Video: ತಾಯಿಯ ಹಿಂದೆ ಓಡುತ್ತಾ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ

ಪುಟಾಣಿ ಆನೆಗಳು ಏನು ಮಾಡಿದ್ರು ಮುದ್ದಾಗಿ ಕಾಣಿಸುತ್ತವೆ. ಅವುಗಳ ತುಂಟಾಟಗಳು ಕಣ್ಣಿಗೆ ಖುಷಿ ಕೊಡುತ್ತವೆ. ಸೋಶಿಯಲ್‌ ಮೀಡಿಯಾದಲ್ಲಿ ಇಂತಹ ದೃಶ್ಯಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ತಾಯಿಯ ಹಿಂದೆ ಓಡಿದ ಮರಿಯಾನೆಯೊಂದು ಮುಗ್ಗರಿಸಿ ಬಿದ್ದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯವು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ತಾಯಿಯ ಹಿಂದೆ ಓಡುತ್ತಾ ಮುಗ್ಗರಿಸಿ ಬಿದ್ದ ಮರಿಯಾನೆ, ವೈರಲ್‌ ಆಯ್ತು ದೃಶ್ಯ
ವೈರಲ್‌ ವಿಡಿಯೋ
Image Credit source: Instagram

Updated on: Sep 20, 2026 | 12:04 PM

ಆನೆಗಳ (elephant) ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ಇದೀಗ ಆನೆಯೊಂದು ತನ್ನ ಕ್ಯೂಟ್ ನೆಸ್ ಹಾಗೂ ತುಂಟಾಟದಿಂದಲೇ ಎಲ್ಲರ ಗಮನ ಸೆಳೆದಿದೆ. ಪುಟಾಣಿ ಆನೆಯೊಂದು ತನ್ನ ತಾಯಿಯ ಹಿಂದೆ ಓಡಿ ಹೋಗಿದೆ. ಇದೇ ವೇಳೆ ಮುಗ್ಗರಿಸಿ ಬಿದ್ದು ಎಡವಟ್ಟು ಮಾಡಿಕೊಂಡಿದೆ. ಈ ಪುಟಾಣಿ ಆನೆ ಬಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಗ್ಗರಿಸಿ ಬಿದ್ದ ಮರಿಯಾನೆ

ವೈಲ್ಡ್ ರೆಸ್ಕ್ಯೂ ಹೀರೋಸ್ (Wild Rescue Heroes) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ  ತಾಯಾನೆ ಹಿಂದೆ ಮರಿಯಾನೆ ಓಡಿ ಹೋಗಿದೆ. ಇದೇ ವೇಳೆ ಕೆಳಗೆ ಇದ್ದ ಮರದ ತುಂಡು ಕಾಲಿಗೆ ತಗುಲಿ ಪುಟಾಣಿ ಆನೆ ಮುಗ್ಗರಿಸಿ ಬಿದ್ದಿದೆ. ಈ ಮರಿಯಾನೆ ಮತ್ತೆ ಎದ್ದುಕೊಂಡು ತಾಯಾನೆಯತ್ತ ಓಡಿಕೊಂಡು ಹೋಗುವ ದೃಶ್ಯವನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಎದ್ದು ನಿಲ್ಲಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ಸಾಥ್ ನೀಡಿದ ತಾಯಾನೆ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ಆದ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ಬಿದ್ರು ಎದ್ರು ಅಮ್ಮನ ಹಿಂದೆ ಹೋಗೋದು ಮಾತ್ರ ಬಿಡಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಷ್ಟು ಮುದ್ದಾಗಿದೆ ಈ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us