AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ

ನಿರ್ದೇಶಕ ಪ್ರೇಮ್ ಮತ್ತು ನಟ ಕಿಚ್ಚ ಸುದೀಪ್ ನಡುವೆ ಉತ್ತಮ ಒಡನಾಟ ಇದೆ. ಆ ಬಗ್ಗೆ ‘ಕೆಡಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದ್ದು, ನಟ ಧ್ರುವ ಸರ್ಜಾ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ
Kichcha Sudeep
ಮದನ್​ ಕುಮಾರ್​
|

Updated on: Apr 27, 2026 | 7:29 PM

Share

ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಕೆಡಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕಾಲ ಭೈರವ ಎಂಬುದು ಈ ಪಾತ್ರದ ಹೆಸರು. ಸುದೀಪ್ ನಟಿಸಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್​ಗಳು ಕೂಡ ‘ಕೆಡಿ’ ಸಿನಿಮಾದ (KD Movie) ಪಾತ್ರವರ್ಗದಲ್ಲಿ ಇದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿಬಂದಿದೆ. ಸುದೀಪ್ ಅವರು ಪ್ರೇಮ್ ಬಗ್ಗೆ ಮಾತನಾಡಿದರು. ‘ಮೊದಲು ನಾನು ಪ್ರೇಮ್ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರು ಸಿನಿಮಾ ಬಗ್ಗೆ ಅಪಾರ ಉತ್ಸಾಹ, ಪ್ರೀತಿ ಇರುವಂತಹ ನಿರ್ದೇಶಕ. ಆಗುಹೋಗುಗಳ ಮಧ್ಯೆ ಒಂದು ಒಳ್ಳೆಯ ಸಿನಿಮಾವನ್ನು ನೀಡಲು ಅವರು ಪ್ರಯತ್ನಿಸುತ್ತಾರೆ’ ಎಂದು ಸುದೀಪ್ ಮಾತು ಆರಂಭಿಸಿದರು.

‘ಪ್ರೇಮ್ ಅವರ ಪ್ರಯತ್ನವನ್ನು ನಾವು ಈಗ ನೋಡುತ್ತಿರುವುದಲ್ಲ. ಅವರ ಮೊದಲೇ ಸಿನಿಮಾದಿಂದಲೇ ನೋಡಿಕೊಂಡು ಬಂದಿದ್ದೇವೆ. ಇಂದಿನವರೆಗೂ ಅವರು ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ. ವ್ಯಕ್ತಿ ಇಷ್ಟ ಆದಮೇಲೆ ಅವರಿಗಾಗಿ ನಾವು ಏನು ಬೇಕಾದರೂ ಮಾಡುತ್ತೇನೆ. ಹಾಗಿರುವಾಗ ಕಾಲ ಭೈರವ ಪಾತ್ರ ಒಂದು ಸಣ್ಣ ಸಂಗತಿ ಅಷ್ಟೇ. ಅದು ನಾವು ಅವರಿಗೆ ಮಾಡಿದ ಉಪಕಾರ ಅಲ್ಲ. ಅವರು ಸಂಪಾದಿಸಿದ ಪ್ರೀತಿ ಅದು’ ಎಂದು ಸುದೀಪ್ ಹೇಳಿದರು.

‘ಅವರು ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಏನೂ ಉಪಕಾರ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಅದ್ದೂರಿಯಾದ ಸಿನಿಮಾ ಮೂಡಿಬರುತ್ತಿದೆ. ಅದರಲ್ಲಿ ನಾನು ಕೂಡ ಭಾಗವಾಗಲು ಅವಕಾಶ ಸಿಕ್ಕಿದೆ. ನನ್ನ ಸಹೋದರ ಧ್ರುವ ಸರ್ಜಾ ನಟನೆಯ ಇಷ್ಟು ದೊಡ್ಡ ಸಿನಿಮಾ ಸಿದ್ಧವಾಗುವಾಗ ಅದರಲ್ಲಿ ನಾನು ಕೂಡ ಇರಬೇಕು ಎನಿಸಿತು’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

‘ನೀವೆಲ್ಲರೂ ಸಿನಿಮಾ ನೋಡಬೇಕು. ಚಿರು ಮತ್ತು ಧ್ರುವ ಅವರನ್ನು ಬಹಳ ವರ್ಷದಿಂದ ನಾನು ನೋಡಿಕೊಂಡು ಬಂದಿದ್ದೇನೆ. ಧ್ರುವ ಜೊತೆ ತೆರೆ ಹಂಚಿಕೊಳ್ಳಲು ನನಗೆ ಅವಕಾಶ ಸಿಕಿದ್ದು ಗ್ರೇಟ್. ಚಿರು ಜೊತೆಯೂ ನಾನು ಕೆಲಸ ಮಾಡಿದ್ದೆ. ಪ್ರೇಮ್ ಇದ್ದರೆ ಆ ಸೆಟ್​​ನಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ನಾನು ವಿಲನ್ ಸಿನಿಮಾ ಮಾಡಿದಾಗ ಅವರ ಜೊತೆ ಕೆಲಸ ಎಂಜಾಯ್ ಮಾಡಿದ್ದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More