Rohini Sindhuri
ರೋಹಿಣಿ ಸಿಂಧೂರಿ ರವರ ಪೂರ್ಣ ಹೆಸರು ರೋಹಿಣಿ ಸಿಂಧೂರಿ ದಾಸರಿ. ಇವರು 1984 ರ ಮೇ 30 ರಂದು ಜನಿಸಿದ್ದಾರೆ. ಅವರ ತಂದೆ ರುದ್ರಾಕ್ಷ ಪಲ್ಲಿ, ಸಾಥುಪಲ್ಲಿ ಮಂಡಲ್. ರೋಹಿಣಿ ಮೂಲತಃ ತೆಲಂಗಾಣ ಖಮ್ಮಂ ಜಿಲ್ಲೆಯವರಾಗಿದ್ದು, ಬಿ.ಟೆಕ್ ಇನ್ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ನಂತರ ರೋಹಿಣಿ ಸಿಂಧೂರಿ 2009ನೇ ಬ್ಯಾಚ್‌ನಲ್ಲಿ 43ನೇ Rank ನಲ್ಲಿ ಯುಪಿಎಸ್‌ಸಿ ಪಾಸ್ ಮಾಡಿ ಪ್ರಸ್ತುತ ಕರ್ನಾಟಕ ಕೇಡರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರೋಹಿಣಿ ಸಿಂಧೂರಿ ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ವಿವಾದಿತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಇವರು ಹಾಸನ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಹೆಚ್ಚು ಸುದ್ದಿಯಲ್ಲಿರುವ ಐಎಎಸ್ ಅಧಿಕಾರಿ ಅಂದರೆ ರೋಹಿಣಿ ಸಿಂಧೂರಿ