ಳಲು ಆಗದಿದ್ದರೆ ಅಂಥ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಕಾಲ್​ಗೆ ಸೇರಿಕೊಳ್ಳಲು ಅವಕಾಶ ನೀಡಲಾಗಿದೆ. ಫೋನ್ ರಿಂಗ್ ಆದಾಗ ಕಾಲ್ ಪಿಕ್ ಮಾಡದಿದ್ದರೂ ನಂತರ ಅದೇ ಕಾಲ್​ಗೆ ಸೇರಿಕೊಳ್ಳಲು ಈ ಮೂಲಕ ಅವಕಾಶ ಸಿಗಲಿದೆ. ಗ್ರೂಪ್​ ಕಾಲ್​ನಿಂದ ಯಾವಾಗ ಬೇಕಿದ್ದರೂ ಹೊರಬಂದು, ಮತ್ತೆ ಸೇರಿಕೊಳ್ಳಲೂ ಇನ್ನು ಮುಂದೆ ಅವಕಾಶ ಸಿಗಲಿದೆ.

ವಾಟ್ಸ್ಯಾಪ್​ನ ಕಾಲ್​ ಟ್ಯಾಬ್​ ಮೇಲೆ ಟ್ಯಾಪ್ ಮಾಡುವ ಮೂಲಕ ಜಾಯ್ನ್​ ಆಗಲು ಅವಕಾಶವಿರುವ ಗ್ರೂಪ್​ ಕಾಲ್​ಗಳನ್ನು ಪರಿಶೀಲಿಸಿಕೊಳ್ಳಬಹುದು. ಫೇಸ್​ಬುಕ್ ಮಾಲೀಕತ್ವದ ವಾಟ್ಸ್ಯಾಪ್​ ಕಂಪನಿಯು ಈವರೆಗೆ ಇಂಥ ಅವಕಾಶ ನೀಡಿರಲಿಲ್ಲ. ಈಗಾಗಲೇ ಕಾಲ್​ನಲ್ಲಿರುವ ಭಾಗಿದಾರರು ಮಾತ್ರ ಮತ್ತೊಬ್ಬರನ್ನು ಕಾಲ್​ಗೆ ಸೇರಿಸಲು ಅವಕಾಶವಿತ್ತು.

ಹೊಸ ಆಯ್ಕೆ ಚಾಲ್ತಿಗೆ ಬಂದಿರುವ ವಿಚಾರವನ್ನು ಫೇಸ್​ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್​ ಝುಕರ್​ಬರ್ಗ್​ ಘೋಷಿಸಿದ್ದಾರೆ. ‘ವಾಟ್ಸ್ಯಾಪ್​ನಲ್ಲಿ ಜಾಯ್ನಬಲ್ ಕಾಲ್​ ಆಯ್ಕೆಯನ್ನು ಹೊಸದಾಗಿ ಪರಿಚಯಿಸುತ್ತಿದ್ದೇವೆ. ನಿಮ್ಮನ್ನು ಚಾಲ್ತಿಯಲ್ಲಿರುವ ಗ್ರೂಪ್​ ಕಾಲ್​ಗೆ ಸೇರಿಸಬಹುದು ಅಥವಾ ಮಿಸ್ ಮಾಡಿಕೊಂಡ ಗ್ರೂಪ್​ ಕಾಲ್​ಗೆ ನೀವು ನಂತರವೂ ಸೇರಿಕೊಳ್ಳಬಹುದು’ ಎಂದು ಹೇಳಿದ್ದಾರೆ.

ನೀವು ಇನ್​ಕಮಿಂಗ್ ಕಾಲ್​ಗೆ ಹೀಗೆ ಸೇರಿಕೊಳ್ಳಬಹುದು
– ಗ್ರೂಪ್ ಕಾಲ್​ಗೆ ಜಾಯ್ನ್ ಆಗಲು ಇನ್​ವೈಟ್ ಕಳಿಸಿದಾಗ ನಿಮಗೆ ನೋಟಿಫಿಕೇಶನ್ ಬರುತ್ತೆ
– ನಿಮಗೆ ಸೇರಿಕೊಳ್ಳಲು ಆಗದಿದ್ದರೆ Ignore ಟ್ಯಾಪ್ ಮಾಡಿ
– ಸೇರಿಕೊಳ್ಳಬೇಕಿದ್ದರೆ ಇನ್​ಫೊ ಸ್ಕ್ರೀನ್ ಓಪನ್ ಮಾಡಿ, Join ಟ್ಯಾಪ್ ಮಾಡಿ
– ಕಾಲ್ ಮೆನು ಪರಿಶೀಲಿಸಿದರೆ ಗ್ರೂಪ್​ ಕಾಲ್​ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತಿಳಿಯುತ್ತದೆ
– ಹೊಸದಾಗಿ ಯಾರನ್ನಾದರೂ ಸೇರಿಸಬೇಕೆಂದಿದ್ದರೆ ರಿಂಗ್​ ಟ್ಯಾಪ್ ಮಾಡಿ ಕಾಂಟ್ಯಾಕ್ಟ್​ ಸೆಲೆಕ್ಟ್ ಮಾಡಿ

ಗ್ರೂಪ್​ ಕಾಲ್​ಗೆ ಹೇಗೆ ಜಾಯಿನ್ ಆಗಬಹುದು ಎಂದು ತಿಳಿಯಲು ಈ ವಿಡಿಯೊ ನೋಡಿ


(WhatsApp Joinable Calls Rolls New Feature that Allows One to Join a Group Call That They Missed)

ಇದನ್ನೂ ಓದಿ: ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ

ಇದನ್ನೂ ಓದಿ: ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್​ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್

Published On - 11:43 pm, Mon, 19 July 21