10ನೇ ತರಗತಿ ವರೆಗೆ ಶಿಕ್ಷಣ, 4 ಸಾವಿರ ಸಂಬಳ, 25 ವರ್ಷದಲ್ಲಿ 1 ಕೋಟಿ ರೂ. ಉಳಿಸಿದ ಬೆಂಗಳೂರಿನ ವ್ಯಕ್ತಿ

ಸಮಾಜದಲ್ಲಿ ಒಂದು ಗೌರವ ಇರಬೇಕಾದರೆ ಹಣ ಬೇಕು. ಅದನ್ನು ಸಂಪಾದನೆ ಮಾಡಬೇಕಾದರೆ ಒಳ್ಳೆಯ ಮಾರ್ಗಗಳು ಇರಬೇಕು. ಸಂಪಾದನೆಯಿಂದಲ್ಲೇ ಹಣ ಮಾಡಬಹುದು ಎಂಬುದಕ್ಕೆ ಅನೇಕ ಉದಾಹಣೆಗಳೂ ಇದೆ. ಅದೇ ರೀತಿ ಅತ್ಯಂತ ಕಡಿಮೆ ಸಂಬಳದಲ್ಲಿಯೂ ಹೆಚ್ಚು ಉಳಿತಾಯವನ್ನು ಮಾಡಬಹುದು ಎಂಬುದನ್ನು ಈ ವ್ಯಕ್ತಿಯಿಂದ ನೋಡಬಹುದು.

10ನೇ ತರಗತಿ ವರೆಗೆ ಶಿಕ್ಷಣ, 4 ಸಾವಿರ ಸಂಬಳ, 25 ವರ್ಷದಲ್ಲಿ 1 ಕೋಟಿ ರೂ. ಉಳಿಸಿದ ಬೆಂಗಳೂರಿನ ವ್ಯಕ್ತಿ
ಸಾಂದರ್ಭಿಕ ಚಿತ್ರ
Updated By: ಮಾಲಾಶ್ರೀ ಅಂಚನ್​

Updated on: Sep 03, 2025 | 11:19 AM

ಸಾಧನೆ ಮಾಡಲು ಅಥವಾ ಹಣ ಸಂಪಾದಿಸಲು (financial discipline) ಒಂದು ಶ್ರಮ ಹಾಗೂ ಛಲ ಮಾತ್ರ ಮುಖ್ಯವಾಗಿರುತ್ತದೆ. ಅದಕ್ಕೆ ಶಿಕ್ಷಣದ ಅಗತ್ಯ ಇಲ್ಲ, ಸಂಪಾದನೆ ಮಾಡಲು ಬುದ್ದವಂತಿಕೆ ಹಾಗೂ ಶ್ರಮ ಅಗತ್ಯವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ತನ್ನ 53 ವರ್ಷದಲ್ಲಿ ಆರ್ಥಿಕ ಸಂಪಾದನೆ (passive income) ಬಗ್ಗೆ ಶಿಸ್ತಿನಲ್ಲಿ ನಡೆಸಿಕೊಂಡು ಬಂದ ಕಥೆಯನ್ನು  ರೆಡ್ಡಿಟ್‌ನಲ್ಲಿ ಶೇರ್‌ ಮಾಡಲಾಗಿದ್ದು, ಇದೀಗ ಈ ಸ್ಟೋರಿಯನ್ನು ಅನೇಕ ಯುವಕರಿಗೆ ಸ್ಫೂರ್ತಿಯಾಗಿದೆ. ವ್ಯಕ್ತಿಯೊಬ್ಬರು 10ನೇ ತರಗತಿಯಲ್ಲಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, 4,200 ಸಂಬಳದಲ್ಲಿ ವೃತ್ತಿಯನ್ನು ಆರಂಭಿಸಿದ, ಸಾಲ, ಕ್ರೆಡಿಟ್ ಕಾರ್ಡ್‌ಗಳು ಅಥವಾ ಐಷಾರಾಮಿ ಜೀವನಶೈಲಿಯಿಲ್ಲದೆಯೇ 25 ವರ್ಷಗಳಲ್ಲಿ ₹ 1 ಕೋಟಿ ಉಳಿಸುವಲ್ಲಿ ಜೀವನದಲ್ಲಿ ದೊಡ್ಡ ಮೊತ್ತವನ್ನು ಸಂಪಾದಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 1 ಕೋಟಿ ಸಂಪಾದನೆಗೆ ನನಗೆ 25 ವರ್ಷಗಳು ಬೇಕಾಯಿತು ಎಂಬ ಬಗ್ಗೆ ಈ ಪೋಸ್ಟ್​​​​​ನಲ್ಲಿ ಬರೆದುಕೊಂಡಿದ್ದಾರೆ. 2000 ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ತಮ್ಮ ವೃತ್ತಿಜೀವನವನ್ನು ಕೇವಲ ₹ 5,000 ಆರಂಭಿಸಿದ್ದಾರೆ. ಇವರಿಗೆ ಮೊದಲ ಸಂಬಳ 4,200ರೂ ಆಗಿತ್ತು. 25 ವರ್ಷಗಳ ನಿರಂತರ ಪ್ರಯತ್ನ ಮತ್ತು ಉಳಿತಾಯದಿಂದ 1.01 ಕೋಟಿ ಬ್ಯಾಂಕ್ ಠೇವಣಿ ಮತ್ತು ₹ 65,000 ಈಕ್ವಿಟಿಯನ್ನು ಸಂಗ್ರಹಿಸಿದ್ದಾರೆ. ಯಾವುದೇ ಸಾಲ ಪಡೆಯದೆ. ಕ್ರೆಡಿಟ್ ಕಾರ್ಡ್ ಕೂಡ ಉಪಯೋಗಿಸದೇ ಇಷ್ಟೊಂದು ಹಣವನ್ನು ಉಳಿತಾಯ ಮಾಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​

Reached a (major) milestone — 1 Crore, took me 25 years
byu/srikavig inpersonalfinanceindia

ಇದನ್ನೂ ಓದಿ
ಕೇರಳದ ಮಕ್ಕಳೊಂದಿಗೆ ಮಲಯಾಳಂ ಮಾತನಾಡಿ ಬೆರಗು ಮೂಡಿಸಿದ ಪೋಲಿಷ್ ಮಹಿಳೆ
ಈಗಷ್ಟೇ ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ
ಹೆರಿಗೆ ನೋವಿನಲ್ಲೂ ಹೆಂಡ್ತಿ ಮೊಗದಲ್ಲಿ ನಗು ಮೂಡಿಸಿದ ಪತಿ
ಸತ್ತು ಹೋದ ಆನೆಯ ತಲೆಬುರುಡೆಯನ್ನು ಕಂಡು ರೋಧಿಸಿದ ಹೆಣ್ಣಾನೆ

ನಾನು ಮೂಲತಃ ದಕ್ಷಿಣ ಭಾರತದ ಒಂದು ಸಣ್ಣ ಹಳ್ಳಿಯಿಂದ ಬಂದಿದ್ದೇನೆ. ಸ್ವಂತವಾಗಿ ಇಂಗ್ಲಿಷ್ ವ್ಯಾಕರಣ ಕಲಿತೆ, ನಂತರ 2000ದಲ್ಲಿ ಬೆಂಗಳೂರಿಗೆ ಬಂದೆ. ನನಗೆ 27 ವರ್ಷ ವಯಸ್ಸಾಗಿತ್ತು ಮತ್ತು ನನ್ನ ಜೇಬಿನಲ್ಲಿ 5 ಸಾವಿರ ಇತ್ತು. ನಾನು ಮತ್ತೊಂದು ನನ್ನ ಹೆತ್ತವರ ಬಳಿ ಹಣವನ್ನು ಹಾಗೂ ಯಾವುದೇ ಸಹಾಯವನ್ನು ಕೇಳಲಿಲ್ಲ. ನಾವು ತುಂಬಾ ಬಡವರಾಗಿದ್ದೆವು. ನನ್ನ ಮೊದಲ ಸಂಬಳ ಸುಮಾರು 4,200 ರೂಪಾಯಿ. ಕೊನೆಯದಾಗಿ ನನಗೆ ಸಿಗುವ ಸಂಬಳ ಸುಮಾರು 63 ಸಾವಿರ ರೂಪಾಯಿ ಎಂದು ವ್ಯಕ್ತಿ ಬರೆದುಕೊಂಡಿದ್ದಾರೆ. ಇಷ್ಟು ವರ್ಷದ ಜೀವದಲ್ಲಿ ಒಂದು ಕಾರು ತೆಗೆದುಕೊಂಡಿಲ್ಲ. ಯಾರ ಮುಂದೆಯೂ ಹಣಕ್ಕಾಗಿ ಅಥವಾ ಕಷ್ಟ ಎಂದು ಕೈ ಚಾಚಿಲ್ಲ. ಜೀವನದಲ್ಲಿ ಎಲ್ಲ ಮಿತವ್ಯಯವಾಗಿರಬೇಕು ಎಂಬುದಕ್ಕೆ ಇವರು ಉದಾಹರಣೆಯಾಗಿದ್ದಾರೆ.

ಇದನ್ನೂ ಓದಿ: ಕೇರಳದ ಮಕ್ಕಳೊಂದಿಗೆ ಮಲಯಾಳಂ ಮಾತನಾಡಿ ಬೆರಗು ಮೂಡಿಸಿದ ಪೋಲಿಷ್ ಮಹಿಳೆ

ನಮ್ಮ ಪೂರ್ವಜರ ಮನೆ ಹಳ್ಳಿಯಲ್ಲಿದ್ದು, ನಮ್ಮ ಜೀವನದುದ್ದಕ್ಕೂ ನಾವು ಅಲ್ಲಿಯೇ ವಾಸಿಸುತ್ತೇವೆ. ಸಹಾಯಕ್ಕಾಗಿ ಯಾರೂ ಇಲ್ಲದ ಕಾರಣ ನಾವು ಯಾವಾಗಲೂ ತುಂಬಾ ಮಿತವ್ಯಯದಿಂದ ಇದ್ದೇವೆ. ಅದೃಷ್ಟವಶಾತ್ ನಮಗೆ ಎಂದಿಗೂ ದೊಡ್ಡ ಕಾಯಿಲೆ ಅಥವಾ ಕಷ್ಟಗಳು ಬಂದಿಲ್ಲ. ನಮ್ಮ ಆರೋಗ್ಯವನ್ನು ನೋಡಿಕೊಳ್ಳುವಲ್ಲಿ ತುಂಬಾ ಕಾಳಜಿಯನ್ನು ವಹಿಸಿದ್ದೇವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದೇವು. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್​​ ಬಗ್ಗೆ ಭಾರೀ ಚರ್ಚೆಗಳು ನಡೆದಿದೆ. ನನ್ನ ಪೀಳಿಗೆಯ ಜನರಲ್ಲಿ ಅಗತ್ಯಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಾಗ ಭಯ ಹುಟ್ಟಿಸುವ ಮತ್ತು ಸ್ಪಷ್ಟತೆಯ ಕೊರತೆಯ ನಡುವೆ, ನಿಮ್ಮ ಪೋಸ್ಟ್ ತುಂಬಾ ತೂಕವಾಗಿದೆ ಎಂದು ಒಬ್ಬರು ಕಾಮೆಂಟ್​​ ಮಾಡಿದ್ದಾರೆ, ಇನ್ನೊಬ್ಬ ಬಳಕೆದಾರ ನಿಮ್ಮ ಈ ಕೆಲಸಕ್ಕೆ ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ!! ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಬೇರೆ ಯಾವುದಕ್ಕಾದರೂ ಖರ್ಚು ಮಾಡುವುದಕ್ಕಿಂತ ಈಗಿರುವ ಒಂದು ಕೋಟಿಯಿಂದ ನಿಮ್ಮ ಮುಂದಿನ ಒಂದು ಕೋಟಿ ಗಳಿಸುವುದು ಸುಲಭ ಎಂಬುದನ್ನು ಯಾವಾಗಲೂ ನೆನಪಿಡಿ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ