Video: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ ಮರಿಯಾನೆ

ಕಾಡಿನಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರ ವಾಹನವನ್ನು ಕಾಡಾನೆಗಳು ಬೆನ್ನಟ್ಟುವ ಘಟನೆಗಳ ಬಗ್ಗೆ ನೀವು ಆಗಾಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಮರಿಯಾನೆ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಲು ಪ್ರಯತ್ನಿಸಿದ್ದು, ಈ ಮರಿಯಾನೆಯ ಮುದ್ದಾದ ವರ್ತನೆ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

 Video: ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಗತ್ತಿನಿಂದಲೇ ಹೆದರಿಸಿ ಓಡಿಸಲು ಪ್ರಯತ್ನಿಸಿದ  ಮರಿಯಾನೆ
ವೈರಲ್‌ ವಿಡಿಯೋ
Image Credit source: Instagram

Updated on: Aug 10, 2026 | 11:02 AM

ಮರಿಯಾನೆಗಳು (baby elephant) ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲಲ್ಲ.. ಇದೀಗ ಮರಿಯಾನೆ ತನ್ನ ಜತೆಗೆ ಅಮ್ಮ ಇದ್ದಾಳೆ ಅನ್ನೋ ಧೈರ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸಿದೆ. ಈ ಮರಿಯಾನೆಯ ಕ್ಯೂಟ್ ರಿಯಾಕ್ಷನ್ ಕಂಡು ವಾಹನದಲ್ಲಿದ್ದ ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜೋಡಿ ಫಾರ್ಡ್ (Jodi Ford) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಹೆದರಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡಬಹುದು. ಹಿಂಬದಿ ತಾಯಾನೆ ಇರುವ ಧೈರ್ಯದಲ್ಲಿ ಮುಂದಕ್ಕೆ ಓಡೋಡಿ ಬಂದು ತಲೆ ಅಲ್ಲಾಡಿಸುತ್ತ ಪ್ರವಾಸಿಗರನ್ನು ಹೆದರಿಸಿದೆ.  ಆದರೆ ಈ ಮರಿಯಾನೆ ಕ್ಯೂಟ್ ನೆಸ್‌ಗೆ ಪ್ರವಾಸಿಗರು ಫುಲ್ ಫಿದಾ ಆಗಿದ್ದು, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: Video: ತೊಟ್ಟಿಯಲ್ಲಿದ್ದ ನೀರು ಕುಡಿಯಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ಬೀಳದಂತೆ ತಡೆದ ತಾಯಾನೆ

ಈ ವಿಡಿಯೋ ಇದುವರೆಗೆ 17 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಪುಟಾಣಿ ಮರಿಯಾನೆ ಅಮ್ಮ ಇದ್ದಾಳೆ ಎನ್ನುವ ಧೈರ್ಯ ಎಂದಿದ್ದಾರೆ. ಇನ್ನೊಬ್ಬರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಟ್ಯಾಕ್ 99 ಪೆರ್ಸೆಂಟ್, ಡ್ಯಾಮೇಜ್ 1 ಪರ್ಸೆಂಟ್ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us