Viral: 2BHK ಮನೆ, ಸಿಂಪಲ್​​ ಲೈಫ್, ನಿವೃತ್ತಿ ವೇಳೆಗೆ 4.7 ಕೋಟಿ ರೂ ಸಂಪಾದನೆ

ಸಿಂಪಲ್​​​ ಲೈಫ್ ಎನ್ನುವವರನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಆದರೆ ಈ ಸಿಂಪಲ್​​ ಜೀವನದ ಹಿಂದೆ ದೊಡ್ಡ ಮೊತ್ತ ಇರುತ್ತದೆ ಎನ್ನುವುದು, ಈ ಸ್ಟೋರಿಯಲ್ಲಿ ತೋರಿಸುತ್ತದೆ ನೋಡಿ. ಒಬ್ಬ ಸಿಂಪಲ್​​ ವ್ಯಕ್ತಿ ಇಷ್ಟೊಂದು ಗಳಿಸಲು ಸಾಧ್ಯವೇ ಎಂದು ಅಚ್ಚರಿ ಪಡುವುದು ಖಂಡಿತ, ಹೌದು ಇಲ್ಲೊಂದು ಪೋಸ್ಟ್​​​ ಸಖತ್​​ ವೈರಲ್​​ ಆಗಿದೆ. ಸಿಂಪಲ್​​​ ಜೀವನದಿಂದ ಕೋಟಿ ಕೋಟಿ ಗಳಿಸಿದ್ದಾರೆ.

Viral: 2BHK ಮನೆ, ಸಿಂಪಲ್​​ ಲೈಫ್, ನಿವೃತ್ತಿ ವೇಳೆಗೆ 4.7 ಕೋಟಿ ರೂ ಸಂಪಾದನೆ
ಸಾಂದರ್ಭಿಕ ಚಿತ್ರ

Updated on: Jul 11, 2025 | 4:59 PM

ಕೆಲವೊಂದು ವ್ಯಕ್ತಿಗಳ ಸಿಂಪಲ್​​​ ಜೀವನಶೈಲಿಯನ್ನು (Systematic Investment Plan) ನೋಡಿ, ಇವರು ತುಂಬಾ ಬಡ ವ್ಯಕ್ತಿ, ಇವರ ಬಳಿ ಏನು ಎಲ್ಲ ಎಂಬ ನಿರ್ಧಾರಕ್ಕೆ ಬರುತ್ತೇವೆ. ಅದಕ್ಕೆ ಯಾರನ್ನು ಕೂಡ ಅವರ ಬಟ್ಟೆ, ಅವರ ನಡುವಳಿಕೆಯಿಂದ ವ್ಯಕ್ತಿತ್ವ ನಿರ್ಧಾರ ಮಾಡಬಾರದು ಎಂದು ಹಿರಿಯರು ಹೇಳಿರುವ ಮಾತು. ಕೆಲವು ವ್ಯಕ್ತಿಗಳೇ ಹಾಗೆ ನೋಡಲು ತುಂಬಾ ಸಿಂಪಲ್​​ ಆಗಿರುತ್ತಾರೆ. ಆದರೆ ಅವರು ಗಳಿಸಿದನ್ನು ನೋಡಿದ್ರೆ ಖಂಡಿತ ಅಚ್ಚರಿಯಾಗುತ್ತದೆ. ಇದೀಗ ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ಟೋರಿ ವೈರಲ್​​ ಆಗಿದೆ. ಸಿಂಪಲ್​​ ಆಗಿರುವ ವ್ಯಕ್ತಿ ಕೋಟಿ ಕೋಟಿ ಸಂಪತ್ತನ್ನು ಹೊಂದಿರುವ ಕಥೆಯೊಂದು ವೈರಲ್​ ಆಗಿದೆ. ಕೈತುಂಬಾ ಸಂಬಳ ಪಡೆಯುತ್ತಿದ್ದ ವ್ಯಕ್ತಿ 45ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ದಾಗ  4.7 ಕೋಟಿ ರೂ ಸಂಪತ್ತನ್ನು ಸದ್ದಿಲ್ಲದೆ ಗಳಿಸಿದ್ದಾರೆ. ಈ ಸುದ್ದಿಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಈ ಪೋಸ್ಟ್‌ನ್ನು ರೆಡ್ಡಿಟ್ ಬಳಕೆದಾರ @u/CAGRGuy ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್​​ನಲ್ಲಿ ತನ್ನ ಚಿಕ್ಕಪ್ಪ 45ನೇ ವಯಸ್ಸಿಗೆ  4.7 ಕೋಟಿ ರೂ ಸಂಪಾದಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಚಿಕ್ಕಪ್ಪ ತುಂಬಾ ಸರಳ ಜೀವನವನ್ನು ಹೊಂದಿದ್ದರು. 30 ವರ್ಷಗಳ ಕಾಲ ಅದೇ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು, ಸ್ಕೂಟರ್ ಓಡಿಸುತ್ತಿದ್ದರು ಮತ್ತು ವಿರಳವಾಗಿ ರಜೆಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಜೀವನದಲ್ಲಿ ಯಾವುದೇ ಸ್ವಂತ ವ್ಯಾಪಾರ, ಷೇರುಗಳಲ್ಲಿ ಹೂಡಿಕೆ ಮಾಡಿಲ್ಲ ಎಂದುಕೊಂಡಿದ್ದೆ. ಹಣದಿಂದ ಯಾವುದೇ ದೊಡ್ಡ ಮಟ್ಟದ ಕೆಲಸಗಳನ್ನು ಅವರು ಮಾಡಿಲ್ಲ ಎಂಬುದು ನನ್ನ ಭಾವನೆಯಾಗಿತ್ತು. ಏಕೈಕ ಆದಾಯವೆಂದರೆ ಸ್ಥಿರ, ನಿಯಮಿತ ಕೆಲಸ ಅಷ್ಟೇ ಎಂದುಕೊಂಡಿದ್ದೆ.

ಇದನ್ನೂ ಓದಿ: ಟ್ರಾಫಿಕ್ ಜಾಮ್ ನಡುವೆ ಸಮಯವನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬೆಂಗಳೂರಿನ ಉದ್ಯಮಿ

ಇದನ್ನೂ ಓದಿ
ನಡುರಸ್ತೆಯಲ್ಲೇ ತಂದೆ ಮಗನ ಹೊಡೆದಾಟ
ಪತ್ನಿಯನ್ನು ಹೊಗಳಿದ್ದನ್ನು ನೋಡಿ ಕೆಫೆ ಸಿಬ್ಬಂದಿ ಮೇಲೆ ಗರಂ ಆದ ಪತಿ
7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ
ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಆನೆ : ಎರಡು ಗಂಟೆ ಸ್ಥಗಿತಗೊಂಡ ರೈಲು

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ

He retired at 45 with ₹4.7 crore.
byu/CAGRGuy inIndianStockMarket

ಆದರೆ ಅವರು  1998ರಲ್ಲಿ ಮ್ಯೂಚುವಲ್ ಫಂಡ್‌ಗೆ ₹ 10,000 ಹಾಕಲು ಶುರು ಮಾಡಿದ್ದಾರೆ. ನಂತರ, ಅವರು  500 ರೂ  SIP (ವ್ಯವಸ್ಥಿತ ಹೂಡಿಕೆ ಯೋಜನೆ) ಪ್ರಾರಂಭಿಸಿದರು.ಅವರ ಸಂಬಳ ಹೆಚ್ಚಾದಾಗಲೆಲ್ಲಾ ಅವರು ಇದನ್ನು ಹೆಚ್ಚಿಸಿದ್ದಾರೆ. ಮೊದಲು  1,000 ರೂ, ನಂತರದಲ್ಲಿ 2,000 ರೂ , ತದನಂತರದಲ್ಲಿ  5,000 ರೂ ಹೂಡಿಕೆ ಮಾಡಿದ್ದಾರೆ. 45 ನೇ ವಯಸ್ಸಿನಲ್ಲಿ ನಿವೃತ್ತರಾದಾಗ ತಮ್ಮ ಪಾಸ್‌ಬುಕ್ ಮತ್ತು CAMS ನಿಂದ ಮುದ್ರಿಸಿದ ಹಾಳೆ ನೀಡಿದ್ದಾರೆ. ಅದರಲ್ಲಿದ್ದ ಮೊತ್ತ ನೋಡಿ ನನಗೆ ಶಾಕ್​​​ ಆಗಿತ್ತು, ಅದರಲ್ಲಿದ್ದ ಒಟ್ಟು ಮೊತ್ತ 4.7 ಕೋಟಿ ರೂ.ಈ ಪೋಸ್ಟ್​ ನೋಡಿ ಅನೇಕರು ಕಾಮೆಂಟ್​​ ಮಾಡಿ. 9 ಸಾವಿರದ ವರೆಗೆ ಈ ಪೋಸ್ಟ್​​ಗೆ ಕಾಮೆಂಟ್​​ ಹಾಗೂ ಲೈಕ್ ಬಂದಿದೆ. ಸರಳ ಅಭ್ಯಾಸಗಳು ಹೇಗೆ ದೊಡ್ಡ ಫಲಿತಾಂಶಗಳಿಗೆ ಕಾರಣವಾಗಬಹುದು ಎಂಬುದಕ್ಕೆ ಇದು ಉದಾಹರಣೆ ಎಂದು ಕಾಮೆಂಟ್​​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Fri, 11 July 25