AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OTT platform

OTT platform

ಭಾರತದಲ್ಲಿ ಹಾಗೂ ವಿಶ್ವಾದ್ಯಂತ ಒಟಿಟಿ ಪ್ಲಾಟ್​ಫಾರ್ಮ್​ಗಳು ಜನಪ್ರಿಯತೆ ಪಡೆದುಕೊಂಡಿದೆ. ಲಾಕ್​ಡೌನ್​ ಬಳಿಕ ಜನರು ಒಟಿಟಿಯನ್ನು ಹೆಚ್ಚು ಬಳಸಲು ಆರಂಭಿಸಿದರು. ಸಿನಿಮಾ, ಸೀರಿಯಲ್​, ಕ್ರೀಡೆ, ಕಾಮಿಡಿ ಶೋ, ನ್ಯೂಸ್​ ಸೇರಿದಂತೆ ಅನೇಕ ಕಂಟೆಂಟ್​ಗಳನ್ನು ಬಿತ್ತರಿಸುವ ಹಲವು ಜನಪ್ರಿಯ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿವೆ. ‘ನೆಟ್‌ಫ್ಲಿಕ್ಸ್ ’ ಪ್ರಪಂಚದಾದ್ಯಂತದ ವಿವಿಧ ರೀತಿಯ ಕಂಟೆಂಟ್​ ಬಿತ್ತರಿಸುವ ಮೂಲಕ ಹೆಸರುವಾಸಿಯಾಗಿದೆ. ಕೆಲವು ದೊಡ್ಡ ಸಿನಿಮಾಗಳು ಸೇರಿದಂತೆ ಜಾಗತಿಕ ಮತ್ತು ಭಾರತೀಯ ಪೇಕ್ಷಕರು ಮೆಚ್ಚುವಂತಹ ಶೋಗಳ ಪ್ರಸಾರದಿಂದ ‘ಅಮೇಜಾನ್​ ಪ್ರೈಂ ವೀಡಿಯೋ’ ಜನಮನ ಗೆದ್ದಿದೆ. ‘ಡಿಸ್ನಿ ಪ್ಲಸ್​ ಹಾಟ್‌ಸ್ಟಾರ್’ ಸಿನಿಮಾ ಜೊತೆಗೆ ಕ್ರೀಡೆಗಳ ಪ್ರಸಾರಕ್ಕೆ ಫೇಮಸ್​ ಆಗಿದೆ. ವಿವಿಧ ಭಾಷೆಗಳಲ್ಲಿ ವೈವಿಧ್ಯಮಯ ಕಂಟೆಂಟ್​ ಪ್ರದರ್ಶನ ಮಾಡುವ ಕಾರಣಕ್ಕೆ ‘ಜೀ5’ ಜನಮನ ಗೆದ್ದಿದೆ. ALTBalaji ಮತ್ತು Voot ಕೂಡ ತಮ್ಮದೇ ಆದ ಭಾರತೀಯ ಕಂಟೆಂಟ್​ಗಳ ನಿರ್ಮಾಣ ಮತ್ತು ಪ್ರಸಾರವನ್ನು ಮಾಡುತ್ತಿವೆ. SonyLIV ಒಟಿಟಿ ಕೂಡ ಭಾರತದಲ್ಲಿ ಜನಪ್ರಿಯತೆ ಪಡೆದಿದೆ. ಈ ಪ್ಲಾಟ್​ಫಾರ್ಮ್​ಗಳು ಭಾರತೀಯ ಪ್ರೇಕ್ಷಕರ ಮನರಂಜನೆಯ ದೊಡ್ಡ ಭಾಗವಾಗಿದೆ.

ಇನ್ನೂ ಹೆಚ್ಚು ಓದಿ

ಜೂನ್ 12ರಿಂದ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ ಅಕ್ಷಯ್ ಕುಮಾರ್ ಸಿನಿಮಾ ‘ಭೂತ್ ಬಂಗ್ಲ’

ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ ಸಿನಿಮಾ ಮೂಲಕ ಯಶಸ್ಸು ಕಂಡಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಬಹುದು. ಜೂನ್ 12ರಿಂದ ಒಟಿಟಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ಪರೇಶ್ ರಾವಲ್, ಟಬು, ರಾಜ್‌ಪಾಲ್ ಯಾದವ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕಾಡ ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಪ್ರಸಾರ

ಕಾಡ ನಟರಾಜ್ ಅವರು ಅಭಿನಯಿಸಿದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಲಭ್ಯವಿದೆ. ಬಲರಾಜ್ ವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿರುವುದಕ್ಕೆ ಕಾಡ ನಟರಾಜ್ ಖುಷಿ ಆಗಿದ್ದಾರೆ.

ತಮಿಳುನಾಡು ಸರ್ಕಾರದಿಂದಲೇ ಒಟಿಟಿ ಆರಂಭಿಸಲು ಸಿಎಂ ವಿಜಯ್‌ಗೆ ವಿಜಯ್ ಸೇತುಪತಿ ಮನವಿ

ಸ್ಥಳೀಯ ಭಾಷೆಗಳ ಚಿತ್ರರಂಗಕ್ಕೆ ಅನುಕೂಲ ಆಗಲು ಸರ್ಕಾರವೇ ಸ್ವಂತ ಒಟಿಟಿ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ನಟ ವಿಜಯ್ ಸೇತುಪತಿ ಅವರು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮೊದಲು ಹಿರಿಯ ನಟ ಕಮಲ್ ಹಾಸನ್ ಕೂಡ ಇದೇ ಮನವಿ ಮುಂದಿಟ್ಟಿದ್ದರು.

ಒಟಿಟಿಯಲ್ಲಿ ಬರಲಿದೆ ಹೊಸ ರೂಪದ ‘ಧುರಂಧರ್’; ಪ್ರೇಕ್ಷಕರಿಗೆ ಶುರುವಾಯ್ತು ಗೊಂದಲ

‘ಧುರಂಧರ್’ ಸಿನಿಮಾವನ್ನು ಹೊಸ ರೂಪದಲ್ಲಿ ನೋಡಲು ಪ್ರೇಕ್ಷಕರಿಗೆ ಅವಕಾಶ ಸಿಗುತ್ತಿದೆ. ಈ ಪ್ರಕಟಣೆಯು ರಣವೀರ್ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದೆ. ಕಟ್ ಇಲ್ಲದ, ಹೆಚ್ಚುವರಿ ದೃಶ್ಯಗಳನ್ನು ಒಳಗೊಂಡ ಹೊಸ ವರ್ಷನ್ ಬಿಡುಗಡೆ ಮಾಡುವುದಾಗಿ ನೆಟ್​ಫ್ಲಿಕ್ಸ್ ಹೇಳಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..

‘ಜೀ5’ ಮೂಲಕ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ; ಪ್ರಸಾರ ಯಾವಾಗ?

ಲವ್ ಮಾಕ್ಟೇಲ್ ಸರಣಿಯ ಕೊನೇ ಸಿನಿಮಾ ‘ಲವ್ ಮಾಕ್ಟೇಲ್ 3’ ಈಗಾಗಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿದೆ. ಈಗ ಈ ಸಿನಿಮಾ ಒಟಿಟಿಗೆ ಕಾಲಿಡುತ್ತಿದೆ. ಡಾರ್ಲಿಂಗ್ ಕೃಷ್ಣ, ಸಂವೃತಾ ಮುಂತಾದವರು ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ಒಟಿಟಿ ರಿಲೀಸ್ ಬಗ್ಗೆ ಇಲ್ಲಿದೆ ವಿವರ..

Jerax Review: ಜನರನ್ನೇ ಜೆರಾಕ್ಸ್ ಮಾಡುವ ಯಂತ್ರದೊಳಗೆ ಇದೆ ಸಖತ್ ಸಸ್ಪೆನ್ಸ್

Jerax Web Series: ಡಾಲಿ ಧನಂಜಯ ನಿರ್ಮಾಣದ ‘ಜೆರಾಕ್ಸ್’ ವೆಬ್ ಸರಣಿ ‘ಜೀ5’ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಶ್ರೀನಿಧಿ ಬೆಂಗಳೂರು ಅವರು ನಿರ್ದೇಶನ ಮಾಡಿದ್ದಾರೆ. ನಾಗಭೂಷಣ, ಪಾಯಲ್ ಚಂಗಪ್ಪ, ತುಕಾಲಿ ಸಂತೋಷ್, ಮಂಜು ಪಾವಗಡ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಜೆರಾಕ್ಸ್’ ವೆಬ್ ಸಿರೀಸ್ ವಿಮರ್ಶೆ ಇಲ್ಲಿದೆ.

30 ವರ್ಷಗಳ ಬಳಿಕ ಕಿಸ್ ಮಾಡಲು ಕಾಜೋಲ್ ಒಪ್ಪಿಕೊಂಡಿದ್ದೇಕೆ? ಸಿಕ್ತು ಉತ್ತರ

ಖ್ಯಾತ ನಟಿ ಕಾಜೋಲ್ ಅವರು ಹಲವು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಕಿಸ್ಸಿಂಗ್ ಸೀನ್ ಒಪ್ಪಿಕೊಂಡಿರಲಿಲ್ಲ. ಆದರೆ 30 ವರ್ಷಗಳ ಬಳಿಕ ಅವರು ಆ ನಿಮಯವನ್ನು ಮುರಿದರು. ಅದಕ್ಕೆ ಕಾರಣ ಏನು ಎಂಬುದನ್ನು ಅವರೀಗ ಬಹಿರಂಗಪಡಿಸಿದ್ದಾರೆ. ಆ ಬಗ್ಗೆ ಇಲ್ಲದೆ ಮಾಹಿತಿ..

ಜೀ5 ಒಟಿಟಿಯಲ್ಲಿ ಏ.24ರಿಂದ ಪ್ರಸಾರ ಆಗಲಿದೆ ‘ಜೆರಾಕ್ಸ್’ ವೆಬ್ ಸರಣಿ; ಏನಿದರ ಕಥೆ?

ಜೀ5 ಒಟಿಟಿಯಲ್ಲಿ ‘ಅಯ್ಯನ‌ ಮನೆ’, ‘ಮಾರಿಗಲ್ಲು’, ‘ಶೋಧ’, ‘ರಾಕ್ಷಸ’ ಬಳಿಕ ‘ಜೆರಾಕ್ಸ್’ ವೆಬ್ ಸರಣಿ ಬರುತ್ತಿದೆ. ನಾಗಭೂಷಣ, ಪಾಯಲ್ ಚಂಗಪ್ಪ, ತುಕಾಲಿ ಸಂತು, ಮಂಜು ಪಾವಗಡ, ಓಂ ಪ್ರಕಾಶ್ ರಾವ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಜೈಲರ್ 2’ ಬಿಡುಗಡೆಗೂ ಮುನ್ನವೇ 160 ಕೋಟಿ ರೂಪಾಯಿ ಒಟಿಟಿ ಡೀಲ್?

ನಟ ರಜನಿಕಾಂತ್ ಅವರು ‘ಜೈಲರ್ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ಒಟಿಟಿ ಡೀಲ್ ಬಗ್ಗೆ ದೊಡ್ಡ ಸುದ್ದಿ ಕೇಳಿಬಂದಿದೆ. ಬರೋಬ್ಬರಿ 160 ಕೋಟಿ ರೂಪಾಯಿಗೆ ಈ ಚಿತ್ರದ ಒಟಿಟಿ ಹಕ್ಕುಗಳು ಮಾರಾಟ ಆಗಿವೆ ಎಂದು ಹೇಳಲಾಗುತ್ತಿದೆ.

ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ಪಾತ್ರದಲ್ಲಿ ‘ಧುರಂಧರ್’ ನಟ ಅರ್ಜುನ್ ರಾಮ್​ಪಾಲ್?

‘ಧುರಂಧರ್’ ಯಶಸ್ಸಿನ ಬಳಿಕ ನಟ ಅರ್ಜುನ್ ರಾಮ್​ಪಾಲ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೇ ಒಟಿಟಿ ಕ್ಷೇತ್ರದಲ್ಲೂ ಅವರಿಗೆ ಭರ್ಜರಿ ಬೇಡಿಕೆ ಇದೆ. ಅವರು ನಟಿಸಿರುವ ‘ಬಿಲಿಯನೇರ್’ ವೆಬ್ ಸರಣಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರ ಕಥಾವಸ್ತು ಯಾರಿಗೆ ಸಂಬಂಧಿಸಿದ್ದು ಎಂಬ ಕೌತುಕ ಮೂಡಿದೆ.

ದಾಖಲೆ ಬರೆಯುತ್ತಾ ‘ರಾಮಾಯಣ’? ಬರೋಬ್ಬರಿ 1000 ಕೋಟಿ ರೂಪಾಯಿಗೆ ಒಟಿಟಿ ಬೇಡಿಕೆ

‘ರಾಮಾಯಣ’ ನಿರ್ಮಾಪಕರು 700 ಕೋಟಿ ರೂಪಾಯಿ ಆಫರ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿರ ಕೋಟಿ ರೂಪಾಯಿ ಡೀಲ್ ಮೇಲೆ ಅವರು ಕಣ್ಣು ಇಟ್ಟಿರುವಂತಿದೆ. ಇದೇ ರೀತಿ ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ವಾರಾಣಸಿ’ ಸಿನಿಮಾ ಕೂಡ ಒಟಿಟಿ ವ್ಯವಹಾರದ ಕಾರಣದಿಂದ ಸುದ್ದಿ ಆಗುತ್ತಿದೆ.

ಮಾರ್ಚ್ 19ರಿಂದ ಜೀ5 ಒಟಿಟಿಯಲ್ಲಿ ‘ಲ್ಯಾಂಡ್​ಲಾರ್ಡ್’ ಸಿನಿಮಾ ಪ್ರಸಾರ

ಚಿತ್ರಮಂದಿರಗಳಲ್ಲಿ ಹಿಟ್ ಆದ ‘ಲ್ಯಾಂಡ್​ಲಾರ್ಡ್’ ಸಿನಿಮಾವನ್ನು ಈಗ ಒಟಿಟಿಯಲ್ಲಿ ನೋಡಲು ಸಮಯ ಬಂದಿದೆ. ಹಲವು ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಈ ಚಿತ್ರ ‘ಜೀ5’ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲಿದೆ. ಮಾರ್ಚ್ 19ರಂದು ಯುಗಾದಿ ಹಬ್ಬದ ಪ್ರಯುಕ್ತ ‘ಲ್ಯಾಂಡ್​ಲಾರ್ಡ್’ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಡಲಿದೆ.

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!