One Nation One Election - ONOE
ಒಂದು ರಾಷ್ಟ್ರ ಒಂದು ಚುನಾವಣೆ
One Nation One Election
ಒಂದು ರಾಷ್ಟ್ರ, ಒಂದು ಚುನಾವಣೆ ಎಂದರೆ, ಇಡೀ ದೇಶದಲ್ಲಿ ಎಲ್ಲಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದಾಗಿರುತ್ತದೆ. ಲೋಕಸಭೆ, ಎಲ್ಲಾ ರಾಜ್ಯಗಳ ವಿಧಾನಸಭೆ, ಎಲ್ಲಾ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ಇವೆಲ್ಲಕ್ಕೂ ಒಂದೇ ಸಮಯದಲ್ಲಿ ಚುನಾವಣೆ ನಡೆಸಲಾಗುತ್ತದೆ. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರ ಪಂಚಾಯಿತಿ, ನಗರ ಪಾಲಿಕೆ, ಮಹಾನಗರ ಪಾಲಿಕೆ ಹೀಗೆ ಎಲ್ಲಾ ಸಂಸ್ಥೆಗಳ ಚುನಾವಣೆಗಳೂ ಒಳಗೊಂಡಿರುತ್ತವೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಸಾಕಷ್ಟು ವೆಚ್ಚ ಉಳಿತಾಯ ಸಾಧ್ಯವಾಗುತ್ತದೆ. ಮಾನವ ಸಂಪನ್ಮೂಲ ಬಳಕೆ ಕಡಿಮೆ ಆಗುತ್ತದೆ. ಚುನಾವಣೆಗಳನ್ನು ಹೆಚ್ಚು ಸಮರ್ಥವಾಗಿ ನಡೆಸಲು ಸಾಧ್ಯವಾಗುತ್ತದೆ. ಚುನಾವಣಾ ಪ್ರಚಾರಕ್ಕೆ ಆಗುವ ಒಟ್ಟಾರೆ ವೆಚ್ಚವೂ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ.
ಒಂದು ವೇಳೆ ಬೇರೆ ಬೇರೆ ಕಾರಣಗಳಿಗೆ ಉಪಚುನಾವಣೆ ನಡೆಸಬೇಕೆಂದರೆ ವರ್ಷಕ್ಕೊಮ್ಮೆ ದೇಶಾದ್ಯಂತ ಎಲ್ಲಾ ಉಪಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಬಹುದು. ಭಾರತದಲ್ಲಿ ಸ್ವಾತಂತ್ರ್ಯ ಬಂದು ಎರಡು ಮೂರು ಸಾರ್ವತ್ರಿಕ ಚುನಾವಣೆಗಳು ಈ ರೀತಿ ಏಕಕಾಲದಲ್ಲಿ ನಡೆದದ್ದುಂಟು. ದಕ್ಷಿಣ ಆಫ್ರಿಕಾ, ಸ್ವೀಡನ್, ಜರ್ಮನಿ, ಬ್ರಿಟನ್ ದೇಶಗಳಲ್ಲಿ ಈ ರೀತಿಯ ಏಕಕಾಲದ ಸಾರ್ವತ್ರಿಕ ಚುನಾವಣೆ ನಡೆಸುವ ಪದ್ಧತಿ ಜಾರಿಯಲ್ಲಿದೆ.