Kichcha Sudeep
ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ಮೂಲತಃ ಶಿವಮೊಗ್ಗದವರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್ ಆಗಿದ್ದಾರೆ.
ಕಿಚ್ಚ ಸುದೀಪ್ ಅವರು ನಟನೆ ಮಾತ್ರವಲ್ಲದೇ ನಿರ್ದೇಶನದ ಮೂಲಕವೂ ಜನಮನ ಗೆದ್ದಿದ್ದಾರೆ. ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ‘ಮೈ ಆಟೋಗ್ರಾಫ್’ ಸೂಪರ್ ಹಿಟ್ ಆಯಿತು. ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕನಾಗಿಯೂ ಸುದೀಪ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ 2023ರವರೆಗೆ ಎಲ್ಲ 10 ಸೀಸನ್ಗಳ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಅವರು ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಪತ್ನಿಯ ಹೆಸರು ಪ್ರಿಯಾ. ಈ ದಂಪತಿಗೆ ಶಾನ್ವಿ ಎಂಬ ಮಗಳು ಇದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುದೀಪ್ ಅವರ ಮನೆ ಇದೆ. ‘ಸ್ಪರ್ಶ’, ‘ಹುಚ್ಚ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’, ‘ವಿಕ್ರಾಂತ್ ರೋಣ’, ‘ದಬಂಗ್ 3’ ಮುಂತಾದವು ಸುದೀಪ್ ನಟನೆಯ ಪ್ರಮುಖ ಸಿನಿಮಾಗಳು. ಗಾಯನದಲ್ಲೂ ಆಸಕ್ತಿ ಹೊಂದಿರುವ ಅವರು ಕೆಲವು ಸಿನಿಮಾದ ಗೀತೆಗಳಿಗೆ ಧ್ವನಿ ನೀಡಿದ್ದಾರೆ.
‘ಸಮರ್ಪಣಾ ಭಾವಕ್ಕೆ ಹೃದಯಪೂರ್ವಕ ಸಲ್ಯೂಟ್’; ಪಿಎಂ ಮೋದಿ ಸಾಧನೆಗೆ ಕಿಚ್ಚನ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸತತ ಮೂರನೇ ಬಾರಿಗೆ ದೇಶ ಮುನ್ನಡೆಸುತ್ತಿರುವ ಮೋದಿ, ನೆಹರು ಅವರ ದಾಖಲೆಯನ್ನು (4,398 ದಿನಗಳು) ಹಿಂದಿಕ್ಕಿ, ಅತಿ ಹೆಚ್ಚು ದಿನ ಸೇವೆ ಸಲ್ಲಿಸಿದ ಮೊದಲ ಚುನಾಯಿತ ಪ್ರಧಾನಿಯಾಗಿದ್ದಾರೆ (4,399 ದಿನಗಳು). ಈ ಐತಿಹಾಸಿಕ ಸಾಧನೆಗೆ ಕನ್ನಡ ನಟ ಕಿಚ್ಚ ಸುದೀಪ್ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ, ಮೋದಿ ಅವರ ಅಚಲ ಸಮರ್ಪಣೆ ಮತ್ತು ನಾಯಕತ್ವವನ್ನು ಹೊಗಳಿದ್ದಾರೆ.
- Rajesh Duggumane
- Updated on: Jun 11, 2026
- 1:08 pm
ಅಭಿಮಾನಿಗಳಿಗೆ ಕಿಚ್ಚನ್ ಸರ್ಪ್ರೈಸ್; ಸುದೀಪ್ ಕಡೆಯಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರರಂಗದಿಂದ ಪಡೆದಿದ್ದ ಬಿಡುವಿಗೆ ತೆರೆ ಬಿದ್ದಿದೆ. ಜೂನ್ 26ರಿಂದ ಅವರ ಬಹುನಿರೀಕ್ಷಿತ 'BRB' ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು ಲಾಕ್ ಮಾಡಿದ್ದಾರೆ. ಅಭಿಮಾನಿಗಳ ನಿರಂತರ ಪ್ರಶ್ನೆಗಳಿಗೆ ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಉತ್ತರ ನೀಡಿದ್ದು, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
- Rajesh Duggumane
- Updated on: Jun 10, 2026
- 10:06 am
ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ
ಬಿಗ್ ಬಾಸ್ ಕನ್ನಡ ಸೀಸನ್ 13ರ ಆಡಿಷನ್ ಆರಂಭವಾಗಿದೆ. ಮನೆಗೆ ಹೋಗಲು ಬಯಸುವ ಸ್ಪರ್ಧಿಗಳು ಆಡಿಷನ್ ವಿಡಿಯೋ ಮಾಡುವಾಗ ಸಾಮಾನ್ಯ ತಪ್ಪುಗಳನ್ನು ತಪ್ಪಿಸಬೇಕು. 3 ನಿಮಿಷದ ಸ್ಪಷ್ಟ, ಉತ್ತಮ ಗುಣಮಟ್ಟದ ವಿಡಿಯೋ ಮಾಡಿ. ನಿಮ್ಮ ವ್ಯಕ್ತಿತ್ವ ಹಾಗೂ ಅರ್ಹತೆಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿ. ಸರಿಯಾದ ವೆಬ್‌ಸೈಟ್‌ನಲ್ಲಿ ಮಾತ್ರ ಅಪ್‌ಲೋಡ್ ಮಾಡಿ, ನಿಮ್ಮ ಬಿಗ್ ಬಾಸ್ ಕನಸು ನನಸಾಗಿಸಿಕೊಳ್ಳಿ.
- Rajesh Duggumane
- Updated on: Jun 9, 2026
- 2:04 pm
ರಾಮ್ ಚರಣ್ ಬಳಿಕ ಕಿಚ್ಚ ಸುದೀಪ್ಗೆ ಹೊಸ ಬಾಡಿಗಾರ್ಡ್?
ರಾಮ್ ಚರಣ್ ಅವರ ಹೊಸ ಬಾಡಿಗಾರ್ಡ್ ಕೆವಿನ್ ಕುಂಟಾ ಸುದ್ದಿ ಆದ ಬೆನ್ನಲ್ಲೇ, ಕಿಚ್ಚ ಸುದೀಪ್ ಜೊತೆ ವಿದೇಶಿ ಅಂಗರಕ್ಷಕರೊಬ್ಬರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಸುದೀಪ್ ಜೊತೆಗಿರುವ ಕಿರಣ್ ಹೊರತಾಗಿ, ಈ ಎತ್ತರದ ವ್ಯಕ್ತಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಂದಿಗಷ್ಟೇ ಅವರ ಭದ್ರತೆಗೆ ಬಂದಿದ್ದಾರೋ ಅಥವಾ ಸುದೀಪ್ ಅವರ ಹೊಸ ಅಂಗರಕ್ಷಕರೋ ಎಂಬ ಕುತೂಹಲವಿದೆ.
- Rajesh Duggumane
- Updated on: Jun 5, 2026
- 12:42 pm
ಬಂದೇ ಬಿಡ್ತು ಬಿಗ್ ಬಾಸ್ ಹೊಸ ಸೀಸನ್: ಸರ್ಪ್ರೈಸ್ ನೀಡಿದ ‘ಕಲರ್ಸ್ ಕನ್ನಡ’
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋ ಆರಂಭದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಹೊಸ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಅಚ್ಚರಿ ನೀಡಲಾಗಿದೆ. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನ ಹೊಸ ಸೀಸನ್ ಈ ವರ್ಷ ಸ್ವಲ್ಪ ಬೇಗ ಶುರುವಾಗಲಿದೆ ಎಂಬುದು ಖಚಿತವಾಗಿದೆ.
- Madan Kumar
- Updated on: Jun 3, 2026
- 7:49 pm
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚನಿಗೆ ನೀಡಲಾಗಿದೆ ಟ್ರಿಬ್ಯೂಟ್; ಇದು ಪ್ರಿಯಾ ಸುದೀಪ್ ಸರ್ಪ್ರೈಸ್
ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಮೊದಲ ಬಾರಿಗೆ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ‘ಸುಪ್ರಿಯಾನ್ವಿ’ ಪ್ರೊಡಕ್ಷನ್ಸ್ ಮೂಲಕ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಟಿವಿ9 ವಿಶೇಷ ಸಂದರ್ಶನದಲ್ಲಿ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾ ಸುದೀಪ್ ಸಂದರ್ಶನದ ವಿಡಿಯೋ ಇಲ್ಲಿದೆ.
- Madan Kumar
- Updated on: Jun 1, 2026
- 9:06 pm
ವಿಜಯ್ ರೀತಿ ಕರ್ನಾಟಕದಲ್ಲಿ ಗೆಲ್ಲೋದು ಯಾರು? ಉತ್ತರ ಕೊಟ್ಟ ರಾಗಿಣಿ ದ್ವಿವೇದಿ
ತಮಿಳುನಾಡಿನಲ್ಲಿ ದಳಪತಿ ವಿಜಯ್ ಚುನಾವಣೆ ಗೆದ್ದು ಸರ್ಕಾರ ರಚಿಸುತ್ತಿದ್ದಾರೆ. ಈ ಗೆಲುವು ಹಲವರಿಗೆ ಸ್ಫೂರ್ತಿ ಆಗಿದೆ. ಈ ಬಗ್ಗೆ ರಾಗಿಣಿ ದ್ವಿವೇದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯದ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ. ರಾಗಿಣಿ ಮಾತನಾಡಿದ ವಿಡಿಯೋ ಇಲ್ಲಿದೆ..
- Madan Kumar
- Updated on: May 6, 2026
- 10:06 am
ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್
‘ಕೆಡಿ’ ಚಿತ್ರದಲ್ಲಿ ಸುದೀಪ್ ಅವರ ಎಂಟ್ರಿ ಬಗ್ಗೆ ಫ್ಯಾನ್ಸ್ ಮಾತನಾಡುತ್ತಿದ್ದಾರೆ. ಕಾಲ ಭೈರವ ಎಂಬ ಆ ಪಾತ್ರವನ್ನು ಪೂರ್ಣ ಪ್ರಮಾಣದಲ್ಲಿ ನೋಡಲು ‘ಕೆಡಿ 2’ ಚಿತ್ರಕ್ಕಾಗಿ ತಾವು ಕಾಯುತ್ತಿರುವುದಾಗಿ ಫ್ಯಾನ್ಸ್ ಹೇಳಿದ್ದಾರೆ. ಅಭಿಮಾನಿಗಳು ಮೊದಲ ದಿನ ಮೊದಲ ಶೋ ಸಿನಿಮಾ ನೋಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಡಿಯೋ ಇಲ್ಲಿದೆ..
- Madan Kumar
- Updated on: Apr 30, 2026
- 9:37 pm
ಇನ್ನು ಒಂದೇ ವರ್ಷದಲ್ಲಿ ‘ಕೆಡಿ 2’ ಬರಲಿದೆ: ಅಪ್ಡೇಟ್ ಕೊಟ್ಟ ಜೋಗಿ ಪ್ರೇಮ್
ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರು ‘ಕೆಡಿ 2’ ಸಿನಿಮಾ ಬರಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಒಂದೇ ವರ್ಷದಲ್ಲಿ ಸೀಕ್ವೆಲ್ ಸಿದ್ಧಪಡಿಸುವುದಾಗಿ ಅವರು ಹೇಳಿದ್ದಾರೆ. ‘ಕೆಡಿ’ ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದಕ್ಕೆ ಅವರು ಖುಷಿಯಾಗಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
- Madan Kumar
- Updated on: Apr 30, 2026
- 5:55 pm
ಕೆಡಿ ಸಿನಿಮಾ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವ ಎಂಬ ಅತಿಥಿ ಪಾತ್ರ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾಗೆ ಸ್ಟಾರ್ ಮೆರುಗು ಹೆಚ್ಚಿದೆ. ಆ ಪಾತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಇಂದು (ಏ.27) ನಡೆದ ಸುದ್ದಿಗೋಷ್ಠಿಯಲ್ಲಿ ಪಾತ್ರದ ಬಗ್ಗೆ ಪ್ರಶ್ನೆ ಎದುರಾಯಿತು.
- Madan Kumar
- Updated on: Apr 27, 2026
- 10:33 pm
ಸುದ್ದಿಗೋಷ್ಠಿಯಲ್ಲಿ ‘ಕೆಡಿ’ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಪರ ನಿಂತ ಕಿಚ್ಚ ಸುದೀಪ್
‘ಕೆಡಿ’ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಬೆಂಗಳೂರಿನಲ್ಲಿ ಧ್ರುವ ಸರ್ಜಾ, ಕಿಚ್ಚ ಸುದೀಪ್, ಜೋಗಿ ಪ್ರೇಮ್ ಮತ್ತು ಚಿತ್ರದ ನಾಯಕಿ ರೀಷ್ಮಾ ನಾಣಯ್ಯ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರೀಷ್ಮಾ ಅವರಿಗೆ ಯಾರೂ ಕೂಡ ಪ್ರಶ್ನೆ ಕೇಳಿಲ್ಲ ಎಂಬುದನ್ನು ಸುದೀಪ್ ಗಮನಿಸಿದರು.
- Madan Kumar
- Updated on: Apr 27, 2026
- 9:21 pm
‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ
ನಿರ್ದೇಶಕ ಪ್ರೇಮ್ ಮತ್ತು ನಟ ಕಿಚ್ಚ ಸುದೀಪ್ ನಡುವೆ ಉತ್ತಮ ಒಡನಾಟ ಇದೆ. ಆ ಬಗ್ಗೆ ‘ಕೆಡಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದ್ದು, ನಟ ಧ್ರುವ ಸರ್ಜಾ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
- Madan Kumar
- Updated on: Apr 27, 2026
- 7:29 pm