2 ವರ್ಷಗಳಿಂದ ಟೆಂಟ್​ನಲ್ಲೇ ಮಲಗುತ್ತಿರುವ 12 ವರ್ಷದ ಬಾಲಕ ಸಂಗ್ರಹಿಸಿದ್ದು ಬರೋಬ್ಬರಿ 6 ಕೋಟಿ ರೂ! ಏನಿದರ ಉದ್ದೇಶ?

Max Woosey: ಲ್ಲೊಬ್ಬ ಬಾಲಕ ಬರೋಬ್ಬರಿ 2 ವರ್ಷ ಟೆಂಟ್​ನಲ್ಲಿಯೇ ನಿದ್ರಿಸಿದ್ದಾನೆ. ಅವನ ವಯಸ್ಸು ಕೇವಲ 12 ವರ್ಷ. ಅವನ ನಿರ್ಧಾರಕ್ಕೇನು ಕಾರಣ? ಇಲ್ಲಿದೆ ಕುತೂಹಲಕರ ಸ್ಟೋರಿ.

2 ವರ್ಷಗಳಿಂದ ಟೆಂಟ್​ನಲ್ಲೇ ಮಲಗುತ್ತಿರುವ 12 ವರ್ಷದ ಬಾಲಕ ಸಂಗ್ರಹಿಸಿದ್ದು ಬರೋಬ್ಬರಿ 6 ಕೋಟಿ ರೂ! ಏನಿದರ ಉದ್ದೇಶ?
ಮ್ಯಾಕ್ಸ್ ವೂಸಿ ಕಳೆದ ಎರಡು ವರ್ಷಗಳಿಂದ ಟೆಂಟ್‌ನಲ್ಲಿ ಉಳಿಯುತ್ತಿದ್ದಾರೆ. (Image: Woosey family)
Follow us
TV9 Web
| Updated By: shivaprasad.hs

Updated on:Mar 27, 2022 | 10:17 AM

ಯಾವುದೇ ಸೌಕರ್ಯವಿಲ್ಲದೇ ಪ್ರತಿ ದಿನವೂ ಟೆಂಟ್​ನಲ್ಲಿ ನಿದ್ರಿಸುವುದನ್ನು ಕಲ್ಪಿಸಿಕೊಳ್ಳಿ. ಎಂತಹ ಸಾಹಸಿಗರೂ ಪ್ರತಿ ದಿನವೂ ಹಾಗೆ ಮಲಗಿಕೊಳ್ಳಬೇಕು ಎಂದು ಎರಡೆರಡು ಬಾರಿ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ಬರೋಬ್ಬರಿ 2 ವರ್ಷ ಟೆಂಟ್​ನಲ್ಲಿಯೇ ನಿದ್ರಿಸಿದ್ದಾನೆ. ಅವನ ವಯಸ್ಸು ಕೇವಲ 12 ವರ್ಷ. ಕಳೆದ ಎರಡು ವರ್ಷಗಳಿಂದ ಟೆಂಟ್​ನಲ್ಲಿಯೇ ಮಲಗುತ್ತಿದ್ದ ಈ ಪುಟ್ಟ ಹುಡುಗ ಬಹುದೊಡ್ಡ ಮೊತ್ತದ ದೇಣಿಗೆಯನ್ನೂ ಸಂಗ್ರಹಿಸಿದ್ದಾನೆ. ಏನಿದು ಘಟನೆ? ಟೆಂಟ್​ನಲ್ಲಿ ಮಲಗಿ ದೇಣಿಗೆ ಸಂಗ್ರಹಿಸಿದ್ದೇಕೆ? ಹೀಗೆಲ್ಲಾ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಎಲ್ಲವಕ್ಕೂ ಉತ್ತರ ಇಲ್ಲಿದೆ. ಬ್ರಿಟನ್​ನ ಈ ಬಾಲಕನ ಹೆಸರು ಮ್ಯಾಕ್ಸ್ ವೂಸಿ. ಡೆವೊನ್ ಮೂಲದ ಮ್ಯಾಕ್ಸ್, ಟೆಂಟ್​ನಲ್ಲಿ ಮಲಗಲು ಆರಂಭಿಸಿದ್ದು 2020ರಲ್ಲಿ. ಅವರ ಈ ನಿರ್ಧಾರಕ್ಕೆ ಕಾರಣ, ವಯೋವೃದ್ಧರನ್ನು ನೋಡಿಕೊಳ್ಳುವ ಧರ್ಮಶಾಲೆಯೊಂದಕ್ಕೆ ದೇಣಿಗೆ ಸಂಗ್ರಹಿಸುವುದಾಗಿತ್ತು. ಲಂಡನ್ ಮೃಗಾಲಯ, ಡೌನಿಂಗ್ ಸ್ಟ್ರೀಟ್ ಮತ್ತು ಟ್ವಿಕೆನ್‌ಹ್ಯಾಮ್ ರಗ್ಬಿ ಸ್ಟೇಡಿಯಂನಂತಹ ಹಲವು ಖ್ಯಾತ ಸ್ಥಳಗಳಲ್ಲಿ ಮ್ಯಾಕ್ಸ್ ದಿನ ಕಳೆದಿದ್ದಾರೆ.

2 ವರ್ಷದ ನಂತರ ಸಂಗ್ರಹವಾದ ದೇಣಿಗೆ ಎಷ್ಟು?

ಮ್ಯಾಕ್ಸ್ ತಮ್ಮ 2 ವರ್ಷದ ಅಭಿಯಾನದಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಿದ್ದಾರೆ. ಬರೋಬ್ಬರಿ 7,00,000 ಯೂರೋ ಗೂ ಅಧಿಕ ಹಣವನ್ನು ಮ್ಯಾಕ್ಸ್ ಸಂಗ್ರಹಿಸಿದ್ದಾರೆ. ಅರ್ಥಾತ್ ಭಾರತೀಯ ಕರೆನ್ಸಿಯಲ್ಲಿ ಸುಮಾರು 5.8 ಕೋಟಿ ರೂಗಳನ್ನು ಮ್ಯಾಕ್ಸ್ ಸಂಗ್ರಹಿಸಿದ್ದಾರೆ. ಉತ್ತರ ಡಿವೋನ್​ನ ವೃದ್ಧಾಶ್ರಮಕ್ಕೆ ಈ ದೇಣಿಗೆಯನ್ನು ಅವರು ನೀಡಲಿದ್ದು, ಪ್ರಸ್ತುತ ಅಭಿಯಾನವನ್ನು ಮುಕ್ತಾಯಗೊಳಿಸಲು ಮ್ಯಾಕ್ಸ್ ಮುಂದಾಗಿದ್ದಾರೆ. ವರದಿಗಳ ಪ್ರಕಾರ ಮ್ಯಾಕ್ಸ್ ವೂಸಿ ಸಂಗ್ರಹಿಸಿದ ಹಣ ಏನಿಲ್ಲವೆಂದರೂ ವೃದ್ಧಾಶ್ರಮ ನೋಡಿಕೊಳ್ಳುವ 20 ದಾದಿಯರ ವಾರ್ಷಿಕ ನಿರ್ವಹಣೆಗೆ ಬೇಕಾದಷ್ಟಾಗಿದೆ.

ಈ ಅಭಿಯಾನದ ಬಗ್ಗೆ ಮಾತನಾಡಿದ ಮ್ಯಾಕ್ಸ್, ಇದೊಂದು ಕನಸಿನಂತೆ ಎಂದಿದ್ದಾರೆ. ಹಲವು ಅದ್ಭುತ ಜನರನ್ನು ಭೇಟಿಯಾಗಿದ್ದೇನೆ. ಹಲವು ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಇದೆಲ್ಲವೂ ಸುಂದರ ಕ್ಷಣಗಳು ಎಂದಿದ್ದಾರೆ ಮ್ಯಾಕ್ಸ್. ‘‘ಹೊರಾಂಗಣದಲ್ಲಿ ಎರಡು ವರ್ಷಗಳಿಂದ ಮಲಗಿ ಮಲಗಿ, ಈಗ ಹಾಸಿಗೆಯಲ್ಲಿ ಮಲಗುವುದು ಹೇಗೆಂದು ತೋಚುತ್ತಿಲ್ಲ’’ ಎಂದಿದ್ದಾರೆ ಅವರು.

ಈ ದೀರ್ಘ ಅಭಿಯಾನವು ದೊಡ್ಡ ಮಟ್ಟದ ದೇಣಿಗೆ ಸಂಗ್ರಹಕ್ಕೆ ಕಾರಣವಾಗಿರುವುದಷ್ಟೇ ಅಲ್ಲ; ಮ್ಯಾಕ್ಸ್​ಗೆ ಬ್ರಿಟಿಷ್ ಸಾಮ್ರಾಜ್ಯದ ಪದಕವೂ ಲಭ್ಯವಾಗಿದೆ. ವರದಿಗಳ ಪ್ರಕಾರ ಮ್ಯಾಕ್ಸ್ ಕುಟುಂಬದವರು ಅಭಿಯಾನ ನಿಲ್ಲಿಸಲು ಹಲವು ಬಾರಿ ಪ್ರಯತ್ನಪಟ್ಟಿದ್ದರಂತೆ. ಆದರೆ ಅದ್ಯಾವುದಕ್ಕೂ ಮ್ಯಾಕ್ಸ್ ಒಪ್ಪಿಗೆ ಸೂಚಿಸಿರಲಿಲ್ಲ.

ಕೇವಲ ಮನೆಯ ಹಿಂದಿನ ಗಾರ್ಡನ್​ನಲ್ಲಿ ಟೆಂಟ್​ನಲ್ಲಿ ಉಳಿಯುವ ಯೋಜನೆಯೊಂದಿಗೆ ಆರಂಭವಾದ ಮ್ಯಾಕ್ಸ್ ಪಯಣ 14 ವಿವಿಧ ಸ್ಥಳಗಳಿಗೆ ಸ್ಥಳಾಂತರಗೊಂಡಿತ್ತು. ಆರು ತಿಂಗಳೇ ದೀರ್ಘವಾಯಿತು ಎಂದ ಮನೆಯವರು ನಂತರ ಮ್ಯಾಕ್ಸ್ ನಿರ್ಧಾರಕ್ಕೆ ಸಮ್ಮತಿ ಸೂಚಿಸಲೇಬೇಕಾಯಿತು.

‘‘ವೃದ್ಧಾಶ್ರಮಕ್ಕೆ ಮ್ಯಾಕ್ಸ್ ಸಂಗ್ರಹಿಸಿದ ಹಣ ಅಲ್ಲಿ ದೊಡ್ಡ ಬದಲಾವಣೆ ತರಲಿದೆ ನಿಜ. ಆದರೆ ವೈಯಕ್ತಿಕವಾಗಿ ಮ್ಯಾಕ್ಸ್ ಇದರಿಂದ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಿದ್ದಾನೆ. ಇದು ಅವನ ಭವಿಷ್ಯಕ್ಕೆ ಪೂರಕವಾಗಲಿದೆ’’ ಎಂದಿದ್ದಾರೆ ಮ್ಯಾಕ್ಸ್ ತಾಯಿ. ಸಣ್ಣ ವಯಸ್ಸಿನಲ್ಲೇ ದೊಡ್ಡ ಕನಸನ್ನು ಹೊಂದಿ ವಿಶೇಷ ಕಾರ್ಯ ಮಾಡಿದ ಮ್ಯಾಕ್ಸ್​​ ಕತೆ ಈಗ ವೈರಲ್ ಆಗಿದ್ದು, ನೆಟ್ಟಿಗರು ಭೇಷ್ ಎಂದಿದ್ದಾರೆ.

ಇದನ್ನೂ ಓದಿ:

Mann Ki Baat: 11 ಗಂಟೆಗೆ ನರೇಂದ್ರ ಮೋದಿ ಮನ್​ ಕಿ ಬಾತ್ ಭಾಷಣ: ವಿಧಾನಸಭೆ ಚುನಾವಣೆಗಳ ಗೆಲುವಿನ ಹರ್ಷದಲ್ಲಿ ಮೋದಿ ಮಾತು

ದಿಗ್ವಿಜಯ್ ಸಿಂಗ್​ಗೆ 1 ವರ್ಷ ಜೈಲು ಶಿಕ್ಷೆ ಘೋಷಿಸಿ ಬಳಿಕ ಜಾಮೀನು ನೀಡಿದ ಇಂದೋರ್ ನ್ಯಾಯಾಲಯ; ಏನಿದು ಪ್ರಕರಣ?

Published On - 10:00 am, Sun, 27 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ