AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

stock market

stock market

ಸ್ಟಾಕ್ ಮಾರ್ಕೆಟ್ ಎಂದರೆ ಷೇರುಪೇಟೆ. ಅಥವಾ ಷೇರು ವಿನಿಮಯ ಮಾರುಕಟ್ಟೆ. ಸಾರ್ವಜನಿಕವಾಗಿ ಲಿಸ್ಟ್ ಆಗಿರುವ ಷೇರುಗಳ ಮಾರಾಟ ನಡೆಯುವ ಒಂದು ಪ್ಲಾಟ್​ಫಾರ್ಮ್ ಅಥವಾ ಷೇರು ವಿನಿಮಯ ಕೇಂದ್ರ. ಭಾರತದಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಎಂದು ಎರಡು ಷೇರು ವಿನಿಮಯ ಕೇಂದ್ರಗಳಿವೆ. ಸೆಬಿ ಷೇರು ಮಾರುಕಟ್ಟೆಯ ಕಾನೂನು ನಿಯಂತ್ರಕ ಸಂಸ್ಥೆ. ಭಾರತದಲ್ಲಿಯಂತೆ ಎಲ್ಲಾ ದೇಶಗಳಲ್ಲೂ ಅವುಗಳದ್ದೇ ಆದ ಷೇರು ಮಾರುಕಟ್ಟೆಗಳಿವೆ. ಕಂಪನಿಗಳು ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಿ ಷೇರುಗಳನ್ನು ವಿತರಿಸುತ್ತವೆ. ಇಂಥ ಷೇರುಗಳು ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗುತ್ತವೆ. ಷೇರುಗಳನ್ನು ಹೊಂದಿದವರು ಕಂಪನಿಯ ಪಾಲನ್ನು ಹೊಂದಿದಂತೆ. ಷೇರುದಾರರಿಗೆ ಕಂಪನಿ ತನ್ನ ಲಾಭಾಂಶವನ್ನೂ ಹಂಚಿಕೆ ಮಾಡಬಹುದು. ಇನ್ನು, ಷೇರುಗಳನ್ನು ಲಿಸ್ಟ್​ನಿಂದ ತೆಗೆದುಹಾಕುವ ಅಧಿಕಾರ ಆಯಾ ಸ್ಟಾಕ್ ಎಕ್ಸ್​ಚೇಂಜ್​ಗಳಿಗೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ರಿಸ್ಕಿ ಎನಿಸಿದರೂ ಸರಿಯಾಗಿ ಮಾಹಿತಿ ಪಡೆದು ಇನ್ವೆಸ್ಟ್ ಮಾಡಿದರೆ ಲಾಭ ಮಾಡಲು ಸಾಧ್ಯ. ಭಾರತದ ಷೇರು ಮಾರುಕಟ್ಟೆ ವಿಶ್ವದಲ್ಲೇ ಐದನೇ ಅತಿದೊಡ್ಡದು. 4 ಟ್ರಿಲಿಯನ್ ಡಾಲರ್​ನಷ್ಟು ಷೇರುಸಂಪತ್ತು ಇಲ್ಲಿದೆ.

ಇನ್ನೂ ಹೆಚ್ಚು ಓದಿ

ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ

Aadit Palicha Poised to Be Youngest MD/CEO of a Publicly Listed Company: ಕ್ವಿಕ್ ಕಾಮರ್ಸ್ ದೈತ್ಯ ಝೆಪ್ಟೋದ ಸಹ-ಸ್ಥಾಪಕ ಆದಿತ್ ಪಲಿಚಾ, ತಮ್ಮ 23ನೇ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆದ ಕಂಪನಿಯ ಅತಿ ಕಿರಿಯ MD/CEO ಆಗಲು ಸಿದ್ಧರಾಗಿದ್ದಾರೆ. ಐದು ವರ್ಷಗಳ ಹಿಂದೆ ಸ್ಟ್ಯಾನ್‌ಫೋರ್ಡ್ ತೊರೆದು, 10 ನಿಮಿಷಗಳಲ್ಲಿ ದಿನಸಿ ವಿತರಣೆಯೊಂದಿಗೆ ಝೆಪ್ಟೋ ಆರಂಭಿಸಿದ ಆದಿತ್ ಮತ್ತು ಕೈವಲ್ಯ ವೋಹ್ರಾ, ಈಗ 9,000-10,000 ಕೋಟಿ ರೂ. IPOಗೆ ಮುಂದಾಗಿದ್ದು, ಭಾರತೀಯ ಸ್ಟಾರ್ಟ್‌ಅಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ

India Stock Market Reclaims 6th Spot: ಕಳೆದ ವಾರ AI ಬೂಮ್‌ನಿಂದ ಏರಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾ ಷೇರು ಮಾರುಕಟ್ಟೆಗಳು AI ಕುಸಿತದಿಂದಾಗಿ ಮತ್ತೆ ಇಳಿದಿವೆ. ಇದರ ಪರಿಣಾಮವಾಗಿ ಭಾರತದ ಷೇರು ಮಾರುಕಟ್ಟೆ ಜಾಗತಿಕವಾಗಿ 6ನೇ ಸ್ಥಾನಕ್ಕೆ ಮರಳಿದೆ. ತಂತ್ರಜ್ಞಾನ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ಆ ದೇಶಗಳಿಗಿಂತ, ಭಾರತದ ಬ್ಯಾಂಕಿಂಗ್, ಇಂಧನ, ಐಟಿ, FMCG ಒಳಗೊಂಡ ವೈವಿಧ್ಯಮಯ ಮಾರುಕಟ್ಟೆ ಹೆಚ್ಚು ಸ್ಥಿರವಾಗಿದೆ ಎಂದು ಈ ಬೆಳವಣಿಗೆ ತೋರಿಸಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

Increase in limits for NRI and OCI investors to invest in stock market: ಎನ್‌ಆರ್‌ಐ ಮತ್ತು ಒಸಿಐ ಹೂಡಿಕೆದಾರರು ಸೆಬಿ (SEBI) ನೋಂದಣಿ ಇಲ್ಲದೆಯೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇರುವ ಮಿತಿಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ. ವಿದೇಶಗಳಲ್ಲಿರುವ ಭಾರತ ಮೂಲದ ಜನರಿಂದ ಮಾರುಕಟ್ಟೆಗೆ ಹಣದ ಹರಿವು ಬರಲು ಈಗ ಸುಲಭವಾಗುತ್ತದೆ.

ವಿದೇಶಿ ಹೂಡಿಕೆದಾರರನ್ನು ಮರಳಿ ಆಕರ್ಷಿಸಲು ಸರ್ಕಾರದ ಯತ್ನ; ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಸುಗ್ರೀವಾಜ್ಞೆಗೆ ಅನುಮೋದನೆ

India Offers Tax Relief to FPIs: ಭಾರತದ ಮಾರುಕಟ್ಟೆಯಿಂದ ಸತತವಾಗಿ ಹೊರಬೀಳುತ್ತಿರುವ ವಿದೇಶೀ ಹೂಡಿಕೆದಾರರನ್ನು ಮರಳಿ ಬರುವಂತಾಗಲು ಸರ್ಕಾರ ಶತಪ್ರಯತ್ನ ಹಾಕುತ್ತಿದೆ. ಆ ನಿಟ್ಟಿನಲ್ಲಿ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಯೊಂದನ್ನು ಹೊರಡಿಸಲು ಸರ್ಕಾರ ಅಣಿಗೊಂಡಿದೆ. ಈ ಆರ್ಡಿನೆನ್ಸ್​ಗೆ ಅನುಮೋದನೆ ಕೂಡ ನೀಡಲಾಗಿದೆ.

ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ

India's Market Cap Drops: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಜಾಗತಿಕ ಹೂಡಿಕೆ ಅಲೆಯಿಂದ ದಕ್ಷಿಣ ಕೊರಿಯಾ ಮತ್ತು ತೈವಾನ್ ಷೇರು ಮಾರುಕಟ್ಟೆಗಳು ದಾಖಲೆಯ ಎತ್ತರಕ್ಕೆ ಜಿಗಿದಿವೆ. ಆದರೆ, ಭಾರತವು ಜಾಗತಿಕ ಮಾರುಕಟ್ಟೆ ಬಂಡವಾಳೀಕರಣದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದೆ. ಭಾರತದಲ್ಲಿ ಬೃಹತ್ AI ಕಂಪನಿಗಳ ಕೊರತೆ ಮತ್ತು ಸೆಮಿಕಂಡಕ್ಟರ್ ಉದ್ಯಮದಲ್ಲಿ ಪ್ರಬಲ ಅಸ್ತಿತ್ವ ಇಲ್ಲದಿರುವುದೇ ಈ ಹಿನ್ನಡೆಗೆ ಮುಖ್ಯ ಕಾರಣವಾಗಿದೆ. ವಿದೇಶಿ ಹೂಡಿಕೆದಾರರು AI-ಆಧಾರಿತ ಕಂಪನಿಗಳಿರುವ ದೇಶಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಮಾರುಕಟ್ಟೆ ಕುಸಿದಾಗ ಹೆದರಿಬಿಟ್ಟರೆ ಲಕ್ಷ್ಮೀಕಟಾಕ್ಷ ತಪ್ಪಿ ಹೋದೀತು ಜೋಕೆ..! ಶೆಲ್ಬಿ ಡೇವಿಸ್ ಸಲಹೆ ಕೇಳಿ

Market Crash Investment Strategy: ಷೇರು ಮಾರುಕಟ್ಟೆಯ ಇತ್ತೀಚಿನ ಏರಿಳಿತಗಳು ಹೊಸ ಹೂಡಿಕೆದಾರರನ್ನು ವಿಚಲಿತಗೊಳಿಸಬಹುದು. ಆದರೆ, ಶೆಲ್ಬಿ ಕಲ್ಲಮ್ ಡೇವಿಸ್ ಮತ್ತು ಇತರ ಹೂಡಿಕೆ ತಜ್ಞರ ಪ್ರಕಾರ, 'ಬೇರ್ ಮಾರ್ಕೆಟ್' ಸಂಪತ್ತು ವೃದ್ಧಿಸಲು ಅತ್ಯುತ್ತಮ ಅವಕಾಶ. ಕುಸಿತದ ಸಮಯದಲ್ಲಿ ಗುಣಮಟ್ಟದ ಷೇರುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ, ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಗರಿಷ್ಠ ಲಾಭ ಗಳಿಸಬಹುದು. ಭಾವನಾತ್ಮಕ ಶಿಸ್ತು ಮತ್ತು ದೀರ್ಘಾವಧಿಯ ಬದ್ಧತೆ ನಷ್ಟದ ಸಾಧ್ಯತೆಯನ್ನು ಶೂನ್ಯಕ್ಕೆ ಇಳಿಸುತ್ತದೆ.

ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?

Adani Power Surpasses Infosys Market Cap: ಅದಾನಿ ಪವರ್ ಮಾರುಕಟ್ಟೆ ಮೌಲ್ಯದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಭಾರತದ ಟಾಪ್ 11 ಕಂಪನಿಗಳಲ್ಲಿ ಒಂದಾಗಿದೆ. ಇತ್ತೀಚಿನ ಷೇರು ಜಿಗಿತ, ಉತ್ತಮ ಲಾಭಾಂಶ, ಸಾಲ ಕಡಿತ ಮತ್ತು ಸಾಂಸ್ಥಿಕ ಹೂಡಿಕೆದಾರರ ಒಲವು ಅದಾನಿ ಪವರ್‌ಗೆ ಶಕ್ತಿ ತುಂಬಿದೆ. ಜಾಗತಿಕ ಐಟಿ ಮಂದಗತಿಯಿಂದ ಇನ್ಫೋಸಿಸ್ ಹಿನ್ನಡೆ ಅನುಭವಿಸಿದ್ದು, ಅದಾನಿ ಪವರ್‌ಗೆ ಮುನ್ನಡೆ ಸಿಕ್ಕಿದೆ. ಇಂಧನ ವಲಯಕ್ಕೆ ಸರ್ಕಾರದ ಉತ್ತೇಜನದಿಂದ ಅದಾನಿ ಪವರ್ ಭವಿಷ್ಯ ಉಜ್ವಲ.

ಭರವಸೆ ಮೂಡಿಸಿದ ಅಮೆರಿಕ-ಇರಾನ್ ಡೀಲ್; ಗರಿಗೆದರಿದ ಷೇರುಬಜಾರು

Stock market rising today: ಭಾರತದ ಷೇರುಬಜಾರಿನ ನಿಫ್ಟಿ, ಸೆನ್ಸೆಕ್ಸ್ ಮೊದಲಾದ ಪ್ರಮುಖ ಸೂಚ್ಯಂಕಗಳು ಸೋಮವಾರ ಹಸಿರುಬಣ್ಣದಲ್ಲಿವೆ. ಬಹಳ ಏರುಪೇರು ಕಾಣುತ್ತಿರುವ ಮಾರುಕಟ್ಟೆಯಲ್ಲಿ ಈಗ ಉತ್ಸಾಹ ಕಂಡು ಬಂದಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ಒಪ್ಪಂದ ಏರ್ಪಡುವ ಸಾಧ್ಯತೆ ಇರುವುದು ಮಾರುಕಟ್ಟೆ ಚೇತರಿಕೆಗೆ ಇರುವ ಪ್ರಮುಖ ಕಾರಣಗಳಲ್ಲಿ ಒಂದೆನ್ನಲಾಗಿದೆ.

ನಮ್ಮ ನಿಮ್ಮ ಎಸ್​ಐಪಿಗಳು ವಿದೇಶೀ ಹೂಡಿಕೆದಾರರಿಗೆ ಆಹಾರವಾಗುತ್ತಿವೆಯಾ? ಜೆಫರೀಸ್ ಏಜೆನ್ಸಿ ಬಿಚ್ಚಿಟ್ಟಿದೆ ಘೋರ ಸತ್ಯ

Jefferies Explains How Record SIP Inflows Are Linked To FPI Exit And Rupee Weakness: ಭಾರತದ ಆರ್ಥಿಕತೆ ಮತ್ತು ಹಣಕಾಸು ಸ್ಥಿತಿಯಲ್ಲಿ ಸಂಚಲನ ಮೂಡಿಸಿರುವ ಕೆಲ ಪ್ರಮುಖ ಸಂಗತಿಗಳಲ್ಲಿ ಎಫ್​ಪಿಐಗಳ ನಿರ್ಗಮನ ಹಾಗು ರುಪಾಯಿ ಮೌಲ್ಯ ಕುಸಿತಗಳು ಸೇರಿವೆ. ಇವೆರಡು ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಅದು ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳಂತೆ. ಹಾಗಂತ ಬ್ರೋಕರೇಜ್ ಏಜೆನ್ಸಿಯಾದ ಜೆಫರೀಸ್ ಹೇಳಿದೆ.

ಅನಗತ್ಯ ಹೂಡಿಕೆಗಳ ಮೂಲಕ ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರಿ ಜೋಕೆ; ಗಮನಿಸಬೇಕಾದ ಸಂಗತಿಗಳಿವು

Investment Success: ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳದಿರುವ ಕಲೆ ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಅತಿ ಮುಖ್ಯ. ರಾಜೀವ್ ಠಕ್ಕರ್, ಎಸ್. ನರೇನ್ ಸಲಹೆಗಳ ಪ್ರಕಾರ, ಬಂಡವಾಳ ರಕ್ಷಣೆ, ಆಸ್ತಿ ಹಂಚಿಕೆ, ತುರ್ತು ನಿಧಿ ನಿರ್ವಹಣೆ ಮತ್ತು ಅನಗತ್ಯ ಟ್ರೇಡಿಂಗ್ ತಪ್ಪಿಸುವುದು ಯಶಸ್ವಿ ಹೂಡಿಕೆಗೆ ನಿರ್ಣಾಯಕ. ಮಾರುಕಟ್ಟೆಯ ಏರಿಳಿತದಿಂದ ಹಣವನ್ನು ರಕ್ಷಿಸಿ, ಶಿಸ್ತುಬದ್ಧ ಹೂಡಿಕೆಯ ಮೂಲಕ ಸ್ಥಿರ ಸಂಪತ್ತು ನಿರ್ಮಿಸಿ.

ಮೆಲೋನಿಗೆ ಮೋದಿಯಿಂದ ಚಾಕೊಲೇಟ್ ಗಿಫ್ಟ್; ಆದರೆ, ಷೇರುಬೆಲೆ ಹೆಚ್ಚಿದ್ದು ರಿಯಲ್ ಎಸ್ಟೇಟ್ ಕಂಪನಿಯದ್ದು; ಯಾಕೆ?

Melody trends as Modi gifts toffee to Meloni: ಮೆಲೋನಿ, ಮೋದಿ ಮತ್ತು ಮೆಲೋಡಿ ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿರುವ ಪದಗಳು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯಲ್ಲಿ ಅಲ್ಲಿಯ ಪಿಎಂ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಚಾಕೊಲೇಟ್ ಪ್ಯಾಕ್ ಅನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಅದರ ವಿಡಿಯೋವನ್ನು ಮೆಲೋನಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ರಿಯಲ್ ಎಸ್ಟೇಟ್ ಕಂಪನಿಯೊಂದರ ಷೇರುಬೆಲೆ ಹೆಚ್ಚತೊಡಗಿತ್ತು.

ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

Bharti Airtel briefly overtakes HDFC bank in largest market cap: ಬಲವಾದ ತ್ರೈಮಾಸಿಕ ಫಲಿತಾಂಶ ಹಾಗೂ ಷೇರುಗಳ ಸತತ 4 ದಿನಗಳ ಏರಿಕೆಯ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ಸಂಸ್ಥೆಯು ₹11.78 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಅನ್ನು ಹಿಂದಿಕ್ಕಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ನಂತರ ದೇಶದ ಎರಡನೇ ಅತ್ಯಂತ ದೊಡ್ಡ ಮೌಲ್ಯಯುತ ಪಟ್ಟಿಮಾಡಲ್ಪಟ್ಟ ಕಂಪನಿಯಾಗಿ ಭಾರ್ತಿ ಏರ್‌ಟೆಲ್ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.

‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!